Food
ಅಂಗಡಿಯಿಂದ ಮಾಂಸ ಖರೀದಿಸುವಾಗ ಬಹುತೇಕರು ಕೋಳಿ ಕಾಲನ್ನು ಖರೀದಿಸುವುದೇ ಇಲ್ಲ.
ಸಾಮಾನ್ಯವಾಗಿ ನಾವು ಕೋಳಿ ಮಾಂಸವನ್ನು ಇಷ್ಟಪಟ್ಟು ತಿನ್ನುವಷ್ಟು ಕೋಳಿ ಕಾಲುಗಳನ್ನು ತಿನ್ನುವುದಿಲ್ಲ.
ಕಾರಣ, ಅದರಲ್ಲಿ ಮಾಂಸ ಇರುವುದಿಲ್ಲ. ಮೂಳೆ ಮಾತ್ರ ಇರುತ್ತದೆ. ಅದನ್ನು ಕಚ್ಚಿ ತಿನ್ನುವುದನ್ನು ಹಲವರು ಇಷ್ಟಪಡುವುದಿಲ್ಲ.
ಕೆಲವರು ಕೋಳಿ ಕಾಲುಗಳನ್ನು ಡೀಪ್ ಫ್ರೈ ಅಥವಾ ಸೂಪ್ ಮಾಡಿ ಕುಡಿಯುತ್ತಾರೆ. ಹಲವರು ಬೇಡ ಎಂದು ಬಿಡುವ ಈ ಕೋಳಿ ಕಾಲಿನಲ್ಲಿ ಹಲವು ಪೋಷಕಾಂಶಗಳಿವೆ ಎಂದು ನಿಮಗೆ ತಿಳಿದಿದೆಯೇ?
ಕೋಳಿ ಕಾಲುಗಳಲ್ಲಿ ಸಾಕಷ್ಟು ಕೊಲಾಜೆನ್ ಇದೆ. ಇದು ನಿಮ್ಮ ಮೊಣಕಾಲುಗಳಿಗೆ ಒಳ್ಳೆಯದು. ಮೂಳೆ ಸವೆತವನ್ನು ಕಡಿಮೆ ಮಾಡುವ ಶಕ್ತಿ ಕೊಲಾಜೆನ್‌ಗೆ ಇದೆ
100 ಗ್ರಾಂ ಕೋಳಿ ಕಾಲಿನಲ್ಲಿ, 240 ಗ್ರಾಂ ಕ್ಯಾಲೋರಿಗಳು ಮತ್ತು 16 ಗ್ರಾಂ ಪ್ರೋಟೀನ್ ಇರುತ್ತದೆ.
ಕೋಳಿ ಕಾಲು ಸಾಕಷ್ಟು ಮಲ್ಟಿ ವಿಟಮಿನ್‌ಗಳಿಂದ ತುಂಬಿದೆ. ಇದನ್ನು ಕಚ್ಚಿ ತಿನ್ನುವುದು ಹಲ್ಲುಗಳಿಗೂ ಒಳ್ಳೆಯದು. ಆದ್ದರಿಂದ ಇನ್ನು ಮುಂದೆ ಕೋಳಿ ಕಾಲುಗಳನ್ನು ಬಿಡದೆ ತಿನ್ನಿರಿ.