ಶುದ್ಧ ಜೇನುತುಪ್ಪ ಗುರುತಿಸಲು ಹೆಬ್ಬೆರಳು ಪರೀಕ್ಷೆ 5 ಸಲಹೆಗಳು!
Kannada
ಹೆಬ್ಬೆರಳಿನ ಪರೀಕ್ಷೆ
ಹೆಬ್ಬೆರಳಿನ ಮೇಲೆ ಸ್ವಲ್ಪ ಪ್ರಮಾಣದ ಜೇನುತುಪ್ಪ ಹಾಕಿ. ಜೇನುತುಪ್ಪವು ಹರಡಲು ಪ್ರಾರಂಭಿಸಿದರೆ ಅಥವಾ ತುಂಬಾ ತೆಳುವಾಗಿದ್ದರೆ ನಕಲಿಯಾಗಿರಬಹುದು. ಶುದ್ಧ ಜೇನುತುಪ್ಪ ದಪ್ಪವಾಗಿದ್ದು ಮತ್ತು ಬೆರಳ ಮೇಲೆ ಹರಡುವುದಿಲ್ಲ.
Kannada
ನೀರಿನ ಪರೀಕ್ಷೆ
ಶುದ್ಧ ಮತ್ತು ನಕಲಿ ಜೇನುತುಪ್ಪವನ್ನು ಗುರುತಿಸಲು ನೀರಿನ ಪರೀಕ್ಷೆ ಮಾಡಿ. ಒಂದು ಲೋಟ ನೀರಿಗೆ ಜೇನುತುಪ್ಪವನ್ನು ಹಾಕಿ. ಜೇನುತುಪ್ಪ ನೇರವಾಗಿ ಲೋಟದ ತಳದಲ್ಲಿ ಕುಳಿತರೆ ಅದು ಶುದ್ಧ ಜೇನುತುಪ್ಪ. ಕರಗಿದರೆ ಅದು ನಕಲಿ.
Kannada
ಬೆಂಕಿಯಿಂದ ಪರೀಕ್ಷೆ
ನೀವು ಬೆಂಕಿ ಕಡ್ಡಿಯನ್ನು ಜೇನುತುಪ್ಪದಲ್ಲಿ ಅದ್ದಿ ಅದನ್ನು ಬೆಳಗಿಸಲು ಪ್ರಯತ್ನಿಸಿ. ಕಡ್ಡಿ ಸುಲಭವಾಗಿ ಉರಿಯುತ್ತಿದ್ದರೆ, ಜೇನುತುಪ್ಪ ಶುದ್ಧವಾಗಿದೆ. ಉರಿಯಲು ಕಷ್ಟವಾದರೆ ಅಥವಾ ಶಬ್ದ ಮಾಡಿದರೆ ಅದು ನಕಲಿ.
Kannada
ಸ್ಫಟಿಕೀಕರಣ
ಶುದ್ಧ ಜೇನುತುಪ್ಪವು ಕೆಲ ದಿನದ ನಂತರ ತಂಪಾದ ವಾತಾವರಣದಲ್ಲಿ ಸ್ಫಟಿಕೀಕರಣಗೊಳ್ಳುತ್ತದೆ (ಸಕ್ಕರೆಯಂತೆ ಹೆಪ್ಪುಗಟ್ಟುವುದು). ಜೇನುತುಪ್ಪವು ದೀರ್ಘಕಾಲ ದ್ರವ ರೂಪದಲ್ಲಿದ್ದರೆ ಅದು ಬಹುಶಃ ನಕಲಿ ಆಗಿರಬಹುದು.
Kannada
ವಾಸನೆ ಮತ್ತು ರುಚಿ
ಶುದ್ಧ ಜೇನುತುಪ್ಪವು ಹೂವು ಮತ್ತು ಸಸ್ಯಗಳವಾಸನೆ ಹೊಂದಿರುತ್ತದೆ. ಇದರ ರುಚಿ ನೈಸರ್ಗಿಕ ಮತ್ತು ಮೃದುವಾಗಿರುತ್ತದೆ. ಆದರೆ ನಕಲಿ ಜೇನುತುಪ್ಪವು ಯಾವುದೇ ನಿರ್ದಿಷ್ಟ ವಾಸನೆ ಹೊಂದಿರುವುದಿಲ್ಲ.