Fashion

ಬಿಳಿ ಕೂದಲಿಗೆ ವಿದಾಯ: ಕಪ್ಪು ಕೂದಲಿಗೆ 8 ಮನೆಮದ್ದುಗಳು

ಮನೆಯಲ್ಲಿಯೇ ತಯಾರಿಸಬಹುದಾದ ಮನೆಯೌಷಧಿಗಳು ಕೂದಲನ್ನು ಕಪ್ಪಾಗಿಸುತ್ತದೆ. 

ನೆಲ್ಲಿಕಾಯಿ ಮತ್ತು ತೆಂಗಿನ ಎಣ್ಣೆ

ನೆಲ್ಲಿಕಾಯಿ ಕೂದಲನ್ನು ಕಪ್ಪಾಗಿಡುತ್ತದೆ. ನೆಲ್ಲಿಕಾಯಿ ಮತ್ತು ತೆಂಗಿನ ಎಣ್ಣೆ ಸೇರಿಸಿ, ಕೂದಲಿನ ಬುಡಕ್ಕೆ ಮಸಾಜ್ ಮಾಡಿ. ರಾತ್ರಿಯಿಡೀ ಹಾಗೆಯೇ ಬಿಟ್ಟು ಬೆಳಗ್ಗೆ ತೊಳೆಯಿರಿ.

ಕರಿಬೇವಿನ ಎಲೆ ಮತ್ತು ತೆಂಗಿನ ಎಣ್ಣೆ

ಕರಿಬೇವಿನ ಎಲೆಯಲ್ಲಿರುವ ಅಂಶಗಳು ಕೂದಲಿಗೆ ನೈಸರ್ಗಿಕ ಬಣ್ಣ ನೀಡುತ್ತದೆ. ಕರಿಬೇವಿನ ಎಲೆ ತೆಂಗಿನ ಎಣ್ಣೆಯಲ್ಲಿ ಕುದಿಸಿ ತಣ್ಣಗಾಗಿಸಿ. ಈ ಎಣ್ಣೆಯನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ಸ್ವಲ್ಪ ಸಮಯದ ನಂತರ ತೊಳೆಯಿರಿ.

ಈರುಳ್ಳಿ ರಸ

ಈರುಳ್ಳಿ ರಸ ಕೂದಲು ಬಿಳಿಯಾಗುವ ಸಮಸ್ಯೆಯನ್ನು ದೂರ ಮಾಡುತ್ತದೆ. ಈರುಳ್ಳಿ ತುರಿದು ರಸ ತೆಗೆಯಿರಿ. ಈ ರಸವನ್ನು ಕೂದಲಿನ ಬುಡಕ್ಕೆ ಹಚ್ಚಿ 30-45 ನಿಮಿಷಗಳ ನಂತರ ಶಾಂಪೂ ಬಳಸಿ ತೊಳೆಯಿರಿ.

ಮೆಹಂದಿ ಮತ್ತು ಕಾಫಿ ಮಿಶ್ರಣ

ಮೆಹಂದಿ ಮತ್ತು ಕಾಫಿ ಪೇಸ್ಟ್ ಕೂಡ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ಮೆಹಂದಿಗೆ ಸ್ವಲ್ಪ ಕಾಫಿ ಸೇರಿಸಿ ನೀರಿನಲ್ಲಿ ಕಲಸಿ ಪೇಸ್ಟ್ ಮಾಡಿ. ಇದನ್ನು ಕೂದಲಿಗೆ ಹಚ್ಚಿ 2-3 ಗಂಟೆಗಳ ನಂತರ ತೊಳೆಯಿರಿ.

ಎಳ್ಳು ಮತ್ತು ಅಗಸೆ ಬೀಜ

ಕಪ್ಪು ಎಳ್ಳು ಮತ್ತು ಅಗಸೆ ಬೀಜಗಳನ್ನು ಮಿಶ್ರಣ ಮಾಡಿ ಪುಡಿ ಮಾಡಿ. ನಂತರ ಇದರ ಪೇಸ್ಟ್ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ. ನಂತರ ತೊಳೆಯಿರಿ. ಇದು ಕೂದಲನ್ನು ಕಪ್ಪಾಗಿಸಿ, ಬಲವಾಗಿಡುತ್ತದೆ.

ಚಹಾ ನೀರು

ಚಹಾ ನೀರು ಕೂಡ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ಚಹಾವನ್ನು ನೀರಲ್ಲಿ ಕುದಿಸಿ ತಣ್ಣಗಾದ ನಂತರ ಕೂದಲಿಗೆ ಹಚ್ಚಿ. 30 ನಿಮಿಷಗಳ ನಂತರ ಶಾಂಪೂ ಬಳಸಿ ತೊಳೆಯಿರಿ. ಇದು ಕೂದಲಿಗೆ ನೈಸರ್ಗಿಕ ಬಣ್ಣ ನೀಡುತ್ತದೆ.

ಕರಿಬೇವು ಮತ್ತು ಮೊಸರು

ಕರಿಬೇವಿನ ಪೇಸ್ಟ್ ಮಾಡಿ ಅದಕ್ಕೆ ಮೊಸರು ಸೇರಿಸಿ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ. 30-40 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ತೊಳೆಯಿರಿ. ಇದು ಕೂದಲನ್ನು ಕಪ್ಪಾಗಿಸಿ, ಹೊಳಪು ನೀಡುತ್ಸದೆ.

ಆಲೂಗಡ್ಡೆ ಸಿಪ್ಪೆ ನೀರು

ಆಲೂಗಡ್ಡೆ ಸಿಪ್ಪೆಯನ್ನು ಕುದಿಸಿ ಅದರ ನೀರನ್ನು ಕೂದಲಿಗೆ ಹಚ್ಚಿ. ಇದು ಕೂದಲನ್ನು ನಿಧಾನವಾಗಿ ಕಪ್ಪಾಗಿಸುತ್ತದೆ ಮತ್ತು ಅವುಗಳಿಗೆ ನೈಸರ್ಗಿಕವಾಗಿ ಬಣ್ಣ ನೀಡುತ್ತದೆ.

ನಿಮ್ಮ ಅಮ್ಮ ಅಜ್ಜಿಗೆ ಗಿಫ್ಟ್ ಮಾಡಿ ಸುಧಾಮೂರ್ತಿ ಸ್ಟೈಲ್ ಸೀರೆ

Middle Classಗೂ ಸೂಟ್ ಆಗೋ ಸಾರಾ ಅಲಿ ಖಾನ್ ಸ್ಟೈಲ್‌ನ 10 ಕಾಟನ್ ಸೂಟ್ಸ್

ಹೈಟ್ ಇದ್ದೀರೆಂದ್ರೆ ಈ ಬ್ಲೌಸ್ ನಿಮಗೆ ಪರ್ಫೆಕ್ಟ್ ಮ್ಯಾಚ್!

ವಟ ವಟ ಅಂತ ಮಾತಾಡೋ ಕಂಗನಾಳ ಲಕ ಲಕ ಹೊಳೆಯೋ ಸ್ಕಿನ್ ಸೀಕ್ರೆಟ್ಸ್!