ಎಲಿಗೆಂಟ್ ಆ್ಯಂಡ್ ಡಿಗ್ನಿಫೈಡ್ ಲುಕ್ ನೀಡುವ ಕಾಟನ್ ಸೀರೆ ಮೆಂಟೈನ್ ಮಾಡಲು ಇಲ್ಲಿವೆ ಕೆಲವು ಟಿಪ್ಸ್.
Kannada
ಬೇಗ ಬಣ್ಣ ಕಳೆದುಕೊಳ್ಳುವುದು ಏಕೆ?
ಹತ್ತಿ ಸೀರೆಗಳಲ್ಲಿ ನೈಸರ್ಗಿಕ ಬಣ್ಣಗಳನ್ನು ಬಳಸಲಾಗುತ್ತದೆ ಮತ್ತು ಪದೇ ಪದೇ ತೊಳೆಯುವುದರಿಂದ ಅವುಗಳ ಬಣ್ಣ ಮಾಸಬಹುದು.
Kannada
ಆರೈಕೆ ಏಕೆ ಮುಖ್ಯ?
ಹತ್ತಿ ಸೀರೆಗಳು ಸೂಕ್ಷ್ಮವಾಗಿರುತ್ತವೆ, ಅವುಗಳನ್ನು ಹತ್ತಿ ನಾರುಗಳಿಂದ ತಯಾರಿಸಲಾಗುತ್ತದೆ. ಸರಿಯಾಗಿ ಸಂಗ್ರಹಿಸದಿದ್ದರೆ ಅಥವಾ ತೊಳೆಯದಿದ್ದರೆ ಅವು ಬೇಗ ಹಾಳಾಗಬಹುದು.
Kannada
ತೊಳೆಯುವ ಮೊದಲು
ಹತ್ತಿ ಸೀರೆಗಳನ್ನು ತೊಳೆಯುವ ಮೊದಲು ಬಣ್ಣಗಳ ಆಧಾರದ ಮೇಲೆ ವಿಂಗಡಿಸಿ. ಇಲ್ಲದಿದ್ದರೆ ಒಂದು ಸೀರೆ ಬಣ್ಣ ಇನ್ನೊಂದಕ್ಕೆ ಹತ್ತಬಹುದು. ತಿಳಿ ಬಣ್ಣ ಮತ್ತು ಗಾಢ ಬಣ್ಣದ ಸೀರೆಗಳನ್ನು ಪ್ರತ್ಯೇಕವಾಗಿ ಒಗೆಯಿರಿ.
Kannada
ಉಪ್ಪು ನೀರಲ್ಲಿ ನೆನಸಿ
ಹತ್ತಿ ಸೀರೆ ಹೊಸದಾಗಿದ್ದರೆ, ಬಣ್ಣ ಬಿಡದಂತೆ ಅರ್ಧ ಬಕೆಟ್ ನೀರಿಗೆ ಎರಡರಿಂದ ಮೂರು ಚಮಚ ಉಪ್ಪು ಸೇರಿಸಿ ಮತ್ತು ಹತ್ತಿ ಸೀರೆಯನ್ನು ಸ್ವಲ್ಪ ಸಮಯದವರೆಗೆ ನೆನೆಸಿಡಿ.
Kannada
ಹತ್ತಿ ಸೀರೆ ತೊಳೆಯುವ ವಿಧಾನ
ಕಾಟನ್ ಸೀರೆಯನ್ನು ವಾಷಿಂಗ್ ಮಷಿನ್‌ಗೆ ಹಾಕದೇ ಕೈಯಲ್ಲಿ ಒಗೆದರೆ ಚೆಂದ.ಇದಕ್ಕೆ ಸೌಮ್ಯ ಡಿಟರ್ಜೆಂಟ್ ಮತ್ತು ತಣ್ಣೀರು ಬಳಸಿ. ಸೀರೆಯನ್ನು ಬ್ರಷ್‌ನಿಂದ ಉಜ್ಜಬೇಡಿ.
Kannada
ಕಲೆ ತೆಗೆಯೋದು ಹೇಗೆ?
ಹತ್ತಿ ಸೀರೆಯ ಮೇಲೆ ಏನಾದರೂ ಬಿದ್ದಿದ್ದರೆ ಅಥವಾ ಕಲೆ ಹಿಡಿದಿದ್ದರೆ, ನೀವು ಅಡಿಗೆ ಸೋಡಾ ಮತ್ತು ವಿನೆಗರ್ ಪೇಸ್ಟ್ ತಯಾರಿಸಿ ಕಲೆ ಮೇಲೆ ಹಚ್ಚಿ, ಉಜ್ಜಿ ನೀರಿನಿಂದ ತೊಳೆಯಿರಿ.
Kannada
ಒಣಗಿಸುವ ವಿಧಾನ
ಹತ್ತಿ ಸೀರೆಗಳನ್ನು ಎಂದಿಗೂ ಬಿಸಿಲಿನಲ್ಲಿ ಒಣಗಿಸಬಾರದು. ಇದು ಅದರ ಬಣ್ಣವನ್ನು ಮಸುಕಾಗಿಸಬಹುದು. ಅದನ್ನು ಯಾವಾಗಲೂ ನೆರಳಿನಲ್ಲಿ ಮತ್ತು ಗಾಳಿಯಾಡುವ ಸ್ಥಳದಲ್ಲಿ ಒಣಗಿಸಿ.
Kannada
ಸಾರ್ಚ್ ಹಾಕೋದು ಹೇಗೆ?
ತೊಳೆದ ನಂತರ ಕಾಟನ್ ಸೀರೆಗಳಿಗೆ ಸ್ಟಾರ್ಚ್ ಹಾಕಬೇಕು. ಇದು ಸೀರೆಯನ್ನು ಸ್ಟಿಫ್ ಆಗಿರುವಂತೆ ಮಾಡಿ, ಉಟ್ಟರೆ ಪ್ಲೀಟ್ಸ್ ಚೆನ್ನಾಗಿ ಬರುತ್ತದೆ.
Kannada
ಸಂಗ್ರಹಿಸುವ ವಿಧಾನ
ಹತ್ತಿ ಸೀರೆಗಳನ್ನು ಯಾವಾಗಲೂ ತೇವಾಂಶ ಮತ್ತು ಸೂರ್ಯನ ಬೆಳಕು ಇಲ್ಲದ ಸ್ಥಳದಲ್ಲಿಡಿ. ತಂತಿ ಹ್ಯಾಂಗರ್‌ಗಳ ಬದಲಿಗೆ, ಕವರ್ ಮಾಡಿದ ಹ್ಯಾಂಗರ್‌ಗಳು ಅಥವಾ ಹತ್ತಿ ಚೀಲಗಳಲ್ಲಿ ಸಂಗ್ರಹಿಸಬಹುದು.