Kannada

ಚೈನ್ ಅಂದವನ್ನು ಹೆಚ್ಚಿಸುವ ಚಿನ್ನದ ಲಾಕೆಟ್‌ಗಳು!

ಚಿನ್ನದ ಚೈನ್‌ಗೆ ಒಂದು ಸುಂದರವಾದ ಲಾಕೆಟ್ ಹಾಕಿದರೆ ಅದರ ಲುಕ್ಕೇ ಬದಲಾಗುತ್ತದೆ. ಸಿಂಪಲ್ ಡಿಸೈನ್‌ನಿಂದ ಹಿಡಿದು ಟ್ರೆಂಡಿ ಮಾಡೆಲ್‌ಗಳವರೆಗೆ ವಿವಿಧ ಬಗೆಯ ಗೋಲ್ಡ್ ಲಾಕೆಟ್‌ಗಳ ಕಲೆಕ್ಷನ್ ಇಲ್ಲಿದೆ.

Kannada

ಫ್ಲವರ್ ಡಿಸೈನ್ ಲಾಕೆಟ್

ಚಿನ್ನದ ಗೆಜ್ಜೆಗಳು ನೇತಾಡುತ್ತಿರುವಂತೆ ಕಾಣುವ ಈ ಫ್ಲವರ್ ಡಿಸೈನ್ ಲಾಕೆಟ್, ಸಣ್ಣ ಚೈನ್‌ಗೂ ಹೆವಿ ಲುಕ್ ನೀಡುತ್ತದೆ. ಕುತ್ತಿಗೆಗೆ ಇದು ತುಂಬಾ ಸುಂದರವಾಗಿ ಕಾಣುತ್ತದೆ.

Image credits: pinterest
Kannada

ನವಿಲು ಡಿಸೈನ್ ಲಾಕೆಟ್

ರೌಂಡ್ ಶೇಪ್‌ನ ಮಧ್ಯದಲ್ಲಿ ಎನಾಮಲ್ ಪೇಂಟ್‌ನಿಂದ ಕಂಗೊಳಿಸುವ ನವಿಲು ಡಿಸೈನ್ ಲಾಕೆಟ್ ಸಿಂಪಲ್ ಆಗಿ, ಸುಂದರವಾಗಿ ಕಾಣುತ್ತದೆ. ಇದು ಲೈಟ್ ವೆಯಿಟ್‌ನಲ್ಲಿ ಸಿಗುತ್ತದೆ.

Image credits: pinterest
Kannada

ಕೃಷ್ಣನ ಡಿಸೈನ್ ಲಾಕೆಟ್

ರೌಂಡ್ ಶೇಪ್‌ನ ಮಧ್ಯದಲ್ಲಿ ಕೃಷ್ಣನ ಮೂರ್ತಿ ಹಾಗೂ ಸುತ್ತಲೂ ಹರಳುಗಳನ್ನು ಹೊಂದಿರುವ ಈ ಲಾಕೆಟ್ ಟ್ರೆಡಿಷನಲ್ ಲುಕ್ ನೀಡುತ್ತದೆ. ಇದನ್ನು ಗಂಡು, ಹೆಣ್ಣು ಇಬ್ಬರೂ ಧರಿಸಬಹುದು.

Image credits: pinterest
Kannada

ಹಾರ್ಟ್ ಶೇಪ್ ಲಾಕೆಟ್

ಹಾರ್ಟ್ ಶೇಪ್ ಲಾಕೆಟ್ ಹಾಗೂ ಸ್ನೇಕ್ ಡಿಸೈನ್ ಚೈನ್ ಕಾಂಬಿನೇಷನ್ ಅದ್ಭುತವಾಗಿರುತ್ತದೆ. ಈ ಸುಂದರವಾದ ಲಾಕೆಟ್ ಅನ್ನು ಕೇವಲ 2 ಗ್ರಾಂ ತೂಕದಲ್ಲಿ ಮಾಡಿಸಬಹುದು.

Image credits: PINTEREST
Kannada

ರಂಗೋಲಿ ಸ್ಟೈಲ್ ಲಾಕೆಟ್

ಮಧ್ಯದಲ್ಲಿ ಹೂವು ಹಾಗೂ ಸುತ್ತಲೂ ರಂಗೋಲಿ ಸ್ಟೈಲ್ ಡಿಸೈನ್ ಹೊಂದಿರುವ ಈ ಲಾಕೆಟ್ ಧರಿಸಿದರೆ ತುಂಬಾ ಆಕರ್ಷಕವಾಗಿ ಕಾಣುತ್ತದೆ. ವಿಶೇಷ ಸಂದರ್ಭಗಳಿಗೆ ಇದು ಬೆಸ್ಟ್ ಆಪ್ಷನ್.

Image credits: pinterest
Kannada

ಟಿಯರ್ ಡ್ರಾಪ್ ಡಿಸೈನ್ ಲಾಕೆಟ್

ಟಿಯರ್ ಡ್ರಾಪ್ ಡಿಸೈನ್‌ನಲ್ಲಿರುವ ಈ ಲಾಕೆಟ್, ಸಣ್ಣ ಚೈನ್ ಹಾಗೂ ಮ್ಯಾಚಿಂಗ್ ಕಿವಿಯೋಲೆಗಳ ಜೊತೆ ಸೂಪರ್ ಆಗಿರುತ್ತದೆ. ಇದನ್ನು ನಿಮ್ಮ ಬಜೆಟ್‌ನಲ್ಲೇ ಖರೀದಿಸಬಹುದು.

Image credits: pinterest

Halter Neck Blouse: ಸೀರೆಗೆ ಟ್ರೆಂಡಿ ಲುಕ್ ನೀಡುವ ಸೂಪರ್ ಡಿಸೈನ್‌ಗಳು..!

Kundan Jhumka: ಪ್ಲೇನ್ ಜುಮ್ಕಾಗಳಿಗೆ ಬೈ ಬೈ; ಸೀರೆಗೆ ಮ್ಯಾಚ್ ಆಗೋ ಈ ಕುಂದನ್ ಜುಮ್ಕಾ ನೋಡಿ!

Viral Earrings: 2026ರಲ್ಲಿ ವೈರಲ್ ಆಗುತ್ತಿರುವ ಟಾಪ್ 5 ಇಯರ್‌ರಿಂಗ್ಸ್, ಇಲ್ಲಿದೆ ಮಾಹಿತಿ

Necklace Designs: ಮದುವೆ ಸೀಸನ್‌ನಲ್ಲಿ ಸೀರೆ ಜೊತೆ ಇಂಥ ನೆಕ್ಲೇಸ್ ಹಾಕಿ; ಎಲ್ಲರ ಕಣ್ಣು ನಿಮ್ಮ ಮೇಲೆಯೇ!