ಮಸಾಲೆಭರಿತವಾದ ಆಲೂಗಡ್ಡೆ, ಬಟಾಣಿ, ಈರುಳ್ಳಿ, ಪನೀರ್, ಸೌತೆಕಾಯಿ ಮೊದಲಾವುಗಳನ್ನು ಸ್ಟಫಿಂಗ್ ಮಾಡಿ ಸಮೋಸಾ ತಯಾರಿಸಲಾಗುತ್ತದೆ. ತ್ರಿಕೋನಾಕಾರದಲ್ಲಿರುವ ಈ ತಿಂಡಿ ಭಾರತೀಯರ ನೆಚ್ಚಿನ ಟೀ ಸ್ನ್ಯಾಕ್ಸ್ ಆಗಿದೆ.
Image credits: Image: Freepik
ಪಿಜ್ಜಾ
ಬರ್ತ್‌ಡೇ ಇರ್ಲಿ, ಗೆಟ್ ಟು ಟುಗೆದರ್, ಪ್ರಮೋಶನ್ ಏನೇ ಆಗಿರ್ಲಿ. ಎಲ್ಲವೂ ಒಂದು ನೆಪವಷ್ಟೆ. ಅಲ್ಲಿ ಪಿಜ್ಜಾ ಅಂತೂ ಬೇಕೇ ಬೇಕು. ತರಕಾರಿ, ಚೀಸ್, ಚಿಲ್ಲಿ ಫ್ಲೇಕ್ಸ್ ಮೊದಲಾದವುಗಳನ್ನು ಸೇರಿಸಿ ತಯಾರಿಸಿಸುತ್ತಾರೆ.
Image credits: Image: Freepik
ಮಂಚೂರಿಯನ್
ಸಂಜೆಯಾದ್ರೆ ಖಾರ ಖಾರವಾಗಿ ಮಂಚೂರಿಯನ್ ಸವಿಯಲು ಚೆನ್ನಾಗಿರುತ್ತೆ. ಗೋಬಿ ಮಂಚೂರಿಯನ್, ಆಲೂ ಮಂಚೂರಿಯನ್, ಮಶ್ರೂಮ್ ಮಂಚೂರಿಯನ್ ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, ಸವಿಯಲು ಸಖತ್ತಾಗಿರುತ್ತೆ.
Image credits: Image: Freepik
ಫ್ರೆಂಚ್ ಫ್ರೈಸ್
ಫ್ರೈ ಮಾಡಿದ ಆಲೂಗಡ್ಡೆಅಥವಾ ಫ್ರೆಂಚ್ ಫ್ರೈಸ್‌ನ್ನು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಸಂಜೆಯ ಟೀ ಜೊತೆಗೆ ಇದು ಅತ್ಯುತ್ತಮ ಕಾಂಬಿನೇಶನ್ ಆಗಿದೆ.
Image credits: Image: Freepik
ಬರ್ಗರ್
ಹಲವು ತರಕಾರಿ, ಚೀಸ್ ಸೇರಿಸಿ ಬನ್‌ನಲ್ಲಿಟ್ಟು ಕೊಡೋ ಬರ್ಗರ್ ಹಲವರ ಪಾಲಿಗೆ ಸೂಪರ್ ಫುಡ್. ಹಸಿವಾದಾಗ ಒಂದು ಬರ್ಗರ್ ತಿಂದರೆ ಸಾಕು ಹೊಟ್ಟೆ ಫುಲ್. ಹೀಗಾಗಿಯೇ ಇದಕ್ಕೆ ಎಲ್ಲೆಡೆ ಸಖತ್ ಡಿಮ್ಯಾಂಡ್ ಇದೆ.
Image credits: Image: Freepik
ಪಕೋಡಾ
ಬಿಸಿ ಬಿಸಿ ಟೀ ಜೊತೆ ಪಕೋಡಾ ಇಲ್ಲಾಂದ್ರೆ ಆಗುತ್ತಾ. ಅದರಲ್ಲೂ ಭಾರತದಲ್ಲಿ ಪಕೋಡಾ, ಟೀಯಿಲ್ಲದ ದಿನಗಳೇ ಇಲ್ಲ. ಜನರು ಈರುಳ್ಳಿ, ಮೆಣಸಿನಕಾಯಿ, ಕ್ಯಾಪ್ಸಿಕಂ, ಕಾರ್ನ್ ಮೊದಲಾದವುಗಳ ಬಜ್ಜಿ ಮಾಡಿ ಸವಿಯುತ್ತಾರೆ.