Fashion
ತನ್ನದೇ ವೈಶಿಷ್ಟ್ಯ ಇರೋ, ಭಾರತೀಯ ಸಾಂಸ್ಕೃತಿಗೆ ಸೀರೆ ಚಂದೇರಿ ಸಿಲ್ಕ್ ಕೊಳ್ಳುವಾಗ ಕೆಲವು ನಿಯಮಗಳನ್ನು ಪಾಲಿಸಿದರೆ ಒಳ್ಳೇದು.
ವಿಶೇಷ ಲುಕ್ ಇರೋ ಈ ಸೀರೆ ದುಬಾರಿಯೂ ಹೌದು. ಆ ಕಾರಣಕ್ಕೆ ಕೊಳ್ಳುವಾಗ ಮೈ ಎಲ್ಲಾ ಕಣ್ಣಾಗಿರಬೇಕು.
ಚಂದೇರಿ ಸೀರೆಯನ್ನು ಮಧ್ಯಪ್ರದೇಶದ ಚಂದೇರಿ ಎಂಬ ಗ್ರಾಮದಲ್ಲಿ ತಯಾರಿಸಲಾಗುತ್ತದೆ. ಈ ಸೀರೆ ತನ್ನ ನೈಸರ್ಗಿಕ ಸೌಂದರ್ಯ, ಇತಿಹಾಸ ಮತ್ತು ಸಮೃದ್ಧ ಸಂಸ್ಕೃತಿಗೆ ಹೆಸರುವಾಸಿ. ಇದನ್ನು ಸೀರೆಗಳ ರಾಣಿ ಎಂದೂ ಕರೆಯುತ್ತಾರೆ.
ಚಂದೇರಿ ಸೀರೆಯನ್ನು ಕೈಯಿಂದ ತಯಾರಿಸಲಾಗುತ್ತದೆ. ಈ ಕಾರಣದಿಂದ ಅಸಲಿ ಚಂದೇರಿ ಸೀರೆ ಬೆಲೆ ₹5000 ರಿಂದ ₹20-25000 ವರೆಗೆ ಇರುತ್ತದೆ. ಅಸಲಿ ಚಂದೇರಿ ಸೀರೆಯನ್ನು ಖರೀದಿಸುವ ಮೊದಲು ಈ ಅಂಶಗಳನ್ನು ನೆನಪಿನಲ್ಲಿಡಿ-
ಅಸಲಿ ಚಂದೇರಿ ಬಟ್ಟೆ ಹಗುರವಾಗಿರುತ್ತದೆ ಮತ್ತು ಇದರ ಬುಟ್ಟಾವನ್ನು ಕೈಗಳಿಂದ ಮಾಡಲಾಗುತ್ತದೆ. ಇದಕ್ಕೆ ಸಾಕಷ್ಟು ಸಮಯ ಬೇಕು. ಆದರೆ, ನಕಲಿ ಚಂದೇರಿ ಬಟ್ಟೆಯನ್ನು ಯಂತ್ರದಿಂದ ನೇಯಲಾಗುತ್ತದೆ.
ಚಂದೇರಿ ಸೀರೆಗಳ ರಚನೆ ಸ್ವಲ್ಪ ಒರಟು. ಏಕೆಂದರೆ ಇದರಲ್ಲಿ ಜರಿಯ ದಾರದಿಂದ ನೇಯಲಾಗುತ್ತದೆ. ಆದರೆ ನಕಲಿ ಚಂದೇರಿ ಸೀರೆ ಸಂಪೂರ್ಣವಾಗಿ ಮೃದುವಾಗಿರುತ್ತದೆ.
ಚಂದೇರಿ ಬಟ್ಟೆಯಲ್ಲಿ ಮಲ್ಮಲ್ ನ ತೆಳು ರೇಶ್ಮೆ ಎಳೆಗಳನ್ನು ಬಳಸಲಾಗುತ್ತದೆ. ಈ ಎಳೆ ತುಂಬಾ ಮೃದುವಾಗಿರುತ್ತದೆ, ಇವುಗಳಿಗೆ ಬಣ್ಣ ಹಚ್ಚಿರುತ್ತಾರೆ. ಈ ಕಾರಣದಿಂದಾಗಿ ಚಂದೇರಿ ಸೀರೆಗಳು ಪಾರದರ್ಶಕವಾಗಿರುತ್ತವೆ.
ಅಸಲಿ ಚಂದೇರಿ ಸೀರೆ ಮೇಲಿರುವ ಬುಟ್ಟಿ ಅಥವಾ ಆಕಾರಗಳನ್ನು ಕೈಯಿಂದ ನೇಯಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಚಿನ್ನ, ಬೆಳ್ಳಿ ಅಥವಾ ತಾಮ್ರದ ಪುಡಿಯಿಂದ ಲೇಪಿಸಲಾಗುತ್ತದೆ, ಇದು ವಿಶಿಷ್ಟವಾದ ಹೊಳಪು ನೀಡುತ್ತದೆ.
ನೈಜ ಚಂದೇರಿ ಸೀರೆಯಲ್ಲಿ ಹ್ಯಾಂಡ್ಲೂಮ್ ಟ್ಯಾಗ್ ಇರುತ್ತದೆ. ನಿಮ್ಮ ಸೀರೆಯಲ್ಲಿ ಪ್ರಮಾಣೀಕೃತ ಹ್ಯಾಂಡ್ಲೂಮ್ ಟ್ಯಾಗ್ ಇಲ್ಲದಿದ್ದರೆ ಅದು ನಕಲಿ ಚಂದೇರಿ ಸೀರೆಯಾಗಿರಬಹುದು.
ಚಂದೇರಿಯ ಅಸಲಿ ಸೀರೆಯಲ್ಲಿ 20 ರಿಂದ 22 ಡೆನಿಯರ್ ರೇಷ್ಮೆ ದಾರಗಳಿರುತ್ತವೆ. ಆದರೆ ನಕಲಿ ಚಂದೇರಿ ಸೀರೆಯಲ್ಲಿ ರೇಷ್ಮೆ ಬದಲಿಗೆ ಸಿಂಥೆಟಿಕ್ ದಾರಗಳನ್ನು ಬಳಸುತ್ತಾರೆ.