ಜಾನ್ವಿ ಕಪೂರ್ ಅವರ ನೆಚ್ಚಿನ ಖಾದ್ಯ ಮೊಸರಿನ ತಡ್ಕಾ. ಈ ರೆಸಿಪಿಯನ್ನು ನೀವು ಸುಲಭವಾಗಿ ಮನೆಯಲ್ಲಿ ತಯಾರಿಸಬಹುದು. ಅನ್ನ, ರೊಟ್ಟಿ ಜೊತೆ ಇದು ಚೆನ್ನಾಗಿರುತ್ತದೆ.
ಮೊಸರು, ಎಣ್ಣೆ, ಜೀರಿಗೆ, ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ, ಮೆಣಸಿನಕಾಯಿ, ಶುಂಠಿ, ಸ್ವಲ್ಪ ಇಂಗು, ಒಣಮೆಣಸಿನಕಾಯಿ, ಈರುಳ್ಳಿ, ಸ್ವಲ್ಪ ಕಾರ, ಸ್ವಲ್ಪ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು, ನೀರು
ಮೊದಲಿಗೆ 2 ಕಪ್ ಮೊಸರನ್ನು ಚೆನ್ನಾಗಿ ಕಡೆದು ಪಕ್ಕಕ್ಕೆ ಇಟ್ಟುಕೊಳ್ಳಿ.
ಒಂದು ಪಾತ್ರೆಯಲ್ಲಿ 2 ದೊಡ್ಡ ಚಮಚ ಎಣ್ಣೆ ಬಿಸಿ ಮಾಡಿ, 1 ಚಿಕ್ಕ ಚಮಚ ಜೀರಿಗೆ, ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ, ಚಿಟಿಕೆ ಇಂಗು ಹಾಕಿ. ಹುರಿಯಿರಿ.
2-3 ಹಸಿಮೆಣಸಿನಕಾಯಿ, ದೊಡ್ಡ ಚಮಚ ತುರಿದ ಶುಂಠಿ ಹಾಕಿ ಒಂದು ನಿಮಿಷ ಹುರಿಯಿರಿ. ನಂತರ ಈರುಳ್ಳಿ ಹಾಕಿ ಹುರಿಯಿರಿ.
ನಂತರ ಇದಕ್ಕೆ ಒಣಮೆಣಸಿನಕಾಯಿ, ಕಾರ, ಅರಿಶಿನ ಹಾಕಿ ಮಿಶ್ರಣ ಮಾಡಿ.
ಸ್ಟವ್ ಆಫ್ ಮಾಡಿ, ಕಡೆದ ಮೊಸರನ್ನು ಹಾಕಿ. ನೀರು ಸೇರಿಸಿ ಬೇಕಾದಷ್ಟು ದಪ್ಪ ಮಾಡಿಕೊಳ್ಳಿ. ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ, ರೊಟ್ಟಿ ಅಥವಾ ಅನ್ನದ ಜೊತೆ ಬಿಸಿಬಿಸಿಯಾಗಿ ಬಡಿಸಿ.
ಇದೊಂದೇ ಹಣ್ಣು ಸಾಕು ತೂಕ ಇಳಿಸೋಕೆ: ಇಲ್ಲಿದೆ ಸ್ಟ್ರಾಬೆರಿ ಸೇವನೆಯ 6 ಪ್ರಯೋಜನಗಳು
ರೋಗನಿರೋಧಕ ಶಕ್ತಿ ಹೆಚ್ಚಿಸುವ ವಿಟಮಿನ್ ಡಿ ಆಹಾರಗಳು
ಪೇರಲೆ ಹಣ್ಣು ತಿಂದರೆ ಈ ರೋಗಗಳಿಂದ ನೀವು ದೂರ..!
ರಾತ್ರಿ ಉಳಿದ ಅನ್ನದಿಂದ ಮಾಡಿ ರುಚಿಕರವಾದ ಛತ್ತೀಸ್‌ಗರಿ ಫರ: ರೆಸಿಪಿ ಇಲ್ಲಿದೆ