Food

ಮೃದುವಾದ ಪ್ಯಾನ್‌ಕೇಕ್‌ ರೆಸಿಪಿ

ಬೆಳಗಿನ ಉಪಾಹಾರಕ್ಕೆ ಮಕ್ಕಳು ಪ್ಯಾನ್‌ಕೇಕನ್ನು ತುಂಬಾ ಇಷ್ಟಪಡುತ್ತಾರೆ. ಸುಲಭವಾದ ಮತ್ತು ಮೃದುವಾದ ಪ್ಯಾನ್‌ಕೇಕ್‌ಗಳನ್ನು ತಯಾರಿಸುವ ಪರಿಪೂರ್ಣ ಪಾಕವಿಧಾನ ಇಲ್ಲಿದೆ.

ಪ್ಯಾನ್‌ಕೇಕ್ ತಯಾರಿಸಲು ಬೇಕಾದ ಸಾಮಗ್ರಿಗಳು

ಮೈದಾ 1ಕಪ್, ಸಕ್ಕರೆ-1ಟೇಬಲ್‌ಸ್ಪೂನ್, ಬೇಕಿಂಗ್ ಪೌಡರ್-1ಟೀಸ್ಪೂನ್, ಬೇಕಿಂಗ್ ಸೋಡಾ-1/2 ಟೀಸ್ಪೂನ್, ಉಪ್ಪು-1/4 ಟೀಸ್ಪೂನ್, ಹಾಲು-3/4 ಕಪ್, ಮೊಟ್ಟೆ-1, 

ತಯಾರಿಸುವ ವಿಧಾನ: ಹಂತ-1

ಬೆಣ್ಣೆ ಅಥವಾ ತುಪ್ಪ-3ಟೇಬಲ್‌ಸ್ಪೂನ್, ವೆನಿಲ್ಲಾ ಎಕ್ಸ್‌ಟ್ರಾಕ್ಟ್-1 ಟೀಸ್ಪೂನ್

ಮೊದಲಿಗೆ ದೊಡ್ಡಬಟ್ಟಲಲ್ಲಿ ಮೈದಾ, ಸಕ್ಕರೆ, ಬೇಕಿಂಗ್ ಸೋಡಾ, ಉಪ್ಪು, ಬೇಕಿಂಗ್ ಪೌಡರ್ ಅನ್ನು ಚೆನ್ನಾಗಿ ಜರಡಿ ಹಿಡಿದು ಮಿಶ್ರ ಮಾಡಿ.

ಹಂತ-2

ಇನ್ನೊಂದು ಬಟ್ಟಲಿನಲ್ಲಿ ಮೊಟ್ಟೆ, ಹಾಲು, ಕರಗಿದ ಬೆಣ್ಣೆ ಮತ್ತು ವೆನಿಲ್ಲಾ ಎಕ್ಸ್‌ಟ್ರಾಕ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಹಂತ -3

ಮೈದಾ ಮಿಶ್ರಣಕ್ಕೆ ಹಾಲಿನ ಮಿಶ್ರಣವನ್ನು ನಿಧಾನವಾಗಿ ಸೇರಿಸಿ. ಹೆಚ್ಚು ಕಲಕಬೇಡಿ; ಲಘುವಾಗಿ ಮಿಶ್ರಣವಾದಾಗ ನಿಲ್ಲಿಸಿ, ಇದರಿಂದ ಹಿಟ್ಟು ಮೃದುವಾಗಿರುತ್ತದೆ.

ಹಂತ-4

ನಾನ್‌ಸ್ಟಿಕ್ ತವಾ ಅಥವಾ ಪ್ಯಾನ್ ಅನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಸ್ವಲ್ಪ ಬೆಣ್ಣೆ ಅಥವಾ ಎಣ್ಣೆ ಹಚ್ಚಿ.

ಹಂತ-5

ತವಾದ ಮೇಲೆ 1 ದೊಡ್ಡ ಚಮಚ ಹಿಟ್ಟನ್ನು ಹಾಕಿ, ವೃತ್ತಾಕಾರದಲ್ಲಿ ಹರಡಿ. ನಿಧಾನ ಉರಿಯಲ್ಲಿ ಬೇಯಿಸಿ. ಹಿಟ್ಟಿನ ಮೇಲೆ ಗುಳ್ಳೆಗಳು ಕಾಣಿಸಿಕೊಂಡು ಅಂಚುಗಳು ತಿಳಿ ಕಂದು ಬಣ್ಣಕ್ಕೆ ತಿರುಗಿದಾಗ, ತಿರುವಿ ಹಾಕಿ. 

ಹಂತ-6

ಬಿಸಿ ಪ್ಯಾನ್‌ಕೇಕ್‌ಗಳನ್ನು ಬೆಣ್ಣೆ, ಜೇನುತುಪ್ಪ ಅಥವಾ ಮೇಪಲ್ ಸಿರಪ್‌ನೊಂದಿಗೆ ನೀಡಿ. ನೀವು ಬಯಸಿದರೆ ತಾಜಾ ಹಣ್ಣುಗಳು ಅಥವಾ ಚಾಕೊಲೇಟ್ ಸಿರಪ್‌ನೊಂದಿಗೆ ಇದನ್ನು ತಿನ್ನಬಹುದು.

ಅತಿಯಾದ್ರೆ ಜೇನು ಕೂಡ ವಿಷ; ಹೆಚ್ಚು ಸೇವಿಸಿದ್ರೆ ಏನಾಗುತ್ತೆ?

ಲೆಮನ್ ಟೀ ಕುಡಿದ್ರೆ ತೂಕ ಇಳಿಯುತ್ತಾ? ಯಾರು ಕುಡೀಬಾರದು?

ಡೈರಿ ಹಾಲು ಅಲರ್ಜಿಯೇ ಚಿಂತೆ ಬೇಡ,ಇವುಗಳನ್ನ ಕುಡಿದರೂ ಹಾಲಿನಷ್ಟೇ ರುಚಿಕರ!

ಈ ಐದು ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನೇಲೇಬಾರದು