ರಶ್ಮಿಕಾ ಸೌತ್‌ನಲ್ಲಿ ಮಾತ್ರವಲ್ಲದೆ, ಬಾಲಿವುಡ್‌ನಿಂದ ಸಾಕಷ್ಟು ಅವಕಾಶ ಪಡೆಯುತ್ತಿದ್ದಾರೆ. ಏತನ್ಮಧ್ಯೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಕೇಳಿಬರುತ್ತಿತ್ತು.
entertainment Dec 17 2025
Author: Ashwini HR Image Credits:Instagram
Kannada
ಗಾಸಿಪ್ ನಿಜ ಮಾಡಿದ ರಶ್ಮಿಕಾ
ಆದರೆ ಇತ್ತೀಚೆಗೆ ಆಪ್ತರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್ ಮಾಡಿಕೊಳ್ಳುವ ಮೂಲಕ ಆ ಗಾಸಿಪ್ ನಿಜ ಮಾಡಿದರು ರಶ್ಮಿಕಾ. ಎಂಗೇಜ್‌ಮೆಂಟ್ ಕಾರ್ಯಕ್ರಮದಲ್ಲಿ ಹತ್ತಿರದ ಸಂಬಂಧಿಕರು, ಸ್ನೇಹಿತರು ಮಾತ್ರ ಭಾಗವಹಿಸಿದ್ದರು.
Image credits: Instagram
Kannada
ಅಧಿಕೃತ ಮಾಹಿತಿ ಇಲ್ಲ
ರಶ್ಮಿಕಾ - ವಿಜಯ್ ದೇವರಕೊಂಡ ವಿವಾಹವು ಫೆಬ್ರವರಿ 26, 2026 ರಂದು ಉದಯಪುರ ಅರಮನೆಯಲ್ಲಿ ನಡೆಯಲಿದೆ ಎಂಬ ಸುದ್ದಿ ಅಂತರ್ಜಾಲದಲ್ಲಿ ಹರಡಿದೆ. ಆದರೆ ಇಲ್ಲಿಯವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
Image credits: Instagram
Kannada
ಫೋಟೋ ಶೇರ್ ಮಾಡಿದ ರಶ್ಮಿಕಾ
ಹೀಗಿರುವಾಗ ರಶ್ಮಿಕಾ ಹೊಸ ಫೋಟೋ ನೋಡಿದ ಅಭಿಮಾನಿಗಳು ಈಗ ಮತ್ತೊಂದು ರೂಮರ್ಸ್ ಹರಡುತ್ತಿದ್ದಾರೆ. ಆಗಿದ್ದಿಷ್ಟು..ರಶ್ಮಿಕಾ ಗೆಳತಿಯರೊಂದಿಗೆ ಶ್ರೀಲಂಕಾ ಪ್ರವಾಸಕ್ಕೆ ಹೋಗಿದ್ದು, ಫೋಟೋ ಶೇರ್ ಮಾಡಿದ್ದಾರೆ.
Image credits: Instagram
Kannada
ಇದು ಬ್ಯಾಚುಲರ್ ಪಾರ್ಟಿ
ಆದರೆ ಈ ಪೋಸ್ಟ್ ನೋಡಿ ಅಭಿಮಾನಿಗಳು ಇದು ಕೇವಲ ಪ್ರವಾಸವಲ್ಲ, ಫೆಬ್ರವರಿಯಲ್ಲಿ ವಿಜಯ್ ದೇವರಕೊಂಡ ಅವರನ್ನು ಮದುವೆಯಾಗುತ್ತಿರುವುದರಿಂದ ಬ್ಯಾಚುಲರ್ ಪಾರ್ಟಿ ಮಾಡಲುಹೋಗಿದ್ದಾರೆ ಎಂದು ರೂಮರ್ಸ್ ಹರಡುತ್ತಿದ್ದಾರೆ.
Image credits: Instagram
Kannada
ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಬ್ಯುಸಿ
ರಶ್ಮಿಕಾ 'ಕಿರಿಕ್ ಪಾರ್ಟಿ' ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಪ್ರಸ್ತುತ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ನಟಿಸುವುದರಲ್ಲಿ ನಿರತರಾಗಿದ್ದಾರೆ. ಬ್ಯುಸಿ ವೇಳಾಪಟ್ಟಿಯ ನಡುವೆ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ.
Image credits: Instagram
Kannada
ಅಭಿಮಾನಿಗಳು ಹೇಳಿದ್ದೇನು?
ಆದರೆ ಅವರು ಬ್ಯಾಚುಲರ್ ಪಾರ್ಟಿಗಾಗಿಯೇ ಹೋಗಿದ್ದಾರೆ ಎಂದು ಅವರ ಅಭಿಮಾನಿಗಳು ದೃಢವಾಗಿ ಹೇಳುತ್ತಿರುವುದನ್ನು ಕಾಮೆಂಟ್ ಸೆಕ್ಷನ್‌ನಲ್ಲಿ ನೋಡಬಹುದು.