ವಿಶಿಷ್ಟವಾಗಿ, ಕ್ಲಾಸಿಯಾಗಿ ಕಾಣಬೇಕೆಂದರೆ ಬೆಳ್ಳಿಯ ಅರ್ಧ ಚಂದ್ರನ ಆಕೃತಿಯ ಕಿವಿಯೋಲೆಗಳನ್ನು ಧರಿಸಿ. ಇಲ್ಲಿ ಹೊಸ ವಿನ್ಯಾಸಗಳನ್ನ ಕೊಡಲಾಗಿದೆ ನೋಡಿ.
fashion Jan 31 2026
Author: Ashwini HR Image Credits:instagram
Kannada
ಮಲ್ಟಿಕಲರ್ ಸ್ಟೋನ್‌ನ ಸ್ಟಡ್ ಕಿವಿಯೋಲೆ
ಮಲ್ಟಿಕಲರ್ ಸ್ಟೋನ್‌ನ ಸ್ಟಡ್ ಕಿವಿಯೋಲೆಗಳು 2026 ರಲ್ಲಿ ಟ್ರೆಂಡ್ ಆಗಿವೆ. ಆನ್‌ಲೈನ್ ಜ್ಯುವೆಲ್ಲರಿ ಸ್ಟೋರ್‌ಗಳಲ್ಲಿ ಇವು ಸುಲಭವಾಗಿ ಲಭ್ಯವಿವೆ.
Image credits: instagram
Kannada
ಸಿಲ್ವರ್ ಜಿರ್ಕಾನ್ ಕಿವಿಯೋಲೆ
ಇದು ಸದಾಕಾಲಕ್ಕೂ ಸಲ್ಲುವ ಕ್ಲಾಸಿಕ್ ವಿನ್ಯಾಸ. ಅರ್ಧ ಚಂದ್ರನ ಶೈಲಿಯನ್ನು ಸಣ್ಣ ಸಣ್ಣ ಹರಳುಗಳಿಂದ ಅಲಂಕರಿಸಲಾಗಿದೆ. ಇದರ ಹೊಳಪು ಸೌಮ್ಯವಾಗಿದ್ದರೂ ರಾಯಲ್ ಆಗಿ ಕಾಣುತ್ತದೆ. ಇದನ್ನು ಆಫೀಸ್, ಪಾರ್ಟಿಗೆ ಧರಿಸಬಹುದು.
Image credits: instagram
Kannada
ಹಗ್ಗಿ ಹೂಪ್ ಕಿವಿಯೋಲೆ
ಈ ಕಿವಿಯೋಲೆಯಲ್ಲಿ ಸಣ್ಣ ಚಂದ್ರನ ಆಕಾರವನ್ನ ಜೋಡಿಸಿ ತಯಾರಿಸಲಾಗಿದೆ. ಇದು ತುಂಬಾ ಸುಂದರವಾಗಿ ಕಾಣುತ್ತದೆ. ಇವು ಕಿವಿಗೆ ಅಂಟಿಕೊಂಡಿದ್ದು, ಸೊಗಸಾಗಿ ಕಾಣುತ್ತವೆ. ಫ್ಯಾಷನ್ ಮತ್ತು ಬಾಳಿಕೆಗಾಗಿ ಇದನ್ನು ಆಯ್ಕೆ ಮಾಡಿ.
Image credits: instagram
Kannada
ಪರ್ಲ್ ಸಿಲ್ವರ್ ಮೂನ್ ಕಿವಿಯೋಲೆ
ಚಂದ್ರನ ಆಕಾರದ ಕಿವಿಯೋಲೆಗಳನ್ನು ಬಿಳಿ ಮುತ್ತುಗಳೊಂದಿಗೆ ಜೋಡಿಸಿರುವುದು ತುಂಬಾ ಸುಂದರವಾಗಿ ಕಾಣುತ್ತಿದೆ. ಅಂಚುಗಳಲ್ಲಿ ಸೂಕ್ಷ್ಮವಾದ ಹರಳುಗಳ ಕೆಲಸ ಮತ್ತು ಸ್ಟೋನ್ ಕಾಂಬಿನೇಷನ್ ಸಖತ್ತಾಗಿದೆ. 5K ಯಲ್ಲಿ ಮಾಡಿಸಬಹುದು.
Image credits: instagram
Kannada
ಹಾಫ್ ಮೂನ್ ಹ್ಯಾಂಗಿಂಗ್ ಕಿವಿಯೋಲೆ
ಮಿಸ್‌ಮ್ಯಾಚ್ ಮಾದರಿಯ ಹ್ಯಾಂಗಿಂಗ್ ಕಿವಿಯೋಲೆಗಳು GenZಯ ಅಚ್ಚುಮೆಚ್ಚಿನವು. ಇದರಲ್ಲಿ ಅರ್ಧ ಚಂದ್ರನೊಂದಿಗೆ ಲಿಂಕ್ ಚೈನ್, ಸ್ಟೋನ್ ಮತ್ತು ನಕ್ಷತ್ರಗಳೂ ಇವೆ. ಚಂಕಿ-ಫಂಕಿ ಸ್ಟೈಲ್ ಇಷ್ಟಪಟ್ಟರೆ ಇದನ್ನು ಖರೀದಿಸಬಹುದು.
Image credits: instagram
Kannada
ಮೂನ್ ಬಸ್ಟ್ ಸಿಲ್ವರ್ ಟಾಪ್ಸ್ ಕಿವಿಯೋಲೆ
ಕಾಲೇಜು ಫಂಕ್ಷನ್‌ನಿಂದ ಪಾರ್ಟಿಯವರೆಗೆ ಮೂನ್ ಬಸ್ಟ್ ಸಿಲ್ವರ್ ಟಾಪ್ಸ್ ಕಿವಿಯೋಲೆ ಅದ್ಭುತವಾಗಿ ಕಾಣುತ್ತದೆ. ಇದು ರಿವರ್ಸ್ ಪ್ಯಾಟರ್ನ್‌ನಲ್ಲಿದ್ದು, ಸೀರೆ-ಸೂಟ್, ಮಿನಿ ಡ್ರೆಸ್ ಎಲ್ಲದರೊಂದಿಗೂ ಸುಂದರವಾಗಿ ಕಾಣುತ್ತೆ.
Image credits: instagram
Kannada
ಸಿಲ್ವರ್ ಸ್ಟಾರ್ ಸೆಕೆಂಡ್ ಇಯರಿಂಗ್ಸ್
ಇದು ಶುದ್ಧ ಬೆಳ್ಳಿಯಲ್ಲ, ಬದಲಿಗೆ ರೋಸ್ ಗೋಲ್ಡ್ ಸಿಲ್ವರ್ ಫಿನಿಶ್‌ನಲ್ಲಿದೆ. ಇಲ್ಲಿ ಚಂದ್ರನೊಂದಿಗೆ ಸಣ್ಣ ಸಣ್ಣ ಕ್ರಿಸ್ಟಲ್ ಡ್ರಾಪ್ಸ್‌ಗಳಿವೆ. ಇಂತಹ ಕಿವಿಯೋಲೆಗಳು ಕಪ್ಪು ಮೈಬಣ್ಣದವರಿಗೆ ಹೆಚ್ಚು ಸೂಕ್ತವಾಗಿವೆ.