ಶ್ರಾವಣದಲ್ಲಿ ಜನಿಸಿದವರ ಮನಸ್ಸಿನಲ್ಲಿ ಮೋಸ ಇರೋದಿಲ್ಲ. ಮನಸ್ಸು ನಿಷ್ಕಲ್ಮಶವಾಗಿರುತ್ತೆ, ಈ ಕಾರಣದಿಂದ ಎಲ್ಲರೂ ಅವರನ್ನು ಇಷ್ಟಪಡುತ್ತಾರೆ. ಅವರ ಸ್ವಭಾವವೂ ಸ್ವಲ್ಪ ಮಟ್ಟಿಗೆ ಶಿವನಂತೆಯೇ ಇರುತ್ತೆ.
Image credits: Pexels
ಪ್ರಾಮಾಣಿಕತೆ
ಈ ಜನರು ಪ್ರತಿಯೊಂದು ಸಂಬಂಧದ ಜೊತೆ ಪ್ರಾಮಾಣಿಕರಾಗಿರ್ತಾರೆ. ಗೆಳೆಯರಾಗೋದು ಕಡಿಮೆ, ಆದ್ರೆ ಮಾತ್ರ ಎಂತಹ ಸಂದರ್ಭದಲ್ಲೂ ಅವರ ಜೊತೆ ಪ್ರಾಮಾಣಿಕವಾಗಿರ್ತಾರೆ.
Image credits: Pexels
ಆರ್ಥಿಕ ಪರಿಸ್ಥಿತಿ
ಶ್ರಾವಣದಲ್ಲಿ ಜನಿಸಿದ ಜನರು ತಮ್ಮ ಜೀವನದುದ್ದಕ್ಕೂ ಶಿವನ ಆಶೀರ್ವಾದವನ್ನು ಪಡೆಯುತ್ತಾರೆ. ಆದ್ದರಿಂದ, ಅವರು ಯಾವುದೇ ಕ್ಷೇತ್ರದಲ್ಲಿ ಹೆಜ್ಜೆ ಹಾಕಿದರೂ, ಯಶಸ್ಸನ್ನು ಪಡೆಯುತ್ತಾರೆ.
Image credits: Pexels
ವ್ಯಾಪಾರ ಕ್ಷೇತ್ರದಲ್ಲಿ ಯಶಸ್ಸು
ಅವರು ಕ್ರೀಡೆ ಮತ್ತು ವ್ಯವಹಾರ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುತ್ತಾರೆ. ಶಿವನ ಅನುಗ್ರಹದಿಂದ, ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿರುತ್ತೆ, ಏನನ್ನೂ ಪಡೆಯಲು ಕಷ್ಟಪಡಬೇಕಾಗಿಲ್ಲ.
Image credits: Pexels
ಲವ್ ಲೈಫ್
ಶ್ರಾವಣ ಮಾಸದಲ್ಲಿ ಜನಿಸಿದ ಜನರು ಯಾರನ್ನಾದರೂ ಬೇಗ ಪ್ರೀತಿಸುತ್ತಾರೆ. ಇತರ ವ್ಯಕ್ತಿಗಳು ಇವರ ಗುಣಗಳು ಮತ್ತು ಸ್ವಭಾವದಿಂದಾ ಬೇಗ ಆಕರ್ಷಿತರಾಗ್ತಾರೆ..
Image credits: Pexels
ಅದೃಷ್ಟವಂತರು
ಶ್ರಾವಣದಲ್ಲಿ ಜನಿಸಿದ ಜನರು ಅದೃಷ್ಟವಂತರು. ಅಂತಹ ಜನರ ಮೇಲೆ ಶಿವನ ಅನುಗ್ರಹ ಇರುತ್ತೆ. ಈ ಜನರು ಹೆಚ್ಚಾಗಿ ತಮ್ಮ ನಿರ್ಧಾರಗಳನ್ನು ಮನಸ್ಸಿನ ಬದಲು ಹೃದಯದಿಂದ ತೆಗೆದುಕೊಳ್ಳುತ್ತಾರೆ.
Image credits: Pexels
ಶಾಂತ ಸ್ವಭಾವ
ಈ ತಿಂಗಳಲ್ಲಿ ಜನಿಸಿದ ಮಕ್ಕಳು ಪ್ರತಿಯೊಂದು ಪರಿಸ್ಥಿತಿಯಲ್ಲೂ ಶಿವನಂತೆ ತುಂಬಾ ಶಾಂತವಾಗಿರುತ್ತಾರೆ, ಆದರೆ ಅವರು ಕೋಪ ಬಂದ್ರೆ ಮಾತ್ರ ಉಗ್ರ ರೂಪ ನೋಡಬೇಕಾಗುತ್ತೆ.