ನಿಮಗೆ ಗೊತ್ತಾ ಸ್ವರ್ಗದಲ್ಲಿರುವ ದೇವರು ಕೂಡ ಚರ್ಚೆಯಲ್ಲಿ ತೊಡಗುತ್ತಾರೆ ಅನ್ನೋದು ನಿಮಗೆ ಗೊತ್ತಾ? ಲಕ್ಷ್ಮೀ ದೇವಿ ಜೊತೆ ಕೂಡ ಇದೇ ಅಗಿತ್ತು.
festivals Dec 31 2025
Author: Pavna Das Image Credits:pinterest
Kannada
ಲಕ್ಷ್ಮೀ ದೇವಿ ಮೇಲೆ ಕೋಪ
ಒಂದು ಬಾರಿ ಸಂಪತ್ತಿನ ದೇವತೆಯಾದ ಮಹಾಲಕ್ಷ್ಮೀಗೆ ಎಲ್ಲಾ ದೇವತೆಯರು ತನ್ನನ್ನು ಮೂಲೆಗುಂಪು ಮಾಡುತ್ತಾರೆ ಎಂದೆನಿಸಿತು.
Image credits: istock
Kannada
ಕಾರಣ ಇಷ್ಟೇ
ದೇವತೆಗಳು ಲಕ್ಷ್ಮೀಯನ್ನು ಜರಿಯುತ್ತಾ, ನೀನು ಯಾವತ್ತೂ ಒಂದೇ ಜಾಗದಲ್ಲಿ ತುಂಬಾ ಹೊತ್ತು ಇರೋದೆ ಇಲ್ಲ. ಒಂದು ಕಡೆ ಆರಾಮವಾಗಿದೆ ಅಂದಕೋಡಲೇ ಬೇರೆ ಜಾಗಕ್ಕೆ ಹೋಗುವೆ ಯಾಕೆ ಎಂದು ಪ್ರಶ್ನಿಸಿದರು.
Image credits: pinterest ai modified
Kannada
ಇದು ಸುಳ್ಳು ಎಂದ ಲಕ್ಷ್ಮಿ
ದೇವತೆಗಳು ಹೀಗೆ ಹೇಳಿದ ತಕ್ಷಣ ಲಕ್ಷ್ಮೀ ದೇವಿ ಅಲ್ಲ, ಇದು ಸುಳ್ಳು, ಯಾವ ಮನೆಯಲ್ಲಿ ನನಗೆ ಸ್ವಾಗತ ದೊರೆಯುತ್ತೊ, ಆ ಮನೆಯಲ್ಲಿ ನಾನು ವಾಸ ಮಾಡುತ್ತೇನೆ ಎಂದರು.
Image credits: pixabay
Kannada
ಎಲ್ಲಿರುತ್ತಾಳೆ ಲಕ್ಷ್ಮೀ
ಆ ಮನೆಯ ಜನರು ಮುಂದಾಲೋಚನೆ ಮಾಡಿ ಬದುಕಿದರೆ, ಶ್ರದ್ಧೆಯಿಂದ ಕೆಲಸ ಮಾಡಿದರೆ ಹಾಗೂ ಬುದ್ದಿವಂತಿಕೆಯಿಂದ ಹಣ ಉಳಿಸಿದರೆ ಅವರೊಂದಿಗೆ ನಾನು ಸದಾ ಇರುತ್ತೇನೆ.
Image credits: Getty
Kannada
ಈ ಕಾರಣ ಒಂದು ಜಾಗದಲ್ಲಿ ಉಳಿಯಲ್ಲ ಲಕ್ಷ್ಮೀ
ಆದರೆ ಏನಾಗುತ್ತೆ ಅಂದ್ರೆ, ನಾನು ಯಾವಾಗ ಒಂದು ಸ್ಥಳದಲ್ಲಿ ಹೆಚ್ಚು ಸಮಯ ಇರುತ್ತೇನೆಯೋ, ಅಲ್ಲಿ ಜನರು ವಿಚಿತ್ರವಾಗಿ ವರ್ತಿಸಲು ಶುರು ಮಾಡುತ್ತಾರೆ. ಹಾಗಾಗಿ ನಾನು ಆ ಜಾಗವನ್ನು ಬಿಡಬೇಕಾಗುತ್ತೆ.
Image credits: pinterest
Kannada
ಭೂಮಿಗೆ ವರುಷ, ಲಕ್ಷ್ಮೀಗೆ ನಿಮಿಷ
ನೆನಪಿರಲಿ ನಿಮಗೆ ವರ್ಷವಾದುದು, ಲಕ್ಷ್ಮೀ ದೇವಿಗೆ ನಿಮಿಷ. ಹಾಗಾಗಿ ನೀವು ಶ್ರೀಮಂತರಾದ ಬಳಿಕ, ನಿಮ್ಮ ಜೀವನ, ಗುಣ, ಆಚಾರ, ವಿಚಾರಗಳನ್ನು ಬದಲಿಸಬೇಡಿ. ಸನ್ನಡತೆಯಿಂದ ನಡೆಯಿರಿ. ಆವಾಗ ಲಕ್ಷ್ಮೀ ನಿಮ್ಮ ಜೊತೆ ಇರುತ್ತಾಳೆ.