ಸಿಹಿ ಹಾಗೂ ಖಾರದ ಪೊಂಗಲ್ ಮಾಡುವ ಮೂಲಕ ಮಕರ ಸಂಕ್ರಾಂತಿಯನ್ನು ಸಂಭ್ರಮ ಸಡಗರದಿಂದ ನಮ್ಮ ರಾಜ್ಯದಲ್ಲಿ ಆಚರಿಸಲಾಗುತ್ತದೆ. ಜೊತೆಗೆ ಚಳಿಗಾಲದಲ್ಲಿ ಚರ್ಮಕ್ಕೆ ತೈಲಾಂಶ ಹೆಚ್ಚಿಸುವ ಎಳ್ಳು ಬೆಲ್ಲ ಸವಿಯೋದು ವಿಶೇಷ.
food Jan 08 2026
Author: Suvarna News Image Credits:Getty
Kannada
ಸಂಕ್ರಾಂತಿ ಯಾವತ್ತು?
ಈ ವರ್ಷ ಮಕರ ಸಂಕ್ರಾಂತಿ ಜನವರಿ 14ಕ್ಕೋ, 15ಕ್ಕೋ ಎಂಬ ಗೊಂದಲವಿದೆ. ಕೆಲವೆಡೆ ಕೊಟ್ಟಿರುವ ರಜೆ ನೋಡಿದರೆ ಇದು ಗೊತ್ತಾಗುತ್ತದೆ. ಆದರೆ, ಅಧಿಕ ವರ್ಷದಲ್ಲಿ ಮಾತ್ರ ಸಂಕ್ರಾಂತಿ 15ಕ್ಕೆ ಬರುತ್ತದೆ.
Image credits: Getty
Kannada
ಖಿಚಡಿ ಅಥವಾ ಪೊಂಗಲ್ ತಿನ್ನೋದೇ ಹಬ್ಬ
ಸಂಕ್ರಾಂತಿಗೆ ಸಂಬಂಧಿಸಿದ ಅನೇಕ ಸಂಪ್ರದಾಯಗಳಿವೆ, ಅವುಗಳಲ್ಲಿ ಒಂದು ಅಕ್ಕಿಯಿಂದ ಮಾಡಿದ ಖಿಚಡಿ ಅಥವಾ ಪೊಂಗಲ್ ಸೇವಿಸುವುದು. ಉತ್ತರ ಪ್ರದೇಶದಲ್ಲಿ ಈ ಹಬ್ಬವನ್ನು ಖಿಚಡಿ ಎಂದೇ ಆಚರಿಸುತ್ತಾರೆ.
Image credits: Getty
Kannada
ಅಷ್ಟಕ್ಕೂ ಈ ಖಿಚಡಿ ತಿನ್ನೋದೇಕೆ?
ಮಕರ ಸಂಕ್ರಾಂತಿಯಂದು ಬೇಳೆ, ಅಕ್ಕಿ ಮತ್ತು ತರಕಾರಿ ಬೆರೆಸಿ ಖಿಚಡಿ ತಯಾರಿಸಲಾಗುತ್ತದೆ. ಈ ಸಮಯದಲ್ಲಿ ಚಳಿಗಾಲವಿರುತ್ತದೆ. ಈ ಋತುವಿನಲ್ಲಿ ಖಿಚಡಿ ಸೇವಿಸುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ಎಂಬ ನಂಬಿಕೆ ಇದೆ.
Image credits: Getty
Kannada
ಖಿಚಡಿ ದಾನಕ್ಕೂ ಇದೆ ಮಹತ್ವ
ಮಕರ ಸಂಕ್ರಾಂತಿಯಂದು ಖಿಚಡಿ ದಾನ ಮಾಡುವುದಕ್ಕೂ ವಿಶೇಷ ಮಹತ್ವವಿದೆ. ಈ ದಿನ ಜನರು ಹಸಿ ಅಕ್ಕಿ ಮತ್ತು ಬೇಳೆಯನ್ನು ಬೆರೆಸಿ ಬಡವರಿಗೆ ದಾನ ಮಾಡುತ್ತಾರೆ. ಕೆಲವರು ಬೇಯಿಸಿದ ಖಿಚಡಿಯನ್ನು ಸಹ ಬಡವರಿಗೆ ನೀಡುತ್ತಾರೆ.
Image credits: Getty
Kannada
ಈ ಮಕರ ಸಂಕ್ರಾಂತಿಯಂದು ಖಿಚಡಿ ಏಕೆ ತಿನ್ನಬಾರದು?
ಈ ಬಾರಿ ಮಕರ ಸಂಕ್ರಾಂತಿಯಂದು ಷಟ್ತಿಲಾ ಏಕಾದಶಿಯ ಸಂಯೋಗವಿದೆ. ಹಿಂದೂ ನಂಬಿಕೆಗಳ ಪ್ರಕಾರ, ಏಕಾದಶಿಯಂದು ಅಕ್ಕಿಯನ್ನು ತಿನ್ನಬಾರದು, ಹಾಗೆ ಮಾಡುವುದರಿಂದ ಜೀವನದಲ್ಲಿ ಸಮಸ್ಯೆಗಳು ಮುಂದುವರಿಯುತ್ತವೆ.
Image credits: Getty
Kannada
ಏಕಾದಶಿಯಂದು ಅಕ್ಕಿಯನ್ನೇಕೆ ತಿನ್ನುವುದಿಲ್ಲ?
ಅಕ್ಕಿಯಲ್ಲಿ ನೀರಿನ ಅಂಶ ಹೆಚ್ಚಾಗಿರುವುದರಿಂದ ಮನಸ್ಸಿನಲ್ಲಿ ಚಂಚಲತೆ ಉಂಟಾಗುತ್ತದೆ, ಇದು ಹಲವು ರೀತಿಯ ವಿಕಾರಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಏಕಾದಶಿಯಂದು ಅಕ್ಕಿ ತಿನ್ನುವುದನ್ನು ನಿಷೇಧಿಸಲಾಗಿದೆ.