ಮೀನುಗಳಲ್ಲಿ ಒಮೆಗಾ-3 ಫ್ಯಾಟಿ ಆಸಿಡ್, ಪ್ರೊಟೀನ್, ವಿಟಮಿನ್ ಡಿ ಹಾಗೂ ಹಲವು ಖನಿಜಾಂಶಗಳು ಸಮೃದ್ಧವಾಗಿವೆ. ಮೆದಳಿನ ಆರೋಗ್ಯದಿಂದ ಹಿಡಿದು ಹೃದಯಯ ಆರೋಗ್ಯ ವರಗೆ ಪ್ರಯೋಜನವಿದೆ.
food Mar 24 2026
Author: Chethan Kumar Image Credits:stockPhoto
Kannada
ಸಾಲ್ಮನ್ ಮೀನು (Salmon)
ಇದರಲ್ಲಿ EPA , DHA ನಂತಹ ಒಮೆಗಾ-3 ಫ್ಯಾಟಿ ಆಸಿಡ್‌ಗಳು ಅಧಿಕ. ಮೆದುಳಿನ ಆರೋಗ್ಯ ಸುಧಾರಿಸುತ್ತದೆ. ಜ್ಞಾಪಕ ಶಕ್ತಿ ಹೆಚ್ಚಿಸಿ ಚುರುಕಾಗಿಸುತ್ತದೆ. ಹಾರ್ಟ್ ಆ್ಯಟಾಕ್ ಅಪಾಯ ತಗ್ಗಿಸುತ್ತೆ.
Image credits: stockPhoto
Kannada
ಬಂಗುಡೆ ಮೀನು (Mackerel)
ಬಂಗುಡೆ ಮೀನಿನಲ್ಲಿ ಒಮೆಗಾ-3 ಮತ್ತು ವಿಟಮಿನ್ ಡಿ ಹೇರಳವಾಗಿದೆ. ಈ ಮೀನು ತಿಂದರೆ ಮೂಳೆಗಳು ಬಲಗೊಳ್ಳುತ್ತವೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಜೊತೆಗೆ ನರವ್ಯೂಹವನ್ನು ರಕ್ಷಿಸುತ್ತದೆ. ಮೆದುರು ಚರುಕಾಗುತ್ತದೆ
Image credits: stockPhoto
Kannada
ಮತ್ತಿ/ಬೂತಾಯಿ ಮೀನು (Sardines)
ಇದರಲ್ಲಿ ಒಮೆಗಾ-3, ಫಾಸ್ಪರಸ್, ಪೊಟ್ಯಾಶಿಯಂ, ಸೆಲೆನಿಯಮ್, ಕ್ಯಾಲ್ಶಿಯಂ ಮತ್ತು ಕಬ್ಬಿಣಾಂಶ ಸಮೃದ್ಧವಾಗಿದೆ. ಇದು ಮೂಳೆ ಮತ್ತು ಹಲ್ಲುಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೆಟ್ಟ ಕೊಲೆಸ್ಟ್ರಾಲ್ ತೆಗೆದುಹಾಕುತ್ತದೆ.
Image credits: stockPhoto
Kannada
ಬೈಗೆ ಮೀನು
ಬೈಗೆ ಮೀನಿನಲ್ಲಿ ಒಮೆಗಾ-3 ಮತ್ತು ಕ್ಯಾಲ್ಶಿಯಂ ಅಧಿಕವಾಗಿದೆ. ವಿಟಮಿನ್ ಬಿ3 (ನಿಯಾಸಿನ್) ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸಲು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. .
Image credits: stockPhoto
Kannada
ಟ್ಯೂನ ಮೀನು (Tuna)
ಟ್ಯೂನ ಮೀನಿನಲ್ಲಿ ಒಮೆಗಾ-3 ಮತ್ತು ಪ್ರೊಟೀನ್ ಹೇರಳವಾಗಿದೆ. ಸ್ನಾಯು ಬಲಪಡಿಸುತ್ತದೆ. ತೂಕ ಇಳಿಸಲು ಸಹಾಯ ಮಾಡುತ್ತದೆ. ಮಹಿಳೆಯರಲ್ಲಿ ಗರ್ಭಾಶಯ ಬಲಗೊಳ್ಳುತ್ತದೆ. ಪುರುಷರಲ್ಲಿ ವೀರ್ಯದ ಗುಣಮಟ್ಟ ಹೆಚ್ಚಾಗುತ್ತದೆ.
Image credits: stockPhoto
Kannada
ವಂಜರಂ ಮತ್ತು ಶಂಕರ ಮೀನು
ಈ ಮೀನುಗಳಲ್ಲಿ ಪ್ರೊಟೀನ್ ಅಂಶ ಹೆಚ್ಚಿದೆ. ವಿಟಮಿನ್ ಬಿ12 ಕೂಡ ಸಮೃದ್ಧವಾಗಿದೆ. ಈ ಮೀನುಗಳನ್ನು ನಿಯಮಿತವಾಗಿ ತಿನ್ನುವುದರಿಂದ ನರವ್ಯೂಹ ಬಲಗೊಳ್ಳುತ್ತದೆ. ಹೃದಯದ ಆರೋಗ್ಯ ಸುಧಾರಿಸುತ್ತದೆ.
Image credits: stockPhoto
Kannada
ಮುರಲ್ ಮತ್ತು ವಿರಾಲ್ ಮೀನು
ಮುರಲ್ ಮತ್ತು ವಿರಾಲ್ ಮೀನುಗಳಲ್ಲಿ ಪ್ರೊಟೀನ್ ಅಂಶ ಹೆಚ್ಚಾಗಿರುತ್ತದೆ. ವಿಟಮಿನ್ ಬಿ12 ಕೂಡ ಅಧಿಕವಾಗಿದೆ. ಇವು ಸ್ನಾಯುಗಳನ್ನು ಬಲಪಡಿಸುತ್ತವೆ. ನರವ್ಯೂಹವನ್ನು ಸದೃಢಗೊಳಿಸುತ್ತವೆ.