ಶುಂಠಿ ಕೀಲುಗಳು ಮತ್ತು ಮಸಲ್ಸ್ ನೋವು ನಿವಾರಣೆ ಮಾಡುವಲ್ಲಿ ಹಾಗೂ ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಅರಶಿನದಲ್ಲಿ ಕುರ್ಕ್ಯುಮಿನ್ ಎನ್ನುವ ರಾಸಾಯನಿಕ ಇದ್ದು, ಇದು ಉರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕೊಬ್ಬು ಇರುವಂತಹ ಮೀನುಗಳಾದ ಸಲ್ಮೋನ್ ಮತ್ತು ಸಾರ್ಡಿನ್ ಮೀನುಗಳಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಅಧಿಕವಾಗಿದ್ದು, ಇದು ಉರಿಯೂತವನ್ನು ನಿವಾರಿಸುತ್ತದೆ.
ಬೆರ್ರಿಗಳಾದ ಬ್ಲೂ ಬೆರ್ರಿ, ಸ್ಟ್ರಾಬೆರ್ರಿ, ಮತ್ತು ನೆಲ್ಲಿಕಾಯಿಗಳಲ್ಲಿ ಆಂಟಿ ಆಕ್ಸಿಡೆಂಟ್ ಅಧಿಕವಾಗಿದೆ. ಅವು ಉರಿಯೂತವನ್ನು ನಿವಾರಿಸುತ್ತದೆ.
ಹಸಿರು ತರಕಾರಿಗಳಾದ ಮೆಂತೆ ಸೊಪ್ಪು, ಪಾಲಕ್, ಹರಿವೆಯಂತಹ ತರಕಾರಿಗಳು ದೇಹದ ಉರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಎಕ್ಸ್ಟ್ರಾ ವರ್ಜಿನ್ ಆಲಿವ್ ಎಣ್ಣೆಯಲ್ಲಿ ಪ್ರಾಕೃತಿಕವಾಗಿಯೇ ಆಂಟಿ ಇಂಫ್ಲಮೇಟರಿ ಪ್ರಾಪರ್ಟಿ ಇದೆ. ಇದರಿಂದ ಉರಿಯೂತ ಕಡಿಮೆಯಾಗುತ್ತದೆ.
ನಟ್ಸ್ ಗಳಾದ ವಾಲ್ನಟ್ ಮತ್ತು ಬಾದಾಮಿಗಳು ಆರೋಗ್ಯಯುತ ಕೊಬ್ಬನ್ನು ನೀಡುತ್ತಿದ್ದು, ಇದು ಉರಿಯುತ ನಿವಾರಣೆಗೆ ಅತ್ಯುತ್ತಮವಾಗಿದೆ.
ಟೊಮ್ಯಾಟೊದಲ್ಲಿ ಲಿಕೋಪೇನ್ ಇದೆ, ಇದು ಉರಿಯೂತ ಗುರುತುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಗ್ರೀನ್ ಟೀಯಲ್ಲಿ ಆಂಟಿಆಕ್ಸಿಡೆಂಟ್ಸ್ ಇವೆ. ಇವು ದೇಹದ ಉರಿಯೂತ ಕಡಿಮೆ ಮಾಡುತ್ತೆ.
ಬೆಳ್ಳುಳ್ಳಿ ಇಮ್ಯೂನಿಟಿ ಬೂಸ್ಟ್ ಮಾಡಲು ಸಹಾಯ ಮಾಡುತ್ತದೆ. ತಾಜಾ ಬೆಳ್ಳುಳ್ಳಿ ಬಳಕೆಯಿಂದ ಉರಿಯೂತ ನಿವಾರಣೆಯಾಗುತ್ತದೆ.
ಮೊಟ್ಟೆ ಸಂಗ್ರಹಣೆ ಫ್ರಿಜ್‌ನಲ್ಲೋ ಅಥವಾ ಹೊರಗೋ? ಎಲ್ಲಿಟ್ಟರೇ ದೀರ್ಘ ಬಾಳಿಕೆ?
ವರ್ಕೌಟ್ ಮಾಡದೇ ತೂಕ ಇಳಿಸಲು, ಕೊಬ್ಬು ಕರಗಿಸಲು ಈ 5 ಸೂಪ್‌ಗಳನ್ನು ಟ್ರೈ ಮಾಡಿ!
ಅಡುಗೆಮನೆಯಲ್ಲಿ ಮಾಡುವ ಈ ತಪ್ಪುಗಳು ಕೊಲೆಸ್ಟ್ರಾಲ್ ಹೆಚ್ಚಾಗಲು ಕಾರಣ
ಅಡುಗೆ ಮನೆಯಲ್ಲಿ ಈ 5 ಟಿಪ್ಸ್ ಫಾಲೋ ಮಾಡಿ, ಅರ್ಧ ಗಂಟೆ ಮುಂಚೆಯೇ ಊಟ ತಯಾರಿಸಿ!