Food
ಇಂಗ್ಲೀಷ್‌ನಲ್ಲಿ ಇದಕ್ಕೆ ಮ್ಯೂಸೆಲ್ಸ್ (mussels) ಎಂದು ಕರೆಯುತ್ತಾರೆ. ರಾಜ್ಯದ ಕರಾವಳಿ ಭಾಗಗಳಲ್ಲಿ ಪಚ್ಚಿಲೆ, ಕೊಜುಳಿ ಅನ್ನೋ ಹೆಸರಲ್ಲಿ ಕರೆಯುತ್ತಾರೆ.
ಇದು ಒಂದು ಜಾತಿಯ ಚಿಪ್ಪು ಮೀನಾಗಿದ್ದು ಅಪರೂಪದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಹೇರಳ ಖನಿಜಾಂಶ ಹೊಂದಿರುವ ಸೀಫುಡ್ ಆಗಿದ್ದು, ಓಮೆಗಾ-3 ಕೊಬ್ಬಿನಾಮ್ಲ, ಜೀವಸತ್ವ, ಪ್ರೋಟೀನ್‌ಅನ್ನು ಧಾರಾಳವಾಗಿ ಹೊಂದಿದೆ.
ಪಚ್ಚಿಲೆ ತಿನ್ನೋದು ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ.
ರಕ್ತಪರಿಚಲನೆಯನ್ನು ಹೆಚ್ಚಿಸುವ ಗುಣ ಇದರಲ್ಲಿದ್ದು, ಇದು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ
ದೇಹದ ಅಂಗಾಂಶಗಳು ಇದರಿಂದ ಬಲವಾಗುತ್ತದೆ. ವಯಸ್ಸಾಗದಂತೆ ತಡೆಗಟ್ಟುವ ಸಾಮರ್ಥ್ಯ ಇದರಲ್ಲಿದೆ.
ಅಸ್ಥಿ ಸಂಧಿವಾತಕ್ಕೆ ರಾಮಬಾಣದಂತೆ ಪಚ್ಚಿಲೆ ಕೆಲಸ ಮಾಡುತ್ತದೆ. ಕೀಲು ನೋವಿನ ಸಮಸ್ಯೆ ಗಮನಾರ್ಹವಾಗಿ ಕಡಿಮೆ ಆಗುತ್ತದೆ.
ಇದನ್ನು ತಿನ್ನೋದರಿಂದ ಕರುಳಿನ ಆರೋಗ್ಯಕ್ಕೆ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ.
ನಯ ಹಾಗೂ ಮೃದುವಾದ ಚರ್ಮಕ್ಕೆ ಪಚ್ಚಿಲೆ ಸಹಾಯ ಮಾಡುತ್ತದೆ. ಚರ್ಮದ ಸುಕ್ಕನ್ನು ತಡೆಯುತ್ತದೆ.
ದೇಹದಲ್ಲಿನ ಹೆಚ್ಚಿನ ಕ್ಯಾಲೋರಿ ಕಡಿಮೆ ಮಾಡುವ ಡ್ರಿಂಕ್ಸ್‌ಗಳು!
ಸಂಜೆ ತಿಂಡಿಗೆ ಮಾಡ್ಕೊಳ್ಳಿ ಆರೋಗ್ಯಕರ ಸಬ್ಬಕ್ಕಿ ಮೊಮೊಸ್
ʼಮೀನುಪ್ರಿಯʼ ವಿಷ್ಣುವರ್ಧನ್; Steamed Fish ಮಾಡೋದು ಹೇಗೆ?
ಬಿರು ಬೇಸಿಗೆಯಲ್ಲಿ ಬಾಡಿಯನ್ನು ತಂಪಾಗಿರಿಸುವ 7 ಆಹಾರಗಳು!