Food
ಇತ್ತೀಚಿನ ದಿನಗಳಲ್ಲಿ ನೆಮ್ಮದಿ ನಿದ್ದೆಯೂ ದುಬಾರಿಯಾಗಿದೆ. ಅನೇಕರು ರಾತ್ರಿ ನಿದ್ದೆಯಿಲ್ಲದೆ ಚಡಪಡಿಸುತ್ತಾರೆ. ಅದಕ್ಕೆ ಕಾರಣವೆಂದರೆ ಮಾನಸಿಕ ಒತ್ತಡ ಮತ್ತು ನಮ್ಮ ಜೀವನಶೈಲಿ ಆಹಾರ ಪದ್ಧತಿ.
ಊಟ ಬಲ್ಲವನಿಗೆ ರೋಗವಿಲ್ಲ ಅನ್ನೋ ಮಾತು ಕೇಳಿದ್ದೀರಿ, ಯಾವಾಗ ಎಷ್ಟು ಪ್ರಮಾಣ ಆಹಾರ ಸೇವಿಸಬೇಕು ಎಂಬುದು ಮುಖ್ಯ. ರಾತ್ರಿ ಊಟ ಎಂಟು ಗಂಟೆ ಮೊದಲು ಮುಗಿಸಲು ಪ್ರಯತ್ನಿಸಬೇಕು ಎಂದು ತಜ್ಞರು ಹೇಳುತ್ತಾರೆ.
ರಾತ್ರಿ ಊಟಕ್ಕೆ ಯಾವಾಗಲೂ ಲಘು ಆಹಾರವಾಗಿರಬೇಕು. ಲಘು ಆಹಾರ ಸುಲಭವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ.
ರಾತ್ರಿಯಲ್ಲಿ ಹೆಚ್ಚು ಆಹಾರ ಸೇವಿಸುವುದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುವುದಲ್ಲದೆ ನಿದ್ರಾಹೀನತೆಗೂ ಕಾರಣವಾಗುತ್ತದೆ.
ರಾತ್ರಿಯಲ್ಲಿ ಕೆಫೀನ್ ಸೇವಿಸುವುದು ನಿದ್ರಾಹೀನತೆಗೆ ಕಾರಣವಾಗುತ್ತದೆ. ಕಾಫಿ, ಟೀ, ಶೀತಲ ಪಾನೀಯಗಳನ್ನು ತ್ಯಜಿಸಿ.
ಖಾರ ಆಹಾರಗಳನ್ನು ರಾತ್ರಿಯಲ್ಲಿ ತ್ಯಜಿಸಿ. ಇವು ಎದೆಯುರಿ ಮತ್ತು ಅಜೀರ್ಣಕ್ಕೆ ಕಾರಣವಾಗಬಹುದು.
ಫಾಸ್ಟ್ ಫುಡ್, ಕರಿದ ಆಹಾರಗಳನ್ನು ರಾತ್ರಿ ವೇಳೆ ಬೇಡವೇ ಬೇಡ. ಇವು ನಿಮ್ಮನ್ನು ನಿದ್ದೆಗೆಡುವಂತೆ ಮಾಡುತ್ತವೆ.
ಕುಕೀಸ್, ಕೇಕ್‌ಗಳು, ಐಸ್‌ಕ್ರೀಮ್‌ಗಳಂತಹ ಸಿಹಿ ತಿಂಡಿಗಳನ್ನು ರಾತ್ರಿಯಲ್ಲಿ ಸೇವಿಸಬೇಡಿ. ಇವು ತೂಕ ಹೆಚ್ಚಿಸಲು ಕಾರಣವಾಗಬಹುದು.
ಚೀಸ್, ಬರ್ಗರ್‌ಗಳು, ಪಿಜ್ಜಾಗಳಂತಹ ಆಹಾರಗಳನ್ನು ಮೊದಲು ತ್ಯಜಿಸಿಬಿಡಿ, ನಾಲಗೆಗೆ ರುಚಿಕರವೆನಿಸಿದರೂ ಆರೋಗ್ಯ ದೃಷ್ಟಿಯಿಂದ ಸೇವನೆ ಒಳ್ಳೆಯದಲ್ಲ.