Kannada

ಕಪ್ಪಾಗಿ ಮತ್ತು ದಟ್ಟವಾಗಿ ಬೆಳೆಯಲು

ಸುಂದರವಾದ ಕಣ್ಣುಗಳಿಗೆ ದಟ್ಟವಾದ ಹುಬ್ಬು, ರೆಪ್ಪೆಗೂದಲುಗಳು ಮೆರುಗು ನೀಡುತ್ತವೆ. ನಿಮ್ಮ ಹುಬ್ಬುಗಳು ತೆಳುವಾಗಿದ್ದರೆ ಚಿಂತಿಸಬೇಡಿ. ಮನೆಯಲ್ಲಿರುವ ಈ ಪದಾರ್ಥದ ಮೂಲಕ ಕಪ್ಪಾಗಿ, ದಟ್ಟವಾಗಿ ಬೆಳೆಯುವಂತೆ ಮಾಡ್ಬೋದು. 

Kannada

ಹರಳೆಣ್ಣೆಯ ಮ್ಯಾಜಿಕ್

ರಾತ್ರಿ ಮಲಗುವ ಮುನ್ನ ನಿಮ್ಮ ಹುಬ್ಬು ಮತ್ತು ರೆಪ್ಪೆಗೂದಲುಗಳಿಗೆ ಹರಳೆಣ್ಣೆಯಿಂದ ಮಸಾಜ್ ಮಾಡಿ. ಒಂದು ಹನಿ ಎಣ್ಣೆಯನ್ನು ಬೆರಳುಗಳ ನಡುವೆ ಉಜ್ಜಿ ನಿಧಾನವಾಗಿ ಸವರಿ. ಹರಳೆಣ್ಣೆಯ ಬದಲು ತೆಂಗಿನ ಎಣ್ಣೆಯನ್ನೂ ಬಳಸಬಹುದು.

Image credits: Social Media
Kannada

ಅಲೋವೆರಾ ಮತ್ತು ವಿಟಮಿನ್ ಇ

ಎರಡು ಚಮಚ ಅಲೋವೆರಾ ಜೆಲ್‌ಗೆ ಎರಡು ಚಮಚ ವಿಟಮಿನ್ ಇ ಆಯಿಲ್ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ರಾತ್ರಿ ಹಚ್ಚಿ, ಬೆಳಗ್ಗೆ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.  ಹೀಗೆ 3 ತಿಂಗಳು ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತೆ. 

Image credits: Getty
Kannada

ತೆಂಗಿನ ಎಣ್ಣೆ ಮತ್ತು ಮೆಂತೆ ಸೀರಮ್

ಅರ್ಧ ಕಪ್ ತೆಂಗಿನ ಎಣ್ಣೆಗೆ ಮೂರು ಚಮಚ ಮೆಂತೆ ಪುಡಿ ಬೆರೆಸಿ 10 ನಿಮಿಷ ಬಿಸಿ ಮಾಡಿ. ನಂತರ ಈ ಎಣ್ಣೆಯನ್ನ ಸೋಸಿ ಸಂಗ್ರಹಿಸಿ. ಮಲಗುವ ಮುನ್ನ ಈ ಸೀರಮ್ ಅನ್ನು ಹುಬ್ಬುಗಳಿಗೆ ಹಚ್ಚಿದರೆ ಬೆಳವಣಿಗೆ ವೇಗವಾಗುತ್ತದೆ.  

Image credits: Getty
Kannada

ಮೆಂತೆ ಕಾಳಿನ ಮಾಸ್ಕ್

ನೆನೆಸಿದ ಮೆಂತೆ ಕಾಳನ್ನ ಪೇಸ್ಟ್ ಮಾಡಿ. ವಾರಕ್ಕೆ ಮೂರು ಬಾರಿ ಮಸ್ಕಾರಾ ಬ್ರಷ್ ಬಳಸಿ ಇದನ್ನು ಹುಬ್ಬುಗಳಿಗೆ ಹಚ್ಚಿ. ಮೆಂತೆಯಲ್ಲಿರುವ 'ನಿಕೋಟಿನ್ ಸಾಲ್ಟ್' ಅಂಶವು ಕೂದಲಿನ ದಟ್ಟವಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ.

Image credits: Getty
Kannada

ನೆನಪಿರಲಿ

ಯಾವುದೇ ಮನೆಮದ್ದನ್ನು ಹಚ್ಚುವಾಗ ಕಣ್ಣಿನ ಒಳಗೆ ಹೋಗದಂತೆ ಎಚ್ಚರವಹಿಸಿ. ಫಲಿತಾಂಶಕ್ಕಾಗಿ ಕನಿಷ್ಠ 3 ರಿಂದ 6 ತಿಂಗಳುಗಳ ಕಾಲ ತಾಳ್ಮೆಯಿಂದ ನಿಯಮಿತವಾಗಿ ಈ ಕ್ರಮಗಳನ್ನು ಅನುಸರಿಸಿ.

Image credits: Getty

Pearl Earrings: ಕಡಿಮೆ ಚಿನ್ನದಲ್ಲಿ ಮಾಡಿಸಿ ಮುತ್ತಿನೋಲೆ: ಇಲ್ಲಿವೆ ಸ್ಲೀಕ್ & ಸುಂದರ ಡಿಸೈನ್ಸ್

Gold Lockets: ಪುಟ್ಟ ರಾಜಕುಮಾರಿಯರಿಗಾಗಿ ಪ್ರಾಣಿಗಳ ಆಕಾರದ ಚಿನ್ನದ ಲಾಕೆಟ್‌ಗಳು: ಇಲ್ಲಿವೆ 7 ಲೇಟೆಸ್ಟ್ ಡಿಸೈನ್ಸ್

ಮಹಿಳೆಯರೇ ನಿಮ್ಮ ಚೆಂದದ ಕಾಲ್ಬೆರಳು, ಕೈ ಬೆರಳುಗಳಿಗೆ ಸೌಂದರ್ಯದ ಹೊಸ ಟ್ರೆಂಡ್

Cotton Blouse: ಕಾಟನ್ ಬ್ಲೌಸ್‌ನಲ್ಲಿ ಸಖತ್ ಆಗಿ ಆಗಿ ಕಾಣಬೇಕಾ? ಈ ಡಿಸೈನ್‌ಗಳನ್ನು ಟ್ರೈ ಮಾಡಿ