ನಕಲಿ ತೊಗರಿ ಕಾಟ ಹೆಚ್ಚುತ್ತಿದ್ದು, ಕಂಡು ಹಿಡಿಯಲು ಇಲ್ಲಿವೆ ಕೆಲವು ಟಿಪ್ಸ್
ಹೆಚ್ಚಿದೆ ನಕಲಿ ಮಾರಾಟ
ಪ್ರತಿ ಭಾರತೀಯರ ಮನೆಯಲ್ಲೂ ನಿಯಮಿತವಾಗಿ ಬೇಳೆ ತಿನ್ನುತ್ತಾರೆ. ನಕಲಿ ತೊಗರಿ ಬೇಳೆಯನ್ನು ಮಾರುಕಟ್ಟೆಯಲ್ಲಿ ಮಾರುತ್ತಿದ್ದಾರೆ. ಹೇಗಪ್ಪಾ ಗುರುತುಸುವುದು ಇದನ್ನು?
ಇಲ್ಲಿವೆ ಈಸಿ ಟಿಪ್ಸ್
ದೇಸೀ ತೊಗರಿ ಬೇಳೆ ಗಾತ್ರದಲ್ಲಿ ಚಿಕ್ಕದು. ತಿಳಿ ಹಳದಿ ಬಣ್ಣದಲ್ಲಿರುತ್ತದೆ. ಹೈಬ್ರಿಡ್ ತೊಗರಿ ಬೇಳೆಯಲ್ಲಿ ಪೋಷಕಾಂಶಗಳು ಕಡಿಮೆ. ಗಾತ್ರದಲ್ಲಿ ದೊಡ್ಡದು. ಸಾವಯವ ತೊಗರಿಯಲ್ಲಿ ರಾಸಾಯನಿಕ ಇರುವುದಿಲ್ಲ.
ಗುಣಮಟ್ಟದ ಪತ್ತೆ ಹೇಗೆ?
ಕಡಿಮೆ ಬೆಲೆಗೆ ನಕಲಿ ತೊಗರಿ ಬೇಳೆ ಲಭ್ಯವಿದೆ. ಅಂತಹ ಪರಿಸ್ಥಿತಿಯಲ್ಲಿ, ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು, ಸ್ವಚ್ಛವಾದ ತೊಗರಿ ಬೇಳೆಯನ್ನು ಖರೀದಿಸಿ.
ಪಾಲಿಶ್ ಬೇಳೆ ಒಳ್ಳೆಯದೇ?
ಮಾರುಕಟ್ಟೆಯಲ್ಲಿ ಪಾಲಿಶ್ ಮಾಡಿದ, ಮಾಡದ ಬೇಳೆಗಳುಳೂ ಸಿಗುತ್ತವೆ. ಇವುಗಳಲ್ಲಿ ಪಾಲಿಶ್ ಮಾಡದ ಬೇಳೆ ಸಾವಯವವಾಗಿರುತ್ತದೆ, ನೀವು ಪಾಲಿಶ್ ಮಾಡದ ಬೇಳೆಯನ್ನು ಮಾತ್ರ ಖರೀದಿಸಿ.
ಬಣ್ಣದ ಮೂಲಕ ಗುರುತಿಸಿ
ಬೇಳೆಯನ್ನು ಸ್ವಲ್ಪ ಪುಡಿಯಾಗಿ ರುಬ್ಬಿಕೊಳ್ಳಿ. 5 ನಿಮಿಷಗಳ ಕಾಲ ಉಗುರು ಬೆಚ್ಚನೆ ನೀರಲ್ಲಿ ಬೆರೆಸಿ. ಇದರಿಂದ ಹಳದಿ ಬಣ್ಣ ಬೇರ್ಪಟ್ಟರೆ, ಅದರಲ್ಲಿ ಕೃತಕ ಬಣ್ಣ ಬೆರೆಸಲಾಗಿದೆ ಎಂದರ್ಥ.
ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ಪರೀಕ್ಷಿಸಿ
ಒಂದು ಚಮಚ ತೊಗರಿ ಬೇಳೆಯನ್ನು ನೀರಿನ ಜೊತೆ ಬೆರೆಸಿ. ಇದಕ್ಕೆ ಎರಡು ಹನಿ ಹೈಡ್ರೋಕ್ಲೋರಿಕ್ ಆಮ್ಲ ಹಾಕಿ. ಬೇಳೆ ಬಣ್ಣ ಬದಲಾದರೆ, ಕಲಬೆರಕೆ ಆಗಿದೆ ಎಂದರ್ಥ.
ಉಜ್ಜಿ ನೋಡಿ
ನೀವು ಮಾರುಕಟ್ಟೆಯಿಂದ ತೊಗರಿ ಬೇಳೆಯನ್ನು ಖರೀದಿಸಿದಾಗ, ಅದನ್ನು ನಿಮ್ಮ ಕೈಯಲ್ಲಿ ಉಜ್ಜಿ ನೋಡಿ, ಇದರಿಂದ ಬೇಳೆ ಹುಡಿಯಾದರೆ ಅದು ಹಳೆಯದು ಅಥವಾ ಹಾಳಾದ ಬೇಳೆ ಎಂದರ್ಥ.