ಅನೇಕ ಆಹಾರ ಪದಾರ್ಥಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸುವಾಗ ಹಾಳಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಎಚ್ಚರಿಕೆಯಿಂದ ಇಡಬೇಕು. ಇಲ್ಲದಿದ್ದರೆ ಧಾನ್ಯಗಳು ಕೀಟಗಳು, ಪತಂಗಗಳಿಂದ ಮುತ್ತಿಕೊಳ್ಳಬಹುದು.
food Jan 15 2026
Author: Ashwini HR Image Credits:Getty
Kannada
ನೀಟಾಗಿ ಬಾಕ್ಸ್ ಮುಚ್ಚಳ ಮುಚ್ಚಿ
ಕೆಲವೊಮ್ಮೆ ಬಾಕ್ಸ್ ಮುಚ್ಚಳ ಸರಿಯಾಗಿ ಮುಚ್ಚುವುದಿಲ್ಲ. ಅಂದರೆ ಗಾಳಿಯಾಡುತ್ತವೆ. ಇದು ಪತಂಗಗಳ ಬಾಧೆಗೆ ಮತ್ತು ಹಾಳಾಗುವಿಕೆಗೆ ಕಾರಣವಾಗುತ್ತದೆ.
Image credits: Amazon Website
Kannada
ಒದ್ದೆಯಾದ ಕೈನಿಂದ ಮುಟ್ಟದಿರಿ
ಒದ್ದೆಯಾದ ಕೈಗಳು ಧಾನ್ಯಗಳೊಳಗೆ ತೇವಾಂಶ ಪ್ರವೇಶಿಸಲು ಕಾರಣವಾಗಬಹುದು. ಕೀಟಗಳ ಬೆಳವಣಿಗೆಗೂ ಕಾರಣವಾಗಬಹುದು. ಈ ಸೋಂಕಿತ ಧಾನ್ಯಗಳನ್ನು ಸೇವಿಸುವುದರಿಂದ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.
Image credits: Amazon Website
Kannada
ಬೇವಿನ ಎಲೆ
ದ್ವಿದಳ ಧಾನ್ಯಗಳನ್ನ ಕೀಟಗಳಿಂದ ರಕ್ಷಿಸಲು ನಿಮ್ಮ ಡಬ್ಬಿಗಳಲ್ಲಿ ಕೆಲವು ಬೇವಿನ ಎಲೆಗಳನ್ನು ಇರಿಸಿ. ಇದರಿಂದ ಕೀಟಗಳು ಅವುಗಳನ್ನು ಬಾಧಿಸುವುದನ್ನು ತಡೆಯಬಹುದು.
Image credits: Getty
Kannada
ಸ್ವಚ್ಛತೆಗೆ ವಿಶೇಷ ಗಮನ ಕೊಡಿ
ನೀವು ದ್ವಿದಳ ಧಾನ್ಯಗಳನ್ನು ಸಂಗ್ರಹಿಸುವ ಡಬ್ಬಿ ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಸ್ವಚ್ಛತೆಗೆ ವಿಶೇಷ ಗಮನ ಕೊಡಿ.
Image credits: Amazon Website
Kannada
ಒಣಗಿದ ಪುದೀನಾ ಎಲೆ
ದೀರ್ಘಕಾಲದವರೆಗೆ ಕೀಟಗಳು ಮತ್ತು ಪತಂಗಗಳಿಂದ ಅಕ್ಕಿಯನ್ನು ರಕ್ಷಿಸಲು ಒಣಗಿದ ಪುದೀನಾ ಎಲೆ, ಒಣಗಿದ ಹಾಗಲಕಾಯಿ ಸಿಪ್ಪೆಗಳನ್ನು ಬೆರೆಸಬಹುದು.
Image credits: Getty
Kannada
ಇತರ ಪರಿಹಾರಗಳು
ಪ್ಲಾಸ್ಟಿಕ್ ಬಾಕ್ಸ್ ಧಾನ್ಯ ಸಂಗ್ರಹಿಸಲು ಸೂಕ್ತ. ಶೇಖರಣಾ ಕೊಠಡಿ ಆಗಾಗ್ಗೆ ತೆರೆಯುವುದನ್ನು ತಪ್ಪಿಸಿ. 15 ದಿನಗಳಿಗೊಮ್ಮೆ ಧಾನ್ಯ ಪರೀಕ್ಷಿಸಲು ಮರೆಯದಿರಿ. ಶೇಖರಣಾ ಕೊಠಡಿ ಚೆನ್ನಾಗಿ ಗಾಳಿ ಇರುವಂತೆ ನೋಡಿಕೊಳ್ಳಿ.