Food

ಬಿಸಿಯಾದ ಪುರಿಗೆ ಹಳ್ಳಿಶೈಲಿಯ ಚಟ್ನಿ

Image credits: Youtube Video Clip

ಉತ್ತರ ಕರ್ನಾಟಕದ ಫೇಮಸ್ ಚಟ್ನಿ ಇದಾಗಿದೆ.

Image credits: Youtube Video Clip

ಇದನ್ನು ಬೆಟಗೇರಿ ಚಟ್ನಿ ಅಂತಾನೂ ಕರೆಯಲಾಗುತ್ತದೆ.

Image credits: Youtube Video Clip

ಚಟ್ನಿ ಮಾಡಲು ಬೇಕಾಗುವ ಸಾಮಾಗ್ರಿಗಳು

ದೊಡ್ಡ ಈರುಳ್ಳಿ: 2, ಹುರಿಗಡಲೆ: 100 ಗ್ರಾಂ, ಹಸಿಮೆಣಸಿನಕಾಯಿ: 2, ಕರೀಬೇವು: 5 ಎಲೆ, ಸಕ್ಕರೆ: 4 ಟೀ ಸ್ಪೂನ್, ಸಾಸವೆ-ಜೀರಿಗೆ: 1/2 ಟೀ ಸ್ಪೂನ್, ಎಣ್ಣೆ: 2 ಟೀ ಸ್ಪೂನ್, ಕೋತಂಬರಿ & ಉಪ್ಪು ರುಚಿಗೆ ತಕ್ಕಷ್ಟು, 

Image credits: Youtube Video Clip

ಚಟ್ನಿ ಮಾಡುವ ವಿಧಾನ


ಮೊದಲು ಹುರಿಗಡಲೆಯನ್ನು ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಿ. ಹಾಗೆ ಸಕ್ಕರೆಯನ್ನು ಸಹ ಪುಡಿ ಮಾಡಿಕೊಳ್ಳಬೇಕು.

Image credits: Youtube Video Clip

ಒಗ್ಗರಣೆ

ಈಗ ಒಲೆ ಆನ್ ಮಾಡ್ಕೊಂಡು ಪಾತ್ರೆ ಇರಿಸಿ ಎಣ್ಣೆ ಬಿಸಿಯಾಗುತ್ತಿದ್ದಂತೆ  ಸಾಸವೆ, ಜೀರಿಗೆ, ಕರೀಬೇವು ಸೇರಿಸಿಕೊಳ್ಳಿ. 

Image credits: Youtube Video Clip

ಪುರಿ ಚಟ್ನಿ

ಆ ಬಳಿಕ ಸಣ್ಣದಾಗಿ ಕತ್ತರಿಸಿಕೊಂಡಿರುವ ಈರುಳ್ಳಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಹುರಿಗಡಲೆ ಮತ್ತು ಸಕ್ಕರೆಪುಡಿ ಸೇರಿಸಬೇಕು. ಈಗ ಇದಕ್ಕೆ ಒಂದು ಲೋಟದಷ್ಟು ನೀರು ಸೇರಿಸಿ 4ರಿಂದ5 ನಿಮಿಷ ಕುದಿಸಿ. 

Image credits: Facebook

ಪುರಿ ಚಟ್ನಿ

ಕೊನೆಯದಾಗಿ ಒಲೆ ಆಫ್ ಮಾಡಿ, ಕೋತ್ತಂಬರಿ ಸೊಪ್ಪು ಸೇರಿಸಿದರೆ ಚಟ್ನಿಯಲು ಸವಿಯಲು ಸಿದ್ಧ.

Image credits: Facebook

ರುಚಿ ರುಚಿಯಾದ ಕರ್ಜಿಕಾಯಿ ಮಾಡೋದು ಹೇಗೆ? ಇಲ್ಲಿದೆ ಪಾಕ ವಿಧಾನ

ಸೇವೈ ಮತ್ತು ಶೀರ್ ಖುರ್ಮಾ ಒಂದೇ ರೀತಿ ಇದೆಯೇ? ವ್ಯತ್ಯಾಸ ತಿಳಿಯಿರಿ

ಉತ್ತಮ ಆರೋಗ್ಯಕ್ಕಾಗಿ ಮಹಿಳೆಯರು ತಿನ್ನಲೇಬೇಕಾದ 5 ಆಹಾರಗಳು!

ನಿಮ್ಮ ಆರೋಗ್ಯದ ರಾಮರಕ್ಷೆ ಕುಂಬಳಕಾಯಿ ಬೀಜ!