ಸಣ್ಣ ಪುಟ್ಟದ್ದನ್ನೂ ಅತಿಯಾಗಿ ಯೋಚಿಸಿ ಮೆದುಳಿಗೆ ಸುಸ್ತು ಮಾಡಿಸುವವರು ಯಾವ ರಾಶಿಗೆ ಸೇರಿರುತ್ತಾರೆ ಗೊತ್ತಾ?
festivals May 28 2023
Author: Suvarna News Image Credits:our own
Kannada
ಕನ್ಯಾ
ಸಣ್ಣ ನಿರ್ಧಾರವೇ ಆಗಲಿ, ಅಥವಾ ಜೀವನದ ದೊಡ್ಡ ನಿರ್ಧಾರವೇ ಆಗಲಿ- ಕನ್ಯಾ ರಾಶಿಯವರು ಎಲ್ಲವನ್ನೂ ಅತಿಯಾಗಿ ಅಳೆದು ತೂಗುತ್ತಾರೆ. ಇದರಿಂದ ಓವರ್‌ಥಿಂಕಿಂಗ್ ಇವರಲ್ಲಿ ಜಾಸ್ತಿ.
Image credits: our own
Kannada
ಮಿಥುನ
ಈ ರಾಶಿಯವರ ಮೆದುಳು ಸದಾ ಎಲ್ಲ ವಿಷಯಗಳ ಆದ್ಯತೆ, ಬಾದ್ಯತೆಯನ್ನು ಗುಣಿಸುತ್ತಾ, ಸಂಕಲಿಸುತ್ತಲೇ ಇರುತ್ತದೆ.
Image credits: our own
Kannada
ವೃಶ್ಚಿಕ
ಇವರು ಅದೆಷ್ಟು ಅತಿಯಾಗಿ ಯೋಚಿಸುತ್ತಾರೆಂದರೆ, ಯಾವೊಂದು ವಿಷಯವೂ ಸರಿ ಎನಿಸುವುದೇ ಇಲ್ಲವೆಂಬಷ್ಟು. ತಪ್ಪು ನಿರ್ಧಾರ ತೆಗೆದುಕೊಂಡರೆ ಎಂಬ ಭಯದಲ್ಲಿ ನಿರ್ಧಾರವೇ ತೆಗೆದುಕೊಳ್ಳುವುದಿಲ್ಲ.
Image credits: our own
Kannada
ಮೀನ
ಈ ರಾಶಿಯವರು ಸದಾ ತಾವು ಮಾಡಿದ ಆಯ್ಕೆ, ತೆಗೆದುಕೊಂಡ ನಿರ್ಧಾರದ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ಹಾಗೆ ಮಾಡಬಹುದಿತ್ತು, ಹೀಗೆ ಮಾಡಬಹುದಿತ್ತು ಎಂಬ ಹಳಹಳಿಕೆ ನಿಲ್ಲುವುದೇ ಇಲ್ಲ.
Image credits: our own
Kannada
ಕರ್ಕಾಟಕ
ತಮಗೇ ಸುಸ್ತಾಗಿ ಬಿಡುವಷ್ಟು ಆಗಿ ಹೋದ ವಿಷಯಗಳ ಬಗ್ಗೆ ಕೊರಗೀ ಕೊರಗಿ ಇಡುತ್ತಾರೆ.
Image credits: our own
Kannada
ಮಕರ
ಮನಸ್ಸಿಗೆ ಪುರುಸೊತ್ತೇ ಕೊಡದಷ್ಟು ಒಂದು ಯೋಚನೆಯಿಂದ ಮತ್ತೊಂದು ಯೋಚನೆಗೆ ಹೊರಳುತ್ತಲೇ ಇರುತ್ತಾರೆ.
Image credits: our own
Kannada
ತುಲಾ
ತೆಗೆದುಕೊಳ್ಳುವ ನಿರ್ಧಾರವೊಂದು ಇವರ ತಲೆಯಲ್ಲಿ ಹುಳದಂತೆ ಹೊಕ್ಕರೆ ಕಡೆಗೆ ಯಾವ ನಿರ್ಧಾರವೂ ತೆಗೆದುಕೊಳ್ಳಲು ಮನಸ್ಸಿಗೆ ಶಕ್ತಿ ಇಲ್ಲದ ಸ್ಥಿತಿ ತಲುಪಬಹುದು.