ಬ್ಯಾಕ್‌ಲೆಸ್ ಬ್ಲೌಸ್‌ನ ಹೊಸ ಅಂದ, 7 ಟ್ರೆಂಡಿ ಡೋರಿ ಡಿಸೈನ್ಸ್
fashion Jun 28 2026
Author: Govindaraj S Image Credits:instagram
Kannada
ಡೀಪ್ ನೆಕ್ ಬ್ಯಾಕ್‌ಲೆಸ್ ಬ್ಲೌಸ್
ಬ್ಲೌಸ್ ಅಂದಮೇಲೆ ಡೋರಿ ಇಲ್ಲದೆ ಇರೋಕೆ ಸಾಧ್ಯವೇ ಇಲ್ಲ. ಮನೆಯಲ್ಲಿ ಮದುವೆ ಇದ್ದು, ಎಲ್ಲರಿಗಿಂತ ಡಿಫರೆಂಟ್ ಆಗಿ ಕಾಣಿಸಬೇಕಿದ್ದರೆ, ನಿಮ್ಮ ವಾರ್ಡ್‌ರೋಬ್‌ನಲ್ಲಿ ಫ್ಯಾನ್ಸಿ ಬ್ಯಾಕ್ ಡೋರಿ ಬ್ಲೌಸ್ ಇರಲೇಬೇಕು.
Image credits: filmygyan Instagram
Kannada
ವಿ-ನೆಕ್ ಡೋರಿ ಬ್ಲೌಸ್
ನಿಮ್ಮ ಫಿಗರ್ ಫ್ಲಾಂಟ್ ಮಾಡಬೇಕೆಂಬ ಆಸೆ ಇದ್ರೆ, ಲಹೆಂಗಾ ಅಥವಾ ಸೀರೆ ಜೊತೆ ವಿ-ನೆಕ್ ಡೋರಿ ಬ್ಲೌಸ್ ಸೂಪರ್ ಆಗಿ ಕಾಣುತ್ತೆ. ಇದರಲ್ಲಿ ರಿವರ್ಸ್ 'ವಿ' ಆಕಾರದಲ್ಲಿ ಡೋರಿ ನೀಡಲಾಗಿದೆ.
Image credits: pinterest
Kannada
ಬ್ಯಾಕ್‌ಲೆಸ್ ಡೋರಿ ಬ್ಲೌಸ್
ಬೋಲ್ಡ್ ಹಾಗೂ ಸ್ಟೈಲಿಶ್ ಲುಕ್ ಎರಡೂ ಒಟ್ಟಿಗೆ ಬೇಕಿದ್ದರೆ, ಡೌನ್ ಡೋರಿ ಬ್ಲೌಸ್ ಆಯ್ಕೆ ಮಾಡಿ. ಇದರಲ್ಲಿ ಫ್ರಂಟ್ ಡೀಪ್ ಇಟ್ಟು, ಬ್ಯಾಕ್ ಓಪನ್ ಇಡಲಾಗುತ್ತದೆ. ಜೊತೆಗೆ ಡೋರಿ ಅದ್ಭುತವಾಗಿ ಕಾಣುತ್ತದೆ.
Image credits: pinterest
Kannada
ಕ್ರಿಸ್-ಕ್ರಾಸ್ ಡೋರಿ ಬ್ಲೌಸ್
ಪೂರ್ತಿ ಬ್ಯಾಕ್‌ಲೆಸ್ ಬದಲು ಏನಾದ್ರೂ ಡಿಫರೆಂಟ್ ಬೇಕು ಅಂದ್ರೆ, ಪಫ್ ಸ್ಲೀವ್ ಜೊತೆಗಿನ ಕ್ರಿಸ್-ಕ್ರಾಸ್ ಡೋರಿ ಬ್ಲೌಸ್ ನಿಮ್ಮ ವಾರ್ಡ್‌ರೋಬ್‌ಗೆ ಸೇರಿಸಿಕೊಳ್ಳಿ. ಇದು ಅತೀ ಸರಳ ಸೀರೆಗೂ ಒಂದು ಹೊಸ ಕಳೆ ನೀಡುತ್ತದೆ.
Image credits: social media
Kannada
ಹಾಲ್ಟರ್ ನೆಕ್ ಡೋರಿ ಬ್ಲೌಸ್
ಸಣ್ಣ ಎದೆಯುಳ್ಳ ಮಹಿಳೆಯರು ಬ್ಯಾಕ್‌ಲೆಸ್ ಹಾಲ್ಟರ್ ನೆಕ್ ಡೋರಿ ಬ್ಲೌಸ್ ಟ್ರೈ ಮಾಡಬಹುದು. ಬೋಲ್ಡ್ ಅಥವಾ ರಿವೀಲಿಂಗ್ ಡ್ರೆಸ್ ಇಷ್ಟಪಡುವ ಮಹಿಳೆಯರಿಗೆ ಬೆಸ್ಟ್ ಚಾಯ್ಸ್. ಇದನ್ನು ನೀವು ಕಾಟನ್ ಸೀರೆ ಜೊತೆ ಧರಿಸಬಹುದು.
Image credits: social media
Kannada
ಡಬಲ್ ಡೋರಿ ಬ್ಲೌಸ್
ಸ್ಯಾಟಿನ್ ಫ್ಯಾಬ್ರಿಕ್ ಮತ್ತು ಜರಿ ವರ್ಕ್ ಇರುವ ಈ ಡೋರಿ ಬ್ಲೌಸ್ ನಿಮ್ಮ ಪಾರ್ಟಿ ಲುಕ್‌ಗೆ ಹೊಸ ಮೆರುಗು ನೀಡುತ್ತದೆ. ಇದರಲ್ಲಿ ಬೆನ್ನನ್ನು ಗ್ಲಾಮರಸ್ ಆಗಿ ಕಾಣುವಂತೆ ಡಬಲ್ ಡೋರಿ ನೀಡಲಾಗಿದೆ.
Image credits: instagram
Kannada
ಹಾಫ್ ಕವರ್ ಡೋರಿ ಬ್ಲೌಸ್
ರಿವೀಲಿಂಗ್ ಬ್ಲೌಸ್ ಧರಿಸಿದರೆ ನಿಮ್ಮ ಪತಿ ಪೊಸೆಸಿವ್ ಆಗ್ತಾರಾ? ಹಾಗಿದ್ರೆ ನೀವು ಹಾಫ್ ಕವರ್ ಬ್ಯಾಕ್‌ಲೆಸ್ ಡೋರಿ ಬ್ಲೌಸ್ ಹೊಲಿಸಿಕೊಳ್ಳಿ. ಇದರಲ್ಲಿ ಬೆನ್ನಿನ ಮೇಲ್ಭಾಗದಲ್ಲಿ ಡಿಸೈನ್ ಇದೆ.