ಥೇಚಾ ಪನೀರ್ ಒಂದು ಮಹಾರಾಷ್ಟ್ರದ ಖಾದ್ಯವಾಗಿದ್ದು, ಇದನ್ನು ಖಾರ ಥೇಚಾ ಮತ್ತು ಮೃದು ಪನೀರ್‌ನಿಂದ ತಯಾರಿಸಲಾಗುತ್ತದೆ. ನೀವು ಇದನ್ನು ಊಟ, ರಾತ್ರಿಯ ಊಟ ಅಥವಾ ಪಾರ್ಟಿಯಲ್ಲಿ ಸ್ಟಾರ್ಟರ್ ಆಗಿ ಬಡಿಸಬಹುದು.
ತವಾ ಮೇಲೆ ಸ್ವಲ್ಪ ಎಣ್ಣೆ ಬಿಸಿ ಹಾಕಿ ಹಸಿಮೆಣಸಿನಕಾಯಿ ಬೆಳ್ಳುಳ್ಳಿ ಲಘುವಾಗಿ ಹುರಿಯಿರಿ.ಬಳಿಕ ಹುರಿದ ಕಡಲೆಕಾಯಿ, ಉಪ್ಪು, ಹುರಿದ ಮೆಣಸಿನಕಾಯಿ ಬೆಳ್ಳುಳ್ಳಿ ಹಾಕಿ ಒರಟಾಗಿ ರುಬ್ಬಿಕೊಳ್ಳಿ. ನಿಮ್ಮ ಥೇಚಾ ಸಿದ್ಧವಾಗಿದೆ.
ಪನೀರ್ ಅನ್ನು ಸಿದ್ಧಪಡಿಸಿ
ಪನೀರ್ ಅನ್ನು ದೊಡ್ಡ ಚೌಕಾಕಾರದ ತುಂಡುಗಳಾಗಿ ಕತ್ತರಿಸಿ. ಇದನ್ನು 2 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ನೆನೆಸಿಡಿ. ಇದರಿಂದ ಪನೀರ್ ಮೃದುವಾಗುತ್ತದೆ.
ಪನೀರ್ ಮೇಲೆ ಥೇಚಾ ಲೇಪಿಸಿ
ಪನೀರ್ ಅನ್ನು ನೀರಿನಿಂದ ತೆಗೆದು ಒಣಗಿಸಿ. ಇದರ ಮೇಲೆ ಥೇಚಾ ಹಚ್ಚಿ ಮುಚ್ಚಿ
ಪನೀರ್ ಥೇಚಾವನ್ನು ಹುರಿಯಿರಿ
ನಾನ್‌ಸ್ಟಿಕ್ ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಹಾಕಿ. ಇದರಲ್ಲಿ ಸಾಸಿವೆ ಮತ್ತು ಕರಿಬೇವಿನ ಎಲೆ ಹಾಕಿ ಸಿಡಿಸಿ. ಸಿದ್ಧಪಡಿಸಿದ ಥೇಚಾ ಪನೀರ್ ಅನ್ನು ಇಟ್ಟು ಕಂದು ಬಣ್ಣ ಬರುವವರೆಗೆ ಹುರಿಯಿರಿ.
ಥೇಚಾ ಬಡಿಸುವ ವಿಧಾನ
ಬಿಸಿಬಿಸಿ ಥೇಚಾ ಪನೀರ್ ಅನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ರೊಟ್ಟಿ, ಪರಾಠ ಅಥವಾ ನಾನ್ ಜೊತೆ ಬಡಿಸಿ ಅಥವಾ ಹಾಗೆಯೇ ತಿಂಡಿಯಾಗಿ ತಿನ್ನಬಹುದು.