ಸಾಕುಪ್ರಾಣಿಗಳ ಮೇಲಿನ ಪ್ರೀತಿಯಿಂದ, ಅವು ಕೇಳಿದ್ದನ್ನೆಲ್ಲಾ ಕೊಡುವವರು ನಮ್ಮಲ್ಲಿ ಹಲವರಿದ್ದಾರೆ. ಆದರೆ ಎಲ್ಲಾ ರೀತಿಯ ಆಹಾರಗಳು ಸಾಕುಪ್ರಾಣಿಗಳಿಗೆ ಸುರಕ್ಷಿತವಲ್ಲ.
ಚಾಕೊಲೇಟ್‌ನಲ್ಲಿ ಥಿಯೋಬ್ರೋಮಿನ್ ಮತ್ತು ಕೆಫೀನ್ ಇರುತ್ತದೆ. ಇವೆರಡೂ ನಾಯಿ ಮತ್ತು ಬೆಕ್ಕುಗಳಿಗೆ ಹಾನಿಕಾರಕ. ಆದ್ದರಿಂದ ಸಾಕುಪ್ರಾಣಿಗಳಿಗೆ ಚಾಕೊಲೇಟ್ ನೀಡುವುದನ್ನು ತಪ್ಪಿಸಿ.
ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಪ್ರಾಣಿಗಳಿಗೆ ಹಾನಿಕಾರಕವಾದ ಸಂಯುಕ್ತಗಳಿವೆ. ಇದು ಸಾಕುಪ್ರಾಣಿಗಳ ರಕ್ತ ಕಣಗಳನ್ನು ಹಾನಿಗೊಳಿಸುತ್ತದೆ ಮತ್ತು ರಕ್ತಹೀನತೆಗೆ ಕಾರಣವಾಗುತ್ತದೆ.
ಕಾಫಿಯಲ್ಲಿ ಕೆಫೀನ್ ಅಂಶವಿದೆ. ಇದು ಪ್ರಾಣಿಗಳಲ್ಲಿ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಇಂತಹ ಆಹಾರಗಳನ್ನು ಸಾಕುಪ್ರಾಣಿಗಳಿಗೆ ನೀಡಬಾರದು.
ದ್ರಾಕ್ಷಿ ತಿನ್ನುವುದು ಮನುಷ್ಯರಿಗೆ ಒಳ್ಳೆಯದಾದರೂ, ಪ್ರಾಣಿಗಳಿಗೆ ಸುರಕ್ಷಿತವಲ್ಲ. ಇದು ಪ್ರಾಣಿಗಳ ಮೂತ್ರಪಿಂಡಗಳಿಗೆ ಹಾನಿಯನ್ನುಂಟುಮಾಡುತ್ತದೆ.
ಅವಕಾಡೊದಲ್ಲಿ ಪರ್ಸಿನ್ ಎಂಬ ಅಂಶವಿದೆ. ಇದು ಪ್ರಾಣಿಗಳಲ್ಲಿ ವಾಂತಿ ಮತ್ತು ಹೊಟ್ಟೆನೋವಿಗೆ ಕಾರಣವಾಗುತ್ತದೆ.
ಸ್ವಲ್ಪ ಪ್ರಮಾಣದಲ್ಲಿಯೂ ಪ್ರಾಣಿಗಳಿಗೆ ಮದ್ಯವನ್ನು ನೀಡಬಾರದು. ಇದು ಅವುಗಳ ನರವ್ಯೂಹಕ್ಕೆ ಹಾನಿ ಮಾಡುತ್ತದೆ ಮತ್ತು ಅತಿಸಾರ, ವಾಂತಿಗೆ ಕಾರಣವಾಗುತ್ತದೆ.
ಬೇಯಿಸಿದ ಮೂಳೆಗಳನ್ನು ಸಾಕು ನಾಯಿಗಳಿಗೆ ನೀಡುವುದನ್ನು ತಪ್ಪಿಸಿ. ಇದು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲವಾದರೂ, ಬಾಯಿಯೊಳಗೆ ಗಾಯಗಳನ್ನು ಉಂಟುಮಾಡಬಹುದು.
ಚಹಾದೊಂದಿಗೆ ಈ 6 ತಿಂಡಿಗಳನ್ನು ತಿನ್ನುವುದು ತಕ್ಷಣವೇ ನಿಲ್ಲಿಸಿ, ವೈದ್ಯರ ಎಚ್ಚರಿಕೆ ಏನು?
ನೋಡಿ ಇಂತಹ ಸೂಪರ್ ಫುಡ್ಸ್ ತಿನ್ನಿ, ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತೆ!
ಕಡಿಮೆ ಸಕ್ಕರೆ ಅಧಿಕ ಫೈಬರ್ ಇರುವ ಈ ಹಣ್ಣುಗಳು ತಪ್ಪದೇ ತಿನ್ನಿ!
ವಿಟಮಿನ್ ಡಿ ಏಕೆ ಮುಖ್ಯ, ಯಾವ ಆಹಾರಗಳಲ್ಲಿ ಅದು ಅಧಿಕವಾಗಿದೆ ತಿಳಿಯಿರಿ