Kannada

ಕಡಿಮೆ ತೂಕ, ಗ್ರ್ಯಾಂಡ್ ಲುಕ್‌ನ ಕರಿಮಣಿ ಡಿಸೈನ್ಸ್

ಮದುವೆಯಾದ ಹೆಣ್ಣುಮಕ್ಕಳ ಸೌಂದರ್ಯವನ್ನು ಕರಿಮಣಿ ಸರ ಹೆಚ್ಚಿಸುತ್ತದೆ. ಆದರೆ ಪ್ರತಿದಿನ ಧರಿಸಲು ಭಾರವಾದ ಡಿಸೈನ್‌ಗಳು ಸೂಕ್ತವಲ್ಲ.  ಕಡಿಮೆ ತೂಕದಲ್ಲಿ ಹೆಚ್ಚು ಆಕರ್ಷಕವಾಗಿ ಕಾಣುವ ಲೇಟೆಸ್ಟ್ ಡಿಸೈನ್‌ಗಳು ಇಲ್ಲಿವೆ.

Kannada

ಸಿಂಪಲ್ ಡಿಸೈನ್

ಈ ಮಾಂಗಲ್ಯ ಸರ ನೋಡಲು ತುಂಬಾನೇ ಸಿಂಪಲ್ ಆಗಿದೆ. ಎರಡು ಸಾಲಿನ ಕರಿಮಣಿ ಸರಕ್ಕೆ ಕೆಳಗೆ ಒಂದು ಚಿಕ್ಕ ಮುತ್ತಿನ ಪೆಂಡೆಂಟ್ ಇದೆ. ಪ್ರತಿದಿನ ಧರಿಸಲು ಇದು ಪರ್ಫೆಕ್ಟ್ ಆಗಿದೆ.

Image credits: ಝೀವಾನ ಜ್ಯುವೆಲ್ಲರ್ಸ್
Kannada

ಡೈಮಂಡ್ ಲುಕ್ ಕೊಡುವ ಮಾಂಗಲ್ಯ ಸರ...

ಈ ರೀತಿಯ ಮಾಂಗಲ್ಯ ಸರ ತುಂಬಾನೇ ಕ್ಲಾಸಿ ಲುಕ್ ಕೊಡುತ್ತದೆ. ಒಂದೇ ಎಳೆಯ ಕರಿಮಣಿ ಸರಕ್ಕೆ ಚಿಕ್ಕ ಚಿಕ್ಕ ಲಾಕೆಟ್‌ಗಳಿವೆ. ಇದನ್ನು ನೀವು ಡೈಮಂಡ್‌ನಲ್ಲೂ ಮಾಡಿಸಿಕೊಳ್ಳಬಹುದು.

Image credits: ಝೀವಾನ ಜ್ಯುವೆಲ್ಲರ್ಸ್
Kannada

ಕರಿಮಣಿ ಕಡಿಮೆ ಇರುವ ಮಾಂಗಲ್ಯ ಸರ...

ಕರಿಮಣಿಗಳು ತುಂಬಾನೇ ಕಡಿಮೆ ಇರುವ ಮಾಂಗಲ್ಯ ಸರ ಬೇಕಿದ್ದರೆ, ಇದು ಬೆಸ್ಟ್ ಆಯ್ಕೆ. ಇಡೀ ಚೈನ್‌ಗೆ ಅಲ್ಲಲ್ಲಿ ಕರಿಮಣಿಗಳನ್ನು ಪೋಣಿಸಲಾಗಿದ್ದು, ಮಧ್ಯದಲ್ಲಿರುವ ಆಕರ್ಷಕ ಲಾಕೆಟ್ ಇದಕ್ಕೆ ಒಳ್ಳೆಯ ಲುಕ್ ಕೊಡುತ್ತದೆ.

Image credits: ಝೀವಾನ ಜ್ಯುವೆಲ್ಲರ್ಸ್
Kannada

ಕಡಿಮೆ ಚಿನ್ನದಲ್ಲಿ ಕರಿಮಣಿ ಸರ..

ಕಡಿಮೆ ಚಿನ್ನದಲ್ಲಿ ಕರಿಮಣಿ ಸರ ಬೇಕು ಎನ್ನುವವರಿಗೆ ಇದು ಬೆಸ್ಟ್ ಡಿಸೈನ್. ಪ್ಲೇನ್ ಕರಿಮಣಿ ಸರಕ್ಕೆ ಒಂದು ಸಿಂಪಲ್ ಲಾಕೆಟ್ ಜೋಡಿಸಲಾಗಿದೆ. ಇದು ಸೀರೆಗಳ ಮೇಲೂ ಸುಂದರವಾಗಿ ಕಾಣಿಸುತ್ತದೆ.

Image credits: ಝೀವಾನ ಜ್ಯುವೆಲ್ಲರ್ಸ್
Kannada

ಟ್ರೆಂಡಿ ಡಿಸೈನ್..

ಈ ಕಾಲದ ಹುಡುಗಿಯರು ಇಷ್ಟಪಡುವ ಡಿಸೈನ್‌ಗಳಲ್ಲಿ ಇದೂ ಒಂದು. ಈ ರೀತಿಯ ವಿನ್ಯಾಸಗಳು ಒಳ್ಳೆಯ ಲಗ್ಜರಿ ಲುಕ್ ಕೊಡುತ್ತವೆ. 

Image credits: ಝೀವಾನ ಜ್ಯುವೆಲ್ಲರ್ಸ್
Kannada

ಲೇಯರ್ ಕರಿಮಣಿ ಸರ..

ಎರಡು ಲೇಯರ್‌ನ ಚಿನ್ನದ ಚೈನ್‌ಗೆ ಮಧ್ಯದಲ್ಲಿ ಕರಿಮಣಿಗಳನ್ನು ಪೋಣಿಸಲಾಗಿದೆ. ಇವು ಕೂಡಾ ಪ್ರತಿದಿನ ಧರಿಸಲು ಅತ್ಯದ್ಭುತವಾಗಿ ಕಾಣಿಸುತ್ತವೆ.

Image credits: ಝೀವಾನ ಜ್ಯುವೆಲ್ಲರ್ಸ್
Kannada

ಸೀರೆಗೆ ಪರ್ಫೆಕ್ಟ್ ಮ್ಯಾಚ್..

ಸೀರೆಗಳ ಮೇಲೆ ಧರಿಸಲು ಸ್ವಲ್ಪ ಹೆವಿ ಕರಿಮಣಿ ಸರ ಬೇಕು ಎಂದರೆ, ಇದು ಪರ್ಫೆಕ್ಟ್ ಆಯ್ಕೆ. ಎರಡು ಸಾಲಿನ ಕರಿಮಣಿ ಸರಕ್ಕೆ ಹೆವಿ ಲಾಕೆಟ್ ಇದೆ. ಇದು ಸೀರೆಗಳ ಮೇಲೆ ಧರಿಸಿದಾಗ ತುಂಬಾನೇ ಚೆನ್ನಾಗಿ ಕಾಣುತ್ತದೆ.

Image credits: ಝೀವಾನ ಜ್ಯುವೆಲ್ಲರ್ಸ್
Kannada

ಸಿಂಪಲ್ ಟ್ರೆಂಡಿ ಲುಕ್...

ಸಿಂಪಲ್ ಚೈನ್‌ಗೆ ಅಲ್ಲಲ್ಲಿ ಕರಿಮಣಿಗಳನ್ನು ಪೋಣಿಸಿದಂತಿರುವ ಈ ಕರಿಮಣಿ ಡಿಸೈನ್, ಪ್ರತಿದಿನ ಧರಿಸಲು ತುಂಬಾನೇ ಚೆನ್ನಾಗಿರುತ್ತದೆ.

Image credits: ಝೀವಾನ ಜ್ಯುವೆಲ್ಲರ್ಸ್
Kannada

ಕ್ಲಾಸಿ ಲುಕ್ ಕೊಡುವ ಕರಿಮಣಿ ಸರ..

ಸಿಂಪಲ್ ಚೈನ್‌ಗೆ ಮಧ್ಯದಲ್ಲಿ ಡೈಮಂಡ್ ಲಾಕೆಟ್ ಮತ್ತು ಕರಿಮಣಿಗಳನ್ನು ಪೋಣಿಸಲಾಗಿದೆ. ಇದು ತುಂಬಾನೇ ಕ್ಲಾಸಿಕ್ ಲುಕ್ ನೀಡುತ್ತದೆ. ಕತ್ತಿಗೇ ಒಂದು ಹೊಸ ಅಂದವನ್ನು ತಂದುಕೊಡುತ್ತದೆ.

Image credits: ಝೀವಾನ ಜ್ಯುವೆಲ್ಲರ್ಸ್

Jhumka Designs: ಅರ್ಧ ತೊಲೆಯಲ್ಲಿ ಸಿಗುವ ಸುಂದರ ಚಿನ್ನದ ಜುಮುಕಿ ಡಿಸೈನ್‌ಗಳು!

ಪ್ರತಿದಿನ ಹೇರ್ ಸ್ಟ್ರೇಟ್‌ನರ್ ಬಳಸುತ್ತಿದ್ದೀರಾ? ಈ ಅಪಾಯ ತಪ್ಪಿದ್ದಲ್ಲ

Blouse Designs: ನಿಮ್ಮ ಬ್ಲೌಸ್‌ಗೆ ರಿಚ್ ಲುಕ್ ಕೊಡಬೇಕಾ? ಈ ಸ್ಲೀವ್ ಡಿಸೈನ್‌ಗಳು ಬೆಸ್ಟ್!

ನಿಮ್ಮ ಮಗಳು ಧರೆಗಿಳಿದ ಗೊಂಬೆಯಂತೆ ಕಾಣಬೇಕಾ? ಈ ಕ್ಯೂಟ್ ಫ್ರಾಕ್ಸ್‌ ಟ್ರೈ ಮಾಡಿ!