Fashion
ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ 2024ರ ವಿಜೇತೆ ರಾಚೆಲ್ ಗುಪ್ತಾ
ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ನಡೆದ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ ಭಾರತದ ರಾಚೆಲ್ ಗುಪ್ತಾ.
ಪಂಜಾಬ್‌ನ ಜಲಂಧರ್ ಮೂಲದ ರಾಚೆಲ್ ಗುಪ್ತಾ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಕಿರೀಟವನ್ನು ಗೆದ್ದ ಮೊದಲ ಭಾರತೀಯ ಮತ್ತು ಮೂರನೇ ಏಷ್ಯನ್ ಆಗಿದ್ದಾರೆ.
ಜನವರಿ 24, 2004 ರಂದು ಜನಿಸಿದ ರಾಚೆಲ್ ಗುಪ್ತಾಗೆ ಈಗ ಕೇವಲ 20 ವರ್ಷ,ಮೊದಲಿಗೆ ಮಿಸ್ ಗ್ರ್ಯಾಂಡ್ ಇಂಡಿಯಾ 2024 ಮುಡಿಗೇರಿಸಿಕೊಂಡ ಇವರು ನಂತರ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಅನ್ನು ಗೆದ್ದರು.
ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಫೈನಲ್‌ನಲ್ಲಿ, ರಾಚೆಲ್ ತಮ್ಮ ಸೌಂದರ್ಯ ಮತ್ತು ಚುರುಕಾದ ಉತ್ತರಗಳಿಂದ ತೀರ್ಪುಗಾರರನ್ನು ಮೆಚ್ಚಿಸಿ ಫಿಲಿಪೈನ್ಸ್‌ನ ಕ್ರಿಸ್ಟಿನ್ ಜೂಲಿಯನ್ ಒಪಿಯಾಜಾ ಅವರನ್ನು ಹಿಂದಿಕ್ಕಿದರು.
ಈ ಹಿಂದೆ ಪ್ಯಾರಿಸ್‌ನಲ್ಲಿ ನಡೆದ ವಿಶ್ವದ ಸೂಪರ್ ಟ್ಯಾಲೆಂಟ್‌ನಲ್ಲೂ 60 ದೇಶಗಳ 60 ಸುಂದರಿಯರೊಂದಿಗೆ ಸ್ಪರ್ಧಿಸಿ ಗೆದ್ದಿದ್ದರು ರಾಚೆಲ್, ಇದಕ್ಕೂ ಮೊದಲು ನಟಿ ಝೀನತ್ ಅಮನ್ 1970 ರಲ್ಲಿ ಈ ಪ್ರಶಸ್ತಿ ಗೆದ್ದಿದ್ದರು.
ಪರಿಪೂರ್ಣವಾದ ದೇಹ, ದೊಡ್ಡ ಕಣ್ಣುಗಳು ಮತ್ತು ಉದ್ದನೆಯ ಕೂದಲಿನೊಂದಿಗೆ, ರಾಚೆಲ್ ಗುಪ್ತಾ ಅದ್ಭುತ ಸೌಂದರ್ಯದ ಗಣಿ ಎನಿಸಿದ್ದಾರೆ.
ರಾಚೆಲ್ ಗುಪ್ತಾಗೆ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್‌ಗಳಿದ್ದಾರೆ. ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಗೆದ್ದ ನಂತರ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ.