ವಿವಿಧ ಶೈಲಿಗಳು ಮತ್ತು ವೈವಿಧ್ಯ ಸಾಂಪ್ರದಾಯಿಕ ಚಿನ್ನದ ಮಣಿಗಳ ನೆಕ್ಲೇಸ್, ಡಬಲ್ ಚೈನ್, ನವರತ್ನ ಆಭರಣಗಳ ಡಿಸೈನ್ ಇಲ್ಲಿದೆ.
ಚಿನ್ನದ ಮಣಿಗಳ ಹಾರ
ಮಹಿಳೆಯರಿಗಾಗಿ ಚಿನ್ನದ ಮಣಿಗಳ ನೆಕ್ಲೇಸ್ ವಿನ್ಯಾಸಗಳು ಇಲ್ಲಿದ್ದು, ಇವುಗಳ ಚಂದದ ಮುಂದೆ ಬೇರೆಲ್ಲವೂ ನೀರಸವಾಗಿ ಕಾಣುತ್ತವೆ.
ಸಾಂಪ್ರದಾಯಿಕ ಚಿನ್ನದ ಮಣಿಗಳ ಹಾರ
ಚಂದ ಕಾಣ್ಬೇಕು ಆದರೆ ಸಾಂಪ್ರದಾಯಿಕ ಆಭರಣ ಬೇಡ ಎಂದು ಬಯಸಿದರೆ ಈ ರೀತಿಯ ಚಿನ್ನದ ಹಾರ ಹಾಕಬಹುದು ಇದರಲ್ಲಿ ಮೂರು ಎಳೆಗಳಲ್ಲಿ ದೊಡ್ಡ ಮುತ್ತುಗಳನ್ನು ಜೋಡಿಸಲಾಗಿದೆ. ಇದನ್ನು ಧರಿಸಿದರೆ ಬೇರೆ ಆಭರಣ ಬೇಕಾಗಿಲ್ಲ.
ಪೆಂಡೆಂಟ್ ಜೊತೆ ಎರಡೆಳೆಯ ಮುತ್ತಿನ ಹಾರ
ಪೆಂಡೆಂಟ್ ಇರುವ ಎರಡೆಳೆಯ ಮುತ್ತಿನ ಹಾರ ನಿಮ್ಮಕತ್ತನ್ನು ತುಂಬಿರುವಂತೆ ಮಾಡುತ್ತದೆ. ಚಿನ್ನದಲ್ಲಿ ಇದು ದುಬಾರಿಯಾಗುತ್ತದೆ, ಆದರೆ ನೀವು ಇಂತಹ ಅರ್ಟಿಫಿಷಿಯಲ್ ಹಾರ ಖರೀದಿಸಬಹುದು.
ಮುತ್ತುಗಳ ಹಾರ
ಏನಾದರೂ ವಿಭಿನ್ನವಾಗಿ ಧರಿಸಬೇಕೆಂದರೆ ಮುತ್ತುಗಳ ಹಾರಕ್ಕಿಂತ ಉತ್ತಮ ಆಯ್ಕೆ ಇಲ್ಲ. ಇವು ಕೈಗೆಟುಕುವ ಬೆಲೆಯಲ್ಲಿ ದೊರೆಯುವುದರ ಜೊತೆಗೆ ಪ್ರತಿಯೊಂದು ಉಡುಪಿಗೂ ಅದ್ಭುತ ಲುಕ್ ನೀಡುತ್ತವೆ. 500 ರೂಗೆಲ್ಲಾ ಖರೀದಿಸಬಹುದು.
ಹಸಿರು ಕಲ್ಲಿನ ಹಾರ
ನೀತಾ ಅಂಬಾನಿಯಿಂದ ಹಿಡಿದು ಬಾಲಿವುಡ್ ನಟಿಯರವರೆಗೆ ಈ ಪಚ್ಚೆ ಆಭರಣ ಧರಿಸುತ್ತಾರೆ, ಆದರೆ ಇದನ್ನು ಖರೀದಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ಹೀಗಾಗಿ ಈ ಬಣ್ಣದ ಹಸಿರು ಕಲ್ಲಿನ ಕೃತಕ ಹಾರ ಧರಿಸಿ ಸ್ಟೈಲಿಶ್ ಆಗಿ ಕಾಣಬಹುದು.
ಭಾರವಾದ ಚಿನ್ನದ ಮುತ್ತುಗಳ ಹಾರ
ಮದುವೆಗೆ ಆಭರಣಗಳನ್ನು ಹುಡುಕುತ್ತಿದ್ದರೆ, ಈ ಬಾರಿ ಸಾಂಪ್ರದಾಯಿಕ ಹಾರವನ್ನು ಬಿಟ್ಟು ಈ ಅದ್ದೂರಿ ಚಿನ್ನದ ಮಣಿಗಳ ಹಾರ ಧರಿಸಬಹುದು ಇದು ಫ್ಯಾಷನ್‌ಗೆ ಮೆರುಗು ನೀಡಲು ಉತ್ತಮವಾಗಿದೆ.
ನವರತ್ನ ಮುತ್ತುಗಳ ಹಾರ
ನವರತ್ನ ಆಭರಣಗಳು ಈಗ ತುಂಬಾ ಜನಪ್ರಿಯವಾಗಿವೆ. ಎಲ್ಲರಿಗಿಂತ ಭಿನ್ನವಾಗಿ ಕಾಣಬೇಕೆಂದು ಬಯಸಿದರೆ ದೇವಾಲಯದ ಆಭರಣ ಶೈಲಿಯ ಪೆಂಡೆಂಟ್‌ನೊಂದಿಗೆ ಈ ಮಣಿಹಾರವನ್ನು ಧರಿಸಬಹುದು.
ಅನನ್ಯ ಮುತ್ತುಗಳ ಹಾರದ ವಿನ್ಯಾಸ
ಈ ಮುತ್ತುಗಳ ಹಾರ ತುಂಬಾ ಸುಂದರವಾಗಿದೆ. ಮೂರು ಎಳೆಯ ಈ ಚೈನ್‌ನಲ್ಲಿ ವರ್ಣರಂಜಿತ ಮುತ್ತುಗಳು ಮತ್ತು ಪೆಂಡೆಂಡ್ ಕೂಡ ಇದೆ.