Food
ಅಡುಗೆಮನೆಯಲ್ಲಿ ತಪ್ಪುಗಳು ಸಾಮಾನ್ಯ. ಕೆಳಗಿನ ಈ ವಿಧಾನಗಳಿಂದ ಅಡುಗೆಯಲ್ಲಿನ ಖಾರ ಕಡಿಮೆ ಮಾಡಬಹುದು.,
ಮೊದಲ ಮತ್ತು ಸುಲಭವಾದ ಪರಿಹಾರವೆಂದರೆ ಖಾದ್ಯಕ್ಕೆ ಹೆಚ್ಚು ನೀರು ಅಥವಾ ಪದಾರ್ಥ ಸೇರಿಸುವುದು. ಅಡುಗೆ ನೀರಾದ್ರೆ ಬೇಕಿದ್ರೆ ಕಾರ್ನ್‌ಫ್ಲೋರ್ ಸೇರಿಸಿ ಸರಿಮಾಡಿಕೊಳ್ಳಿ.
ಅಡುಗೆ ಖಾರ ಹೆಚ್ಚಾದ್ರೆ ಹುಳಿ ಸೇರಿಸಬೇಕು. ನಿಂಬೆ ರಸ ಅಥವಾ ಹುಣಸೆಹಣ್ಣು ಬಳಸಬಹುದು. ಟೊಮೆಟೋ ಸಹ ಸೇರಿಸಬಹುದು.
ಖಾರವಾಗಿರುವ ಅಡುಗೆಗೆ ಆಲೂಗಡ್ಡೆ ಸೇರಿದಂತೆ ಇನ್ನಿತರ ತರಕಾರಿ ಸೇರಿಸಬಹುದು. ಈರುಳ್ಳಿ, ಗೆಣಸು ಸೇರಿಸಿದ್ರೆ ಖಾರ ಕಡಿಮೆಯಾಗುತ್ತದೆ.
ಅಡುಗೆಯಲ್ಲಿ ಖಾರ ಕಡಿಮೆ ಮಾಡಲು ತೆಂಗಿನ ಹಾಲು ಮತ್ತು ಕ್ರೀಮ್ ಅನ್ನು ಬಳಸಿ. ಇದು ಒಂದು ರೀತಿಯ ಮೃದುತ್ವ ಮತ್ತು ಖಾರದ ರುಚಿಯನ್ನು ಸಮತೋಲನಗೊಳಿಸುತ್ತದೆ. ತೆಂಗಿನ ಹಾಲಿನಿಂದ ಯಾವುದೇ ಹಾನಿ ಇಲ್ಲ.
ಆಮ್ಲದಂತೆಯೇ, ಸಕ್ಕರೆ ಅಥವಾ ಬೆಲ್ಲದಂತಹ ಸಿಹಿ ವಸ್ತುಗಳು ಸಹ ಸಹಾಯ ಮಾಡುತ್ತವೆ. ನೀವು ಎಷ್ಟು ಪ್ರಮಾಣದಲ್ಲಿ ಸಿಹಿ ಮಾಡುತ್ತಿದ್ದೀರಿ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.
ಗೋಡಂಬಿ ಪೇಸ್ಟ್, ವಾಲ್‌ನಟ್ ಪೇಸ್ಟ್ ಅಥವಾ ಬೆಣ್ಣೆ ಕೂಡ ಇದೇ ಕೆಲಸವನ್ನು ಮಾಡುತ್ತದೆ. ನೀವು ಒಂದು ಚಮಚ ಬಾದಾಮಿ ಅಥವಾ ಕಡಲೆಕಾಯಿ ಬೆಣ್ಣೆಯಿಂದ ನಿಮ್ಮ ಖಾದ್ಯವನ್ನು ದಪ್ಪವಾಗಿಸುವ ಮೂಲಕ ಖಾರವನ್ನು ತೆಗೆದುಹಾಕಬಹುದು.
ಈ ಸುಧಾರಣೆಗಳ ನಂತರವೂ, ಸಾಂಬಾರ್ ನಿರೀಕ್ಷೆಯಂತೆ ಇಲ್ಲ ಎಂದು ನೀವು ಭಾವಿಸಿದರೆ, ಅನ್ನ, ಆಲೂಗಡ್ಡೆ ಅಥವಾ ಬ್ರೆಡ್‌ನಂತಹ ಕೆಲವು ಪಿಷ್ಟ ಸೈಡ್ ಡಿಶ್‌ನೊಂದಿಗೆ ಬಡಿಸುವ ಮೂಲಕ ನೀವು ಅದನ್ನು ಚೆನ್ನಾಗಿ ನಿರ್ವಹಿಸಬಹುದು.