Food

ರುಚಿಕರ ಮುಂಬೈ ವಡಾಪಾವ್ ಮಾಡೋದು ಹೇಗೆ?

ವಡಾಗೆ ಬೇಕಾಗುವ ಸಾಮಗ್ರಿಗಳು

2 ಕಪ್ ಬೇಯಿಸಿದ ಆಲೂಗಡ್ಡೆ, 2 ಹಸಿಮೆಣಸಿನಕಾಯಿ, 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1/2 ಅರಿಶಿನ ಪುಡಿ,1 ಚಮಚ ಸಾಸಿವೆ, 8 ಕರಿಬೇವಿನ ಎಲೆ, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಎಣ್ಣೆ ಮತ್ತು ಕೊತ್ತಂಬರಿ ಸೊಪ್ಪು

ವಡೆ ಹಿಟ್ಟು ಕಲಸಲಿ ಬೇಕಾದ ಸಾಮಗ್ರಿಗಳು

1 ಕಪ್ ಕಡ್ಲೆ ಹಿಟ್ಟು, 2 ಚಮಚ ಅಕ್ಕಿ ಹಿಟ್ಟು, ಒಂದು ಚಿಟಿಕೆ ಅಡಿಗೆ ಸೋಡಾ, 1/4 ಚಮಚ ಅರಿಶಿನ ಪುಡಿ, 1/2 ಚಮಚ ಕೆಂಪು ಮೆಣಸಿನ ಪುಡಿ, ಅಗತ್ಯವಿರುವಷ್ಟು ನೀರು.

ವಡಾಪಾವ್ ಜೋಡಣೆಗೆ ಬೇಕಾದ ಸಾಮಗ್ರಿಗಳು

ಗೋಧಿ ಪಾವ್ ಬನ್‌ಗಳು: 4, ಹಸಿರು ಚಟ್ನಿ: 2 ಚಮಚ, ಖರ್ಜೂರ ಮತ್ತು ಹುಣಸೆಹಣ್ಣಿನ ಚಟ್ನಿ: 2 ಚಮಚ, ಬೆಳ್ಳುಳ್ಳಿ ಚಟ್ನಿ: 1 ಚಮಚ.

ವಡಾ ತುಂಬುವುದು ಹೇಗೆ?

ಒಂದು ಪ್ಯಾನ್‌ನಲ್ಲಿ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಸಾಸಿವೆ ಹಾಕಿ ಸಿಡಿಸಿ. ಕರಿಬೇವು, ಹಸಿಮೆಣಸಿನಕಾಯಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಒಂದು ನಿಮಿಷ ಹುರಿಯಿರಿ.

ಮಸಾಲೆ ಮತ್ತು ಆಲೂಗಡ್ಡೆ ಸೇರಿಸಿ

ಅದೇ ಪ್ಯಾನ್‌ಗೆ ಅರಿಶಿನ ಪುಡಿ ಮತ್ತು ಆಲೂಗಡ್ಡೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ, ಒಲೆ ಆರಿಸಿ ತಣ್ಣಗಾಗಲು ಬಿಡಿ. ನಂತರ ಅದನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ.

ನಯವಾಗಿ ವಡಾ ಹಿಟ್ಟು ತಯಾರಿಸಿ

ಒಂದು ಬಟ್ಟಲಿನಲ್ಲಿ ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಅಡಿಗೆ ಸೋಡಾ ಮಿಶ್ರಣ ಮಾಡಿ. ನಯವಾದ ಹಿಟ್ಟನನ್ನು ಕಲಿಸಿ ವಡಾ ಮಾಡಲು ನೀರು ಸೇರಿಸಿ.

ವಡೆಗಳನ್ನು ಬೇಯಿಸಿ

ಆಲೂಗಡ್ಡೆ ಉಂಡೆಗಳನ್ನು ಹಿಟ್ಟಿನಲ್ಲಿ ಅದ್ದಿ, ಕಾಯಿಸಿದ ಏರ್ ಫ್ರೈಯರ್, ಎಣ್ಣೆ ಅಥವಾ ಓವನ್‌ನಲ್ಲಿ (200°C) ಇರಿಸಿ ಮತ್ತು ಕಂದು ಬಣ್ಣ ಬರುವವರೆಗೆ ಮತ್ತು ಗರಿಗರಿಯಾಗುವವರೆಗೆ 10-12 ನಿಮಿಷ ಬೇಯಿಸಿ.

ವಡಾ ಪಾವ್ ಜೋಡಿಸಿ

ಗೋಧಿ ಹಿಟ್ಟಿನ ಪಾವ್ ಬನ್‌ಗಳನ್ನು ಎರಡು ತುಂಡಾಗಿ ಕತ್ತರಿಸಿ ಒಂದು ಬದಿಯಲ್ಲಿ ಹಸಿರು ಚಟ್ನಿ ಮತ್ತು ಇನ್ನೊಂದು ಬದಿಯಲ್ಲಿ ಹುಣಸೆಹಣ್ಣಿನ, ಬೆಳ್ಳುಳ್ಳಿ ಚಟ್ನಿ ಹಚ್ಚಿ. ವಡೆಯನ್ನು ಬನ್‌ನಲ್ಲಿ ಇರಿಸಿ.

ನಿಮ್ಮ ದೇಹದಲ್ಲಿ ಪ್ರೋಟೀನ್ ಕೊರತೆ ಇದೆ ಎನ್ನುವ ಲಕ್ಷಣಗಳು!

ಖಾಲಿ ಹೊಟ್ಟೆಯಲ್ಲಿ ಮೆಂತೆಕಾಳು ನೆನೆಸಿದ ನೀರು ಕುಡಿದ್ರೆ ಹತ್ತಾರು ಲಾಭ!

ಕಿಡ್ನಿ ಮತ್ತು ಲಿವರ್ ಆರೋಗ್ಯಕ್ಕೆ ಪಾನೀಯಗಳು

ರಕುಲ್ ಪ್ರೀತ್ ಸಿಂಗ್ ಇಷ್ಟದ ಸ್ವೀಟ್ ಪೊಟ್ಯಾಟೊ ಫ್ರೈಸ್ ರೆಸಿಪಿ