Food
ನೀವೆಲ್ಲರೂ ನಿಂಬೆ ಉಪ್ಪಿನಕಾಯಿ ತಿಂದಿರಬಹುದು, ಆದರೆ ನಿಂಬೆ ಸಿಪ್ಪೆಯ ಉಪ್ಪಿನಕಾಯಿ ಮಾಡಿದ್ದೀರಾ? ಇದನ್ನು 10 ನಿಮಿಷಗಳಲ್ಲಿ ತಯಾರಿಸಬಹುದು.
ಒಂದು ಪಾತ್ರೆಯಲ್ಲಿ ನೀರನ್ನು ಕಾಯಿಸಿ. ನಂತರ ನಿಂಬೆ ಸಿಪ್ಪೆಗಳನ್ನ ಹಾಕಿ 5-10 ನಿಮಿಷ ಬೇಯಿಸಿ.
ಈಗ ಒಲೆಯನ್ನು ಆರಿಸಿ ನಿಂಬೆ ಸಿಪ್ಪೆಗಳನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ನಂತರ ಅದಕ್ಕೆ ಕಲ್ಲುಪ್ಪು, ಮೆಣಸಿನ ಪುಡಿ, ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಒಲೆಯ ಮೇಲೆ ಪಾತ್ರೆ ಇಟ್ಕೊಂಡು ಸಾಸಿವೆ ಎಣ್ಣೆಯನ್ನು ಕಾಯಿಸಿ. ಅದರಲ್ಲಿ ಸಾಸಿವೆ, ಇಂಗು ಹಾಕಿ ಒಗ್ಗರಣೆ ಮಾಡಿ ನಿಂಬೆ ಸಿಪ್ಪೆಯ ಮೇಲೆ ಸುರಿದು ಮಿಶ್ರಣ ಮಾಡಿ.
ನಿಮ್ಮ ಉಪ್ಪಿನಕಾಯಿ ಸಿದ್ಧ. ರುಚಿಯಲ್ಲಿ ಸ್ವಲ್ಪ ಹುಳಿ ಬೇಕೆಂದರೆ, ಅರ್ಧ ಕಪ್ ನಿಂಬೆ ರಸವನ್ನು ಸಹ ಸೇರಿಸಬಹುದು.
ಕರುಳಿನ ಆರೋಗ್ಯ ಸುಧಾರಿಸಲು ಇಲ್ಲಿವೆ ಅತ್ಯುತ್ತಮ ಪಾನೀಯಗಳು!
ಸಸ್ಯಹಾರಿಗಳ ಫೇವರೆಟ್ ಥೇಚಾ ಪನೀರ್ ಮಾಡುವ ಸುಲಭ ವಿಧಾನ
ಮಕ್ಕಳಿಗಾಗಿ ಮನೆಯಲ್ಲೇ ಮಾಡಿ ಪ್ರೊಟಿನ್ ಯುಕ್ತ ಸಟ್ಟು ಲಡ್ಡು : ರೆಸಿಪಿ ಇಲ್ಲಿದೆ
ಮಸಾಲೆ ದೋಸೆ ಮೇಲೆ ಹಚ್ಚುವ ಕೆಂಪು ಚಟ್ನಿ ಮಾಡುವ ವಿಧಾನ