Food
ಇಂದು ನಟ ಸಲ್ಮಾನ್ ಖಾನ್ ಬರ್ತ್‌ಡೇ ನೀವು ಕೂಡ ಸಲ್ಮಾನ್ ಖಾನ್ ರೀತಿ ಶೀರ್ ಖುರ್ಮಾ ಇಷ್ಟಪಡುವವರಾದರೆ ಅದನ್ನು ಸುಲಭವಾಗಿ ತಯಾರಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಶೀರ್ ಖುರ್ಮಾ ತಯಾರಿಸಲು ಬಾದಾಮಿ, ಗೋಡಂಬಿ, ಪಿಸ್ತಾ, ಒಣದ್ರಾಕ್ಷಿಗಳಂತಹ ಒಣ ಹಣ್ಣುಗಳನ್ನು ನೀರಿನಲ್ಲಿ ನೆನೆಸಿ ನುಣ್ಣಗೆ ಕತ್ತರಿಸಿ.
ಒಂದು ಪಾತ್ರೆಯಲ್ಲಿ ತುಪ್ಪ ಹಾಕಿ ಕತ್ತರಿಸಿದ ಒಣ ಹಣ್ಣುಗಳನ್ನು ಹುರಿಯಿರಿ. ಇನ್ನೊಂದು ಪಾತ್ರೆಯಲ್ಲಿ 1 ಕಪ್ ವರ್ಮಿಸೆಲ್ಲಿ(ಒಣ ಸ್ಯಾವಿಗೆ)ಯನ್ನು ಹುರಿಯಿರಿ.
1 ಲೀಟರ್ ಹಾಲನ್ನು ಕುದಿಸಿ ಅರ್ಧ ಮಾಡಿ. ರುಚಿ ಹೆಚ್ಚಿಸಲು ಕಂಡೆನ್ಸ್ಡ್ ಹಾಲು ಬೆರೆಸಿ. ಸಕ್ಕರೆ ಸೇರಿಸಿ.
ಹಾಲಿಗೆ ವರ್ಮಿಸೆಲ್ಲಿ ಅಥವಾ ಶ್ಯಾವಿಗೆ ಸೇರಿಸಿ ಮತ್ತು ಒಣ ಹಣ್ಣುಗಳನ್ನು ಸೇರಿಸಿ. ರುಚಿ ಹೆಚ್ಚಿಸಲು ಏಲಕ್ಕಿ ಪುಡಿ ಸೇರಿಸಿ.
ಶೀರ್ ಖುರ್ಮಾಗೆ ಹಳದಿ ಬಣ್ಣ ಬೇಕೆಂದರೆ ಕೇಸರಿ ಬಳಸಿ. ಶೀಘ್ರದಲ್ಲೇ ರುಚಿಕರವಾದ ಶೀರ್ ಖುರ್ಮಾ ರೆಡಿ, ಈಗ ಬೌಲ್‌ಗಳಿಗೆ ಹಾಕಿ ಸರ್ವ್ ಮಾಡಿ
ರಮ್ ಕುಡಿಯುತ್ತಾ ಜೊತೆಗೆ ತಿನ್ನಬಾರದ 5 ಆಹಾರಗಳಿವು
ಬೆಳಗಿನ ಉಪಹಾರ ಸೇವಿಸಲು ಸೂಕ್ತ ಸಮಯ ಯಾವುದು?
ಸಕ್ಕರೆ ಹಾಕದೇ ರುಚಿಕರವಾಗಿ ಗಜ್ಜರಿ/ಕ್ಯಾರೆಟ್ ಹಲ್ವಾ ಮಾಡಿ ಇಲ್ಲಿದೆ ರೆಸಿಪಿ
ಮಲ್ಲಿಗೆಯಂತೆ ಸಾಫ್ಟ್ ಆಗಿ ಇಡ್ಲಿ ಮಾಡೋ ಸಿಂಪಲ್ ಟಿಪ್ಸ್