1/2 ಕಪ್ ಪನೀರ್, 1/2 ಕಪ್ ಬೇಯಿಸಿದ ತರಕಾರಿಗಳು (ಶಿಮ್ಲಾ ಮಿರ್ಚಿ, ಕ್ಯಾರೆಟ್, ಹಸಿರು ಮೆಣಸಿನಕಾಯಿ), 1 ಟೀಸ್ಪೂನ್ ಶೇಂಗಾ ಪುಡಿ, ಉಪ್ಪು, 1/2 ಟೀಸ್ಪೂನ್ ಮೆಣಸು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು.
ಹೀಗೆ ಮಾಡಿ
ಸಬ್ಬಕ್ಕಿಯನ್ನು 2-4 ಗಂಟೆ ನೆನೆಸಿಟ್ಟುಕೊಳ್ಳಿ. ಸಬ್ಬಕ್ಕಿಯನ್ನು ಚೆನ್ನಾಗಿ ಮೃದುಗೊಳಿಸಿ, ಅದರಲ್ಲಿ ಬೇಯಿಸಿದ ಆಲೂಗಡ್ಡೆ, ಅಕ್ಕಿ ಹಿಟ್ಟು, ಉಪ್ಪು, ಕರಿಮೆಣಸು, ಜೀರಿಗೆ ಪುಡಿ ಹಾಕಿ ನುಣ್ಣಗೆ ಹಿಟ್ಟಿನಂತೆ ಮಾಡಿ.
ಸ್ಟಫಿಂಗ್ ಸಿದ್ಧಪಡಿಸಿಕೊಳ್ಳಿ
ಮೆತ್ತಗೆ ಮಾಡಿದ ಪನೀರ್‌ನಲ್ಲಿ ಸಣ್ಣಗೆ ಹೆಚ್ಚಿದ ತರಕಾರಿಗಳು, ಶೇಂಗಾ ಪುಡಿ, ಉಪ್ಪು, ಕರಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ.
ಮೊಮೊಸ್ ತಯಾರಿಸಿ
ಸಬ್ಬಕ್ಕಿ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ, ಕೈಯಿಂದ ಸ್ವಲ್ಪ ಒತ್ತಿ. ಈಗ ಅದರಲ್ಲಿ ಸ್ಟಫಿಂಗ್ ಹಾಕಿ ಮೊಮೊಸ್ ಆಕಾರದಲ್ಲಿ ಮಾಡಿ ಅಂಚುಗಳನ್ನು ಚೆನ್ನಾಗಿ ಮುಚ್ಚಿ.
ಹಬೆಯಲ್ಲಿ ಬೇಯಿಸಿ ಅಥವಾ ಹುರಿಯಿರಿ
ಮೊಮೊಸ್‌ನ್ನು 10-12 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ ಅಥವಾ ತುಪ್ಪದಲ್ಲಿ ಸ್ವಲ್ಪ ಗರಿಗರಿಯಾಗುವವರೆಗೆ ಹುರಿಯಿರಿ.
ಮೊಮೊಸ್ ಬಡಿಸಿ
ಸಬ್ಬಕ್ಕಿ ಮೊಮೊಸ್‌ನ್ನು ಕೊತ್ತಂಬರಿ-ಪುದೀನಾ ಚಟ್ನಿ ಅಥವಾ ಮೊಸರಿನೊಂದಿಗೆ ಸವಿಯಬಹುದು. ಟೊಮೆಟೋ ಸಾಸ್ ಚೆನ್ನಾಗಿರುತ್ತದೆ.