Food
ಕೂದಲು ಬೆಳೆಯಲು ನೀವು ಖಂಡಿತವಾಗಿಯೂ ಆಹಾರದಲ್ಲಿ ಸೇರಿಸಬೇಕಾದ ಕೆಲವು ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ. ಬಯೋಟಿನ್ ಸಮೃದ್ಧ ಸಿಹಿ ಗೆಣಸನ್ನು ಆಹಾರದಲ್ಲಿ ಸೇರಿಸುವುದು ಕೂದಲು ಬೆಳೆಯಲು ಸಹಾಯ ಮಾಡುತ್ತದೆ.
ಪ್ರೋಟೀನ್, ಒಮೆಗಾ 3 ಕೊಬ್ಬಿನಾಮ್ಲ ಸಮೃದ್ಧ ಸಾಲ್ಮನ್‌ನಂತಹ ಕೊಬ್ಬು ತುಂಬಿದ ಮೀನು ತಿನ್ನುವುದು ಕೂದಲ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಪ್ರೋಟೀನ್, ಸತು, ಬಯೋಟಿನ್, ವಿಟಮಿನ್ ಡಿ ಸೇರಿದಂತೆ ಕೂದಲು ಆರೋಗ್ಯಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳು ಮೊಟ್ಟೆಯಲ್ಲಿವೆ.
ವಿಟಮಿನ್‌ಗಳು, ಸತು, ಕಬ್ಬಿಣಾಂಶ ಮತ್ತು ಫೋಲೇಟ್ ಸಮೃದ್ಧವಾಗಿರುವ ಸೊಪ್ಪು ಕೂದಲು ಬೆಳೆಯಲು ತುಂಬಾ ಒಳ್ಳೆಯದು.
ಒಮೆಗಾ ಕೊಬ್ಬಿನಾಮ್ಲಗಳು, ವಿಟಮಿನ್ ಇ, ಬಯೋಟಿನ್, ಸತು, ವಿಟಮಿನ್‌ಗಳು ಸಮೃದ್ಧವಾಗಿರುವ ಬಾದಾಮಿ, ವಾಲ್‌ನಟ್ಸ್, ಅಗಸೆ ಬೀಜಗಳು, ಚಿಯಾ ಬೀಜಗಳು ಕೂದಲು ಬೆಳೆಯಲು ಸಹಾಯ ಮಾಡುತ್ತವೆ.
ಪ್ರೋಟೀನ್, ಸತು ಮತ್ತು ಬಯೋಟಿನ್‌ನಿಂದ ಹೆಚ್ಚು ಸಮೃದ್ಧವಾಗಿರುವ ಬೇಳೆಕಾಳುಗಳನ್ನು ತಿನ್ನುವುದು ಕೂದಲ ಆರೋಗ್ಯಕ್ಕೆ ಒಳ್ಳೆಯದು.
ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿರುವ ಬೆರ್ರಿ ಹಣ್ಣುಗಳನ್ನು ತಿನ್ನುವುದು ಕೂದಲು ಬೆಳೆಯಲು ಸಹಾಯ ಮಾಡುತ್ತದೆ.