Kannada

ಅಡುಗೆಗೆ ಖಾರ ಹೆಚ್ಚಾದ್ರೆ ಏನ್ ಮಾಡೋದು?

Kannada

ಖಾರ ಹೇಗೆ ಕಡಿಮೆ ಮಾಡುವುದು?

ಅಡುಗೆ ಮಾಡುವಾಗ ಸಣ್ಣಪುಟ್ಟ ತಪ್ಪುಗಳು ಸಾಮಾನ್ಯ. ಆಕಸ್ಮಿಕವಾಗಿ ಅಡುಗೆಗೆ ಖಾರ ಹೆಚ್ಚಾದರೆ ಈ ಸಲಹೆಗಳನ್ನು ಪಾಲಿಸಿ.

 

 

Kannada

ಹೆಚ್ಚು ನೀರು ಹಾಕಿ

ಸಾಂಬಾರು ಅಥವಾ ಕರಿ ಮಾಡುವಾಗ ಖಾರ ಹೆಚ್ಚಾದರೆ ಚಿಂತಿಸಬೇಕಿಲ್ಲ. ಹೆಚ್ಚು ನೀರು ಅಥವಾ ಕುದಿಸಿದ ನೀರನ್ನು ಹಾಕಿ. ಖಾರ ಕಡಿಮೆಯಾಗುತ್ತದೆ. ನೀರು ಹಾಕಿದ ನಂತರ ತೆಳುವಾದರೆ, ಶೇಂಗಾ ಪುಡಿ ಹಾಕಿದರೆ ಸರಿಯಾಗುತ್ತದೆ.

Kannada

ಹುಳಿ ಪದಾರ್ಥ ಹಾಕಿ

ಹುಳಿ ಪದಾರ್ಥಗಳು ಖಾರವನ್ನು ಕಡಿಮೆ ಮಾಡುತ್ತವೆ. ವಿನೆಗರ್, ನಿಂಬೆರಸ, ಹುಣಸೆಹಣ್ಣು ಹಾಕುವುದರಿಂದ ಖಾರ ಕಡಿಮೆಯಾಗಿ, ಅಡುಗೆ ರುಚಿ ಹೆಚ್ಚುತ್ತದೆ.

Kannada

ಖಾರ ಕಡಿಮೆ ಮಾಡುವುದು ಹೇಗೆ?

ಖಾರ ಕಡಿಮೆ ಮಾಡಲು ಅಡುಗೆ ಮಾಡುವ ಪ್ರಮಾಣ ಹೆಚ್ಚಿಸಿ. ಆಲೂಗಡ್ಡೆಗಳನ್ನು ಹಾಕಿದರೆ ಖಾರ ಕಡಿಮೆಯಾಗುತ್ತದೆ.

Kannada

ತೆಂಗಿನಕಾಯಿ ಹಾಲು, ಕ್ರೀಮ್ ಬಳಸಿ

ತೆಂಗಿನಕಾಯಿ ಹಾಲು ಅಥವಾ ಕ್ರೀಮ್ ಬಳಸುವುದರಿಂದ ಖಾರ ಕಡಿಮೆಯಾಗುತ್ತದೆ. ಉತ್ತಮ ರುಚಿಯನ್ನು ನೀಡುವುದಲ್ಲದೆ ಖಾರವನ್ನು ಕಡಿಮೆ ಮಾಡುತ್ತೆ.

Kannada

ಸಿಹಿ ಪದಾರ್ಥ ಹಾಕಿ

ಸಕ್ಕರೆ ಅಥವಾ ಬೆಲ್ಲದಂತಹ ಸಿಹಿ ಪದಾರ್ಥಗಳು ಖಾರವನ್ನು ಕಡಿಮೆ ಮಾಡುತ್ತವೆ. ಆದರೆ ಹೆಚ್ಚು ಸಿಹಿ ಹಾಕಬಾರದು.

Kannada

ಗೋಡಂಬಿ ಪೇಸ್ಟ್ ಬಳಸಿ

ಗೋಡಂಬಿ, ವಾಲ್ನಟ್ ಪೇಸ್ಟ್ ಅಥವಾ ಬೆಣ್ಣೆ ಕೂಡ ಖಾರವನ್ನು ಕಡಿಮೆ ಮಾಡುತ್ತವೆ. ಬಾದಾಮಿ ಅಥವಾ ಶೇಂಗಾ ಪೇಸ್ಟ್ ಕೂಡ ಬಳಸಬಹುದು.

ಅರವಿಂದ್ ಕೇಜ್ರಿವಾಲ್ ಮಗಳು ಹರ್ಷಿತಾಳ ಹೆಲ್ದಿ ಆಹಾರ ಕ್ರಾಂತಿ

ಅತ್ತೆ ಕೂಡ ಮೆಚ್ಚುವಂಥ ಮೂಂಗ್ ದಾಲ್ ಹಲ್ವಾ ಮಾಡೋದು ಹೇಗೆ? ಇಲ್ಲಿದೆ ಸುಲಭ ರೆಸಿಪಿ!

ಕೂದಲು ಉದುರಬಾರದು, ಉದ್ದವಾಗಿ ಬೆಳೆಯಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ

ಖಾಲಿ ಹೊಟ್ಟೆಯಲ್ಲಿ ಮೊಟ್ಟೆ ತಿನ್ನುವುದರಿಂದ ಏನಾಗುತ್ತದೆ ಎಂಬುದು ತಿಳಿದಿದೆಯೇ?