ಅಡುಗೆಗೆ ಕರಿಬೇವು ಒಂದು ವಿಶಿಷ್ಟ ರುಚಿ ಹಾಗೂ ಸುವಾಸನೆಯನ್ನು ನೀಡುತ್ತದೆ. ಇದರಲ್ಲಿರುವ ಔಷಧೀಯ ಗುಣಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
Image credits: Getty
Kannada
ಕರಿಬೇವು ಸಂಗ್ರಹಿಸುವ ವಿಧಾನ
ಕರಿಬೇವಿನ ಸೊಪ್ಪು ಹಾಳಾಗದಂತೆ ದೀರ್ಘಕಾಲ ಫ್ರೆಶ್ ಆಗಿ ಇಡುವುದು ಹೇಗೆ? ಅದನ್ನು ಸಂಗ್ರಹಿಸುವ ವಿಧಾನಗಳ ಬಗ್ಗೆ ಇಲ್ಲಿ ನೋಡೋಣ.
Image credits: Getty
Kannada
ಪ್ಲಾಸ್ಟಿಕ್ ಕವರ್
ಕರಿಬೇವಿನ ಸೊಪ್ಪನ್ನು ಚೆನ್ನಾಗಿ ತೊಳೆದು, ಬಟ್ಟೆಯ ಮೇಲೆ ಹರಡಿ ಒಣಗಿಸಿ. ನಂತರ ಟಿಶ್ಯೂ ಪೇಪರ್‌ನಲ್ಲಿ ಸುತ್ತಿ, ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಟ್ಟರೆ ಒಂದು ವಾರದವರೆಗೆ ಫ್ರೆಶ್ ಆಗಿರುತ್ತದೆ.
Image credits: Getty
Kannada
ಐಸ್ ಕ್ಯೂಬ್ ಟ್ರೇ
ತೊಳೆದು ಒಣಗಿಸಿದ ಕರಿಬೇವಿನ ಸೊಪ್ಪನ್ನು ಐಸ್ ಕ್ಯೂಬ್‌ಗಳಾಗಿ ಮಾಡಿ ಇಟ್ಟುಕೊಳ್ಳಿ. ನಂತರ ಬೇಕಾದಾಗ ಬಿಸಿ ನೀರಿಗೆ ಹಾಕಿ ಬಳಸಬಹುದು.
Image credits: Getty
Kannada
ಗಾಳಿಯಾಡದ ಡಬ್ಬಿ
ಕರಿಬೇವಿನ ಸೊಪ್ಪನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿದರೆ ಗರಿಗರಿಯಾಗುತ್ತದೆ. ನಂತರ ಅದನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿಟ್ಟರೆ ಹಲವು ತಿಂಗಳುಗಳವರೆಗೆ ಬಳಸಬಹುದು.
Image credits: Getty
Kannada
ಶುದ್ಧವಾದ ಬಟ್ಟೆ
ಕರಿಬೇವಿನ ಸೊಪ್ಪನ್ನು ಸ್ವಚ್ಛವಾದ ಬಟ್ಟೆಯಲ್ಲಿ ಕಟ್ಟಿ ಫ್ರಿಡ್ಜ್‌ನಲ್ಲಿಟ್ಟರೆ ಒಂದು ವಾರದವರೆಗೆ ತಾಜಾವಾಗಿ ಇರುತ್ತದೆ.