Festivals

ರಾಧೆ ಮಾ ಪುತ್ರ ಚಿತ್ರಕ್ಕೆ

ಸ್ವಘೋಷಿತ ದೇವಮಹಿಳೆ ರಾಧೆ ಮಾ ಅವರ ಮಗ ಹರ್ಜಿಂದರ್ ಸಿಂಗ್, ರಣದೀಪ್ ಹೂಡಾ ಅವರ ಮುಂಬರುವ ಸರಣಿ 'ಇನ್‌ಸ್ಪೆಕ್ಟರ್ ಅವಿನಾಶ್' ನೊಂದಿಗೆ OTT ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.

Image credits: our own

ತನಿಖಾಧಿಕಾರಿ ಪಾತ್ರ

ಈ ಸರಣಿಯಲ್ಲಿ ಯುವ ಮತ್ತು ಮಹತ್ವಾಕಾಂಕ್ಷೆಯ ಎಸ್‌ಟಿಎಫ್ ಅಧಿಕಾರಿಯಾಗಿ ಹರ್ಜಿಂದರ್ ಕಾಣಿಸಿಕೊಳ್ಳಲಿದ್ದಾರೆ. ಅವರು ಉತ್ತರ ಪ್ರದೇಶದಲ್ಲಿ ಬೆಳೆಯುತ್ತಿರುವ ಅಪರಾಧ ಸಿಂಡಿಕೇಟ್‌ನ ತನಿಖೆಯನ್ನು ವಹಿಸಲಿದ್ದಾರೆ.

Image credits: our own

ಯಾರು ಈ ರಾಧೆ ಮಾ?

ರಾಧೆ ಮಾ ತನ್ನನ್ನು ದುರ್ಗೆಯ ಅವತಾರ ಎಂದು ಹೇಳಿಕೊಳ್ಳುತ್ತಾಳೆ. ಸಾವಿರಾರು ಅನುಯಾಯಿಗಳನ್ನು ಹೊಂದಿರುವ ಆಕೆಗಾಗಿ ದೇವಾಲಯಗಳೂ ಇವೆ. 

 

Image credits: our own

ಬಿಗ್ ಬಾಸ್‌ನಲ್ಲಿ ಮಾ

ಆಕೆ ಜನಪ್ರಿಯ ರಿಯಾಲಿಟಿ ಶೋ ಹಿಂದಿ 'ಬಿಗ್ ಬಾಸ್' ನಲ್ಲಿ ಭಾಗವಹಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ಮನೆಯಿಂದ ಹೊರ ಹೋಗಿದ್ದರು.

Image credits: our own

ಗಮನದ ಕೇಂದ್ರಬಿಂದುವಾಗುವಾಸೆ

ರಾಧೆ ಮಾ ಅವರಂತೆಯೇ, ಅವರ ಮಗ ಹರ್ಜಿಂದರ್ ಕೂಡ ಶೋ ಬಿಜ್‌ಗೆ ಒಲವು ತೋರುತ್ತಿದ್ದಾರೆ . ಎಲ್ಲರ ಗಮನದ ಕೇಂದ್ರಬಿಂದುವಾಗಲು ಅವರು ನಟನೆ ಆರಿಸಿಕೊಂಡಿದ್ದಾರೆ.

Image credits: our own

ರಾಧೆ ಮಾ ವಿವಾಹ

ರಾಧೆ ಮಾ ಪಂಜಾಬ್‌ನಲ್ಲಿ ಜನಿಸಿದಳು. 4ನೇ ತರಗತಿ ಓದಿರುವ ಆಕೆ 17 ನೇ ವಯಸ್ಸಿನಲ್ಲಿ ಮೋಹನ್ ಸಿಂಗ್ ಅವರನ್ನು ವಿವಾಹವಾದರು. ಪತಿ ಕೆಲಸಕ್ಕಾಗಿ ವಿದೇಶಕ್ಕೆ ಹೋದಾಗ ಅವಳಿಗೆ ಇಬ್ಬರು ಗಂಡು ಮಕ್ಕಳಿದ್ದರು. 

Image credits: our own

ತ್ರಿಶೂಲಧಾರಿಣಿ

ಸದಾ ವಿವಾದದಲ್ಲಿರುವ ರಾಧೆ ಮಾ ಕೆಂಪು ಬಣ್ಣವನ್ನು ಇಷ್ಟಪಡುತ್ತಾಳೆ; ಅವಳು ಯಾವಾಗಲೂ ಕೆಂಪು ಬಟ್ಟೆಗಳನ್ನು ಧರಿಸುತ್ತಾಳೆ ಮತ್ತು ಮಿನಿ ತ್ರಿಶೂಲವನ್ನು ಒಯ್ಯುತ್ತಾಳೆ.
 

Image credits: our own

ಅಸಭ್ಯ ಚಿತ್ರಗಳು

ಆಕೆಯ ಅಧಿಕೃತ ವೆಬ್‌ಸೈಟ್ 2015 ರಲ್ಲಿ ಹ್ಯಾಕ್ ಆದಾಗ ಕೆಂಪು ಮಿನಿಸ್ಕರ್ಟ್ ಮತ್ತು ಬೂಟುಗಳನ್ನು ಧರಿಸಿರುವ ಆಕೆಯ ಅಸಭ್ಯ ಚಿತ್ರಗಳು ಆನ್‌ಲೈನ್‌ನಲ್ಲಿ ಹರಿದಾಡಿದವು.

Image credits: our own

ಈ ತಾರೆಯರಿಗಾಗಿ ನಿರ್ಮಾಣವಾಗಿವೆ ದೇವಾಲಯ!

ಸಂಪತ್ತಿನ ಭವಿಷ್ಯ ಹೇಳುವ ಹಾವು!

ನಿಮ್ಮ ಗಂಡು ಮಗುವಿಗಿಡಿ ಶಿವನ ಮುದ್ದಾದ ಹೆಸರು

ಸರ್ವರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು