Kannada

ಮನೆಯಲ್ಲಿಯೇ ಅಲಿಗಢ್ ಆಲೂ ಬರುಲೆ!

Kannada

ಬೇಕಾಗುವ ಸಾಮಗ್ರಿಗಳು:

ಆಲೂಗಡ್ಡೆ ಕಡಲೆ ಹಿಟ್ಟು  1 ಕಪ್ ಅಕ್ಕಿ ಹಿಟ್ಟು ಶುಂಠಿ ಬೆಳ್ಳುಳ್ಳಿ ಪೇಸ್ಟ್ , ಅರಿಶಿನ, ಕೊತ್ತಂಬರಿ, ಹುರಿದ ಜೀರಿಗೆ , ಮಾವಿನಕಾಯಿ ಪುಡಿ, ಗರಂ ಮಸಾಲಾ ಬೇಕಿಂಗ್ ಸೋಡಾ ಉಪ್ಪು ಹಸಿರು ಮೆಣಸಿನಕಾಯಿ ಕೊತ್ತಂಬರಿ ಸೊಪ್ಪು 

Kannada

ಆಲೂಗಡ್ಡೆಯನ್ನು ಸಿದ್ಧಪಡಿಸಿ

ಬೇಯಿಸಿದ ಆಲೂಗಡ್ಡೆಯನ್ನು ಕೈಯಿಂದ ಹುಡಿಮಾಡಿ ಇದಕ್ಕೆ ಉಪ್ಪು, ಕೆಂಪು ಮೆಣಸಿನ ಪುಡಿ, ಹುರಿದ ಜೀರಿಗೆ ಪುಡಿ, ಮಾವಿನಕಾಯಿ ಪುಡಿ, ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

Kannada

ಬ್ಯಾಟರ್ (ಹಿಟ್ಟು) ತಯಾರಿಸಿ

ಬಟ್ಟಲಿನಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಅರಿಶಿನ, ಕೊತ್ತಂಬರಿ ಪುಡಿ, ಗರಂಮಸಾಲಾ, ಬೇಕಿಂಗ್ ಸೋಡಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು ಸೇರಿಸಿ. ನೀರು ಸೇರಿಸಿ ದಪ್ಪ ಹಿಟ್ಟು ತಯಾರಿಸಿ  10 ನಿಮಿಷ  ಮುಚ್ಚಿಡಿ.

Kannada

ಆಲೂಗಡ್ಡೆ ಉಂಡೆಗಳನ್ನು ಮಾಡಿ

ತಯಾರಿಸಿದ ಆಲೂಗಡ್ಡೆ ಮಸಾಲೆಯನ್ನು ಸಣ್ಣ ಉಂಡೆಗಳನ್ನಾಗಿ ಅಥವಾ ಟಿಕ್ಕಿಗಳ ಆಕಾರದಲ್ಲಿ ಮಾಡಿ. ಅವುಗಳನ್ನು ಲಘುವಾಗಿ ಒತ್ತಿ, ಇದರಿಂದ ಹುರಿಯುವಾಗ ಒಳಗೆ ಬೇಯುತ್ತವೆ.

Kannada

ಬಿಸಿ ಎಣ್ಣೆಯಲ್ಲಿ ಹುರಿಯಿರಿ

  • ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ ಮತ್ತು ಆಲೂಗಡ್ಡೆಯನ್ನು ಕಡಲೆ ಹಿಟ್ಟಿನಲ್ಲಿ ಅದ್ದಿ ಬಿಸಿ ಎಣ್ಣೆಯಲ್ಲಿ ಹಾಕಿ.
  • ಮಧ್ಯಮ ಉರಿಯಲ್ಲಿ ಗರಿಗರಿಯಾದ ಮತ್ತು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ.
Kannada

ವಿಶೇಷ ಮಸಾಲೆ ಚಿಮುಕಿಸಿ

ಬಿಸಿ ಬಿಸಿ ಬರುಲೆ ಮೇಲೆ ಕಾಳು ಉಪ್ಪು, ಚಾಟ್ ಮಸಾಲಾ  ಮಾವಿನಕಾಯಿ ಪುಡಿ ಚಿಮುಕಿಸಿ. ಇದು ಅವುಗಳಿಗೆ ನಿಜವಾದ ರುಚಿ ನೀಡುತ್ತದೆ. ಇದನ್ನು ಹಸಿರು ಕೊತ್ತಂಬರಿ-ಪುದೀನಾ ಚಟ್ನಿಯೊಂದಿಗೆ ಬಿಸಿಬಿಸಿಯಾಗಿ ಬಡಿಸಿ.

ಪುರುಷರ ಬಂಜೆತನ ನಿವಾರಿಸುತ್ತೆ ರಂಬೂಟಾನ್ : ಪೋಷಕಾಂಶಗಳ ಭಂಡಾರ ಈ ಹಣ್ಣು

ಗೃಹಿಣಿಯರೇ ಅಕ್ಕಿ, ಬೇಳೆಯಲ್ಲಿ ಹುಳುಗಳ ಕಾಟವೇ? ಇಲ್ಲಿದೆ ಸಿಂಪಲ್ ಟ್ರಿಕ್ಸ್

ಡಯಟ್ ಬಿಡಿ... ಹೀಗೂ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು

ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರಿಗೂ ಇಷ್ಟವಾಗುವ 7 ರವೆ ತಿಂಡಿಗಳು