Fashion

ಚಂದದ ಕೂದಲಿಗೆ ಶಾಂಪೂ ಆಯ್ಕೆ ಹೀಗಿರಲಿ

ಹೆಚ್ಚು ರಾಸಾಯನಿಕವಿಲ್ಲದ, ನೈಸರ್ಗಿಕ ಶಾಂಪೂ ಆರಿಸಿಕೊಂಡರೆ ಕೂದಲ ಆರೋಗ್ಯ ಚೆನ್ನಾಗಿರುತ್ತೆ. ಆರಿಸಿಕೊಳ್ಳುವುದು ಹೇಗೆ?

Image credits: others

ಶಾಂಪೂ ಆಯ್ಕ್ಗೆ 7 ಟಿಪ್ಸ್

ಗುಂಗುರು, ಸ್ಟ್ರೈಟ್ ಹೇರ್ಸ್, ರಫ್, ಸಾಫ್ಟ್....ಹೀಗೆ ಒಬ್ಬೊಬ್ಬರ ಕೂದಲಿನ ಸ್ಟ್ರಕ್ಚರ್ ಒಂದೊಂದು ರೀತಿ ಇರುತ್ತದೆ. ಅದಕ್ಕೆ ತಕ್ಕಂತೆ ಶಾಂಪೂ ಆಯ್ಕೆ ನಿಮ್ಮದಾಗಬೇಕು. ಹೇಗೆ?

Image credits: Freepik

ಲೇಬಲ್ ಓದಿ

ಶಾಂಪೂ ಕೊಳ್ಳೋ ಮುನ್ನ ಅದರ ಮೇಲಿನ ಲೇಬಲ್ ಅನ್ನು ತಪ್ಪದೇ ನೋಡಿ. ಶಾಂಪೂ ತಯಾರಿಸಲು ಬಳಸಿದ ಪದಾರ್ಥಗಳ ಮೇಲೆ ಕಣ್ಣಾಡಿಸಿ. ಅದು ನಿಮ್ಮ ಕೂದಲ ಮೇಲೆ ಬೀರುವ ಪರಿಣಾಮದ ಮೇಲೆ ಗಮನವಿರಲಿ.  

 

Image credits: Freepik

ಸೌಮ್ಯ ಶಾಂಪೂ ಬಳಸಿ

ನೈಸರ್ಗಿಕ ಮತ್ತು pH-ಸಮತೋಲಿತ ಪದಾರ್ಥಗಳೊಂದಿಗೆ ಸೌಮ್ಯವಾದ ಶಾಂಪೂ ದೈನಂದಿನ ಕೂದಲಿನ ಆರೈಕೆಗೆ ಉತ್ತಮ. 

Image credits: Freepik

ರಾಸಾಯನಿಕ ಬಳಕೆ ಬೇಡ

ಶಾಂಪೂವಿನಲ್ಲಿ ಆದಷ್ಟು ರಾಸಾಯನಿಕ ವಸ್ತುಗಳು ಇರದಂತೆ ಎಚ್ಚರ ವಹಿಸಿ. ಇದು ಸುಖಾ ಸುಮ್ಮನೆ ನಿಮ್ಮ ಕೇಶ ಸೌಂದರ್ಯವನ್ನೂ ಹಾಳು ಮಾಡುವುದಲ್ಲದೇ, ತ್ವಚಾ ಸೌಂದರ್ಯಕ್ಕೂ ಕುತ್ತು ತರುತ್ತದೆ. 

Image credits: Freepik

ಕೂದಲಿನ ತೇವಾಂಶ ಕಸಿಯದಿರಲಿ

ಸೌಮ್ಯ ಮತ್ತು ತೇವಾಂಶ ಇರೋ ಶಾಂಪೂ ಮತ್ತು ಕಂಡಿಷನರ್ ಬಳಸಿ. ಒಣ ಕೂದಲು ಸ್ಪ್ಲಿಟ್ ಆದ ತುದಿ ಪ್ರಿಜಿ ಆಗುವಂತೆ ಮಾಡುತ್ತದೆ. ಅಲ್ಲದೆ, ನಿಮ್ಮ ಕೂದಲ ರಕ್ಷಣೆಗಾಗಿ ಆಗಾಗ ಎಣ್ಣೆ ಹಚ್ಚಿ. 

Image credits: Pinterest

ಅತಿಯಾಗಿ ತೊಳೆಯಬೇಡಿ

ಕೂದಲನ್ನು ಅತಿಯಾಗಿ ತೊಳೆಯಬೇಡಿ ಏಕೆಂದರೆ ಇದು ನಿಮ್ಮ ನೆತ್ತಿ ಮತ್ತು ಕೂದಲಿನ ನೈಸರ್ಗಿಕ ಎಣ್ಣೆಗಳನ್ನು ತೆಗೆದು ಹಾಕುತ್ತದೆ. ಇದು ಶುಷ್ಕತೆ, ಕಹಿ ಮತ್ತು ಕೂದಲು ಉದುರುವಂತೆ ಮಾಡುತ್ತದೆ.

Image credits: Freepik

ಚಂದೇರಿ ಸಿಲ್ಕ್ಸ್ ಸೀರೆ ಡೂಪ್ಲಿಕೇಟೋ, ಒರಿಜಿನಲ್ಲೋ? ಹೇಗೆ ಕಂಡು ಹಿಡಿಯೋದು?

ನಕಲಿ ರೇಷ್ಮೆ ಸೀರೆ ಹೇಗೆ ಗುರುತಿಸುವುದು? ವ್ಯತ್ಯಾಸ ತಿಳಿಯಿರಿ

ಕಿತ್ತಳೆ ಹಣ್ಣಿನ ರಸದಲ್ಲಿದೆ ಸಿಕ್ಕಾಪಟ್ಟೆ ಪ್ರಯೋಜನಗಳು: ಈ 5 ಕಾಯಿಲೆಗಳು ದೂರ

ಬಾಳೆಹಣ್ಣು ತಿಂದು ಸಿಪ್ಪೆ ಎಸೆಯುವ ಮುನ್ನ ಯೋಚಿಸಿ: ಇದರಲ್ಲಿದೆ ಇಷ್ಟು ಪ್ರಯೋಜನ!