ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರವು ಒಂದು ಪ್ರಮುಖ ಭಾಗ. ಆದರೆ ವಾಸ್ತು ಪ್ರಕಾರ, ಹಾಸಿಗೆಯ ಮೇಲೆ ಕುಳಿತು ಊಟ ಮಾಡಬಾರದು. ಏಕೆ?
ಬಡತನಕ್ಕೆ ದಾರಿ ಮಾಡಿಕೊಡುತ್ತದೆ
ಮಲಗುವ ಕೋಣೆಯಲ್ಲಿ ಹಾಸಿಗೆಯ ಮೇಲೆ ಕುಳಿತು ಊಟ ಮಾಡಿದರೆ ನೀವು ಬಡತನವನ್ನು ಎದುರಿಸಬೇಕಾಗುತ್ತದೆ. ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುವುದು ಒಳ್ಳೆಯದು.
ಲಕ್ಷ್ಮೀದೇವಿ ದೂರವಾಗುತ್ತಾಳೆ
ನೀವು ಪ್ರತಿದಿನ ಹಾಸಿಗೆಯ ಮೇಲೆ ಕುಳಿತು ಊಟ ಮಾಡುತ್ತಿದ್ದರೆ ನಿಮ್ಮ ಮನೆಯಲ್ಲಿ ಹಣದ ಕೊರತೆ ಉಂಟಾಗಬಹುದು. ವಾಸ್ತು ಪ್ರಕಾರ, ಮಲಗುವ ಕೋಣೆ ಇರುವುದು ಕೇವಲ ಮಲಗಲು ಮಾತ್ರ.
ಮನೆಯಲ್ಲಿ ಅಶಾಂತಿ
ಹಾಸಿಗೆಯ ಮೇಲೆ ತಿಂದರೆ ನಿಮ್ಮ ಮನೆಯಲ್ಲಿ ಶಾಂತಿ ಕಡಿಮೆಯಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಈ ಅಭ್ಯಾಸ ಮನೆಯಲ್ಲಿ ಅಶಾಂತಿಗೆ ಕಾರಣವಾಗುತ್ತದೆ.
ಸಾಲದ ಹೊರೆ ಹೆಚ್ಚಾಗುತ್ತದೆ
ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯಲ್ಲಿ ತಿನ್ನುವವರು ವಿಪರೀತವಾಗಿ ಸಾಲ ಮಾಡುತ್ತಾರೆ. ಇವರಿಗೆ ಯಾವಾಗಲೂ ಸಾಲದ ಸಮಸ್ಯೆ ಇರುತ್ತದೆ. ಇದು ಬಹಳ ದುಃಖಕ್ಕೆ ಕಾರಣವಾಗುತ್ತದೆ.
ನಿದ್ರಾಹೀನತೆ
ಮಲಗುವ ಕೋಣೆಯಲ್ಲಿ ತಿನ್ನುವವರಿಗೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ. ಅಷ್ಟೇ ಅಲ್ಲ ಕೆಲವೊಮ್ಮೆ ಆಹಾರದ ವಾಸನೆಗೆ ಮನೆಯೊಳಗೆ ಕೀಟಗಳು ಬರುತ್ತವೆ.
ಆಹಾರ
ಶುಚಿಯಾದ ಸ್ಥಳದಲ್ಲಿ ಊಟ ಮಡೋದರಿಂದ ಅನ್ನಪೂರ್ಣ ದೇವಿಯನ್ನು ಗೌರವಿಸಿದಂತಾಗುತ್ತದೆ. ಇದರಿಂದ ಮನೆಯಲ್ಲಿನ ದಾಸ್ತಾನು ಕಡಿಮೆಯಾಗುವುದಿಲ್ಲ.