Food

ರುಚಿಯಾಗಿರೋ ಖಾರವಾದ ಉಳ್ಳಾಗಡ್ಡಿ ಚಟ್ನಿ

Image credits: unsplash

ಬೇಕಾಗುವ ಸಾಮಾಗ್ರಿಗಳು

ಈರುಳ್ಳಿ: 2, ಜೀರಿಗೆ: 1 ಟೀ ಸ್ಪೂನ್, ಸಾಸವೆ: 1/2 ಟೀ ಸ್ಪೂನ್, ಅಚ್ಚ  ಖಾರದ ಪುಡಿ: 2 ಟೀ ಸ್ಪೂನ್, ಹುಣಸೆಹಣ್ಣು: ಅಡಿಕೆ ಗಾತ್ರದಷ್ಟು, ಎಣ್ಣೆ: 1 ಟೀ ಸ್ಪೂನ್, ಕೋತಂಬರಿ ಸೊಪ್ಪು, ಉಪ್ಪು, ಕರೀಬೇವು: 4 ಎಲೆ

Image credits: unsplash

ಉಳ್ಳಾಗಡ್ಡಿ ಚಟ್ನಿ ಮಾಡುವ ವಿಧಾನ

ಮೊದಲಿಗೆ ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಈಗ ಇದನ್ನು ರುಬ್ಬುವ ಕಲ್ಲಿಗೆ ಹಾಕಿಕೊಳ್ಳಿ. ಇದಕ್ಕೆ ಜೀರಿಗೆ ಸೇರಿಸಿ ಚೆನ್ನಾಗಿ ಜಜ್ಜಿಕೊಳ್ಳಬೇಕು.

Image credits: dodmandi_aduge Instagram

ಉಳ್ಳಾಗಡ್ಡಿ ಚಟ್ನಿ

ನಂತರ ಇದಕ್ಕೆ ಹುಣಸೆಹಣ್ಣು, ಅಚ್ಚ ಖಾರದ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಜಜ್ಜಿಕೊಳ್ಳಬೇಕು. ಕೊನೆಗೆ ಕೋತಂಬರಿ ಸೊಪ್ಪು ಹಾಕಿ ಜಜ್ಜಿಕೊಳ್ಳಿ.

Image credits: dodmandi_aduge Instagram

ಒಗ್ಗರಣೆ

ಈಗ ಒಲೆ ಆನ್ ಮಾಡ್ಕೊಂಡು ಪಾತ್ರೆ ಇರಿಸಿಕೊಂಡು ಎಣ್ಣೆ ಹಾಕಿ, ಸಾಸವೆ-ಕರೀಬೇವು ಒಗ್ಗರಣೆ ಹಾಕಿಕೊಳ್ಳಿ. 

Image credits: dodmandi_aduge Instagram

ಉಳ್ಳಾಗಡ್ಡಿ ಚಟ್ನಿ

ಈ ಒಗ್ಗರಣೆಗೆ ಜಜ್ಜಿಕೊಂಡಿರುವ ಈರುಳ್ಳಿ-ಹುಣಸೆ-ಕೋಂತಂಬರಿಯ ಮಿಶ್ರಣ ಹಾಕಿಕೊಂಡ್ರೆ ಉಳ್ಳಾಗಡ್ಡಿ ಚಟ್ನಿ ರೆಡಿ. 

Image credits: dodmandi_aduge Instagram

ಇದು ಚಪಾತಿ, ಬಿಸಿ ಅನ್ನ, ದೋಸೆಗೂ ಒಳ್ಳೆಯ ಕಾಂಬಿನೇಷನ್

Image credits: dodmandi_aduge Instagram

ದೇವರಿಗೆ ಬಿಸಿ ಆಹಾರ ನೈವೇದ್ಯ ಮಾಡುವುದೇಕೆ? ವೈಜ್ಞಾನಿಕ ಸತ್ಯ ಬಿಚ್ಚಿಟ್ಟ ಗುರೂಜಿ

ವಿಶ್ವದ ಟಾಪ್ 10ರಲ್ಲಿ ಸ್ಥಾನ ಪಡೆದ ಬೆಂಗಳೂರಿನ ಫಿಲ್ಟರ್ ಕಾಫಿ; ಎಷ್ಟನೇ ಪ್ಲೇಸ್?

ಸೀಬೆ ಎಲೆ ಜಗಿಯುವುದರಿಂದ ಎಷ್ಟೊಂದು ಪ್ರಯೋಜನ, ಹಲವು ರೋಗಗಳು ಮಾಯ

ಈ ನೀರು ಕುಡಿದ್ರೆ ಸಣ್ಣ ಆಗೋದ್ರಲ್ಲಿ ಡೌಟ್‌ ಬೇಡ! 2 ನಿಮಿಷದ ಕೆಲಸ ರೀ...!