ನಟಿಯರು ಅಥವಾ ಮಾಡೆಲ್‌ಗಳಂತೆ ನೇರ (Straight) ಕೂದಲು ಹೊಂದಲು ಎಲ್ಲರಿಗೂ ಇಷ್ಟ. ಇದಕ್ಕಾಗಿ ಅನೇಕರು ಪ್ರತಿದಿನ ಹೇರ್ ಸ್ಟ್ರೇಟ್‌ನರ್ ಅಥವಾ ಡ್ರೈಯರ್ ಬಳಸುತ್ತಾರೆ. ಆದರೆ ಇದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ.
fashion Aug 02 2026
Author: Ashwini HR Image Credits:pinterest
Kannada
ಮಾಯವಾಗುವ ತೇವಾಂಶ!
ಕೂದಲಿನ ಮೇಲೆ ಪ್ರತಿದಿನ ಹೀಟ್ (Heat) ಬಳಸುವುದರಿಂದ ಕೂದಲಿನ ನೈಸರ್ಗಿಕ ತೇವಾಂಶ ಕಡಿಮೆಯಾಗುತ್ತದೆ. ಇದರಿಂದ ಕೂದಲು ಅತಿಯಾಗಿ ಒಣಗಿದಂತಾಗಿ (Dry Hair) ತನ್ನ ಮೃದುತ್ವವನ್ನು ಕಳೆದುಕೊಳ್ಳುತ್ತದೆ.
Image credits: pinterest
Kannada
ದುರ್ಬಲಗೊಳ್ಳುವ ಬೇರುಗಳು
ನಿಯಮಿತವಾಗಿ ಹೀಟಿಂಗ್ ಟೂಲ್ಸ್ ಬಳಸುವುದರಿಂದ ಕೂದಲಿನ ಬೇರುಗಳು ಅಥವಾ ಬುಡ ದುರ್ಬಲಗೊಳ್ಳುತ್ತವೆ. ಇದರಿಂದ ಕೂದಲು ಉದುರುವಿಕೆ (Hair Fall) ಸಮಸ್ಯೆ ಭೀಕರವಾಗಿ ಕಾಡಬಹುದು.
Image credits: pinterest
Kannada
ಸೀಳು ಕೂದಲಿನ ಸಮಸ್ಯೆ (Split Ends)
ಅತಿಯಾದ ಬಿಸಿಯಿಂದಾಗಿ ಕೂದಲಿನ ತುದಿಗಳು ಸೀಳಲು ಪ್ರಾರಂಭಿಸುತ್ತವೆ. ಇದರಿಂದ ಕೂದಲು ಬೆಳೆಯುವುದು ನಿಲ್ಲುವುದಲ್ಲದೆ, ನೋಡಲು ನಿರ್ಜೀವವಾಗಿ ಮತ್ತು ಅಸ್ತವ್ಯಸ್ತವಾಗಿ ಕಾಣಿಸುತ್ತದೆ.
Image credits: Pexels
Kannada
ನೆತ್ತಿಯ ಮೇಲೆ ಕಿರಿಕಿರಿ (Scalp Irritation)
ಸ್ಟ್ರೇಟ್‌ನರ್ ಬಳಸುವಾಗ ನೆತ್ತಿಯು ಬಿಸಿಯಾಗುತ್ತದೆ. ಇದರಿಂದ ತಲೆಯಲ್ಲಿ ಡ್ರೈನೆಸ್ ಹೆಚ್ಚಾಗಿ ತುರಿಕೆ ಮತ್ತು ತಲೆಹೊಟ್ಟು ಉಂಟಾಗಬಹುದು. ಕೆಲವೊಮ್ಮೆ ಇದು ತೀವ್ರಗೊಂಡು ವೈದ್ಯರ ಬಳಿ ಹೋಗಬೇಕಾದ ಸಂದರ್ಭ ಬರಬಹುದು.
Image credits: Pexels
Kannada
ಬಣ್ಣ ಮಾಸುವ ಭೀತಿ
ಒಂದು ವೇಳೆ ನೀವು ಕೂದಲಿಗೆ ಬಣ್ಣ (Hair Color) ಹಾಕಿದ್ದರೆ, ಸ್ಟ್ರೇಟ್‌ನರ್ ಬಳಸುವುದರಿಂದ ಆ ಬಣ್ಣ ಬೇಗನೆ ಮಾಸಿ ಹೋಗುತ್ತದೆ. ಅಷ್ಟೇ ಅಲ್ಲದೆ, ಇದು ಕೂದಲಿನ ನೈಸರ್ಗಿಕ ಬಣ್ಣಕ್ಕೂ ಹಾನಿ ಮಾಡುತ್ತದೆ.
Image credits: Pexels
Kannada
ಪರಿಹಾರವೇನು?
ಬಳಸಲೇಬೇಕಾದ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ 'ಹೀಟ್ ಪ್ರೊಟೆಕ್ಟಂಟ್' (Heat Protectant) ಸೀರಮ್ ಅಥವಾ ಸ್ಪ್ರೇ ಬಳಸಿ. ಕೂದಲಿಗೆ ನಿಯಮಿತವಾಗಿ ಎಣ್ಣೆ ಹಚ್ಚಿ ಪೋಷಣೆ ನೀಡಿ.