Food
ಬ್ಯಾಡಗಿ ಮೆಣಸಿನಕಾಯಿ: 4, ಟೊಮೆಟೋ: 2, ಜೀರಿಗೆ: 1/2 ಟೀ ಸ್ಪೂನ್, ಎಣ್ಣೆ: 1 ಟೀ ಸ್ಪೂನ್, ಕೋತಂಬರಿ ಸೊಪ್ಪು, ಉಪ್ಪು ರುಚಿಗೆ ತಕ್ಕ್ಷಷ್ಟು
ಮೊದಲು ಬ್ಯಾಡಗಿ ಮೆಣಸಿನಕಾಯಿನ್ನು ಸುಮಾರು 30 ನಿಮಿಷ ನೀರಿನಲ್ಲಿ ನೆನಸಿಟ್ಟುಕೊಳ್ಳಬೇಕು.
ನಂತರ ಮಿಕ್ಸಿ ಜಾರಿಗೆ ಸಿಪ್ಪೆ ತೆಗೆದ ಟೊಮೆಟೋ, ನೆನಸಿದ ಮೆಣಸಿನಕಾಯಿ, ಜೀರಿಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು.
ಈ ರುಬ್ಬಿದ ಮೆಣಸಿನಕಾಯಿ ಚಟ್ನಿಗೆ 1 ಟೀ ಸ್ಪೂನ್ ಬಿಸಿಯಾದ ಎಣ್ಣೆ ಸೇರಿಸಿಕೊಳ್ಳಿ. ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಬೇಕು.