ನನ್ನನ್ನು ನೋಡಲು ಎಲ್ಲರಿಗೂ ಅನುಮತಿ ಇಲ್ಲ: ಹೊಸ ಕಂಡೀಷನ್ ಹಾಕಿದ ಆ್ಯಂಕರ್ ರಶ್ಮಿ!
ತೆಲುಗಿನ ಜನಪ್ರಿಯ ಕಾಮಿಡಿ ಶೋ 'ಜಬರ್ದಸ್ತ್' ಮೂಲಕ ರಶ್ಮಿ ಗೌತಮ್ ಮನೆಮಾತಾದರು. ಸುಮಾರು 12 ವರ್ಷಗಳಿಂದ ಈ ಶೋಗೆ ಆ್ಯಂಕರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದೇ ಶೋ ರಶ್ಮಿಗೆ ದೊಡ್ಡ ಹೆಸರು ತಂದುಕೊಟ್ಟಿತು.
entertainment May 04 2026
Author: Govindaraj S Image Credits:instagram/@rashmigautam
Kannada
ರಶ್ಮಿ ಕ್ರೇಜ್ ಕಡಿಮೆಯಾಯ್ತಾ?
ಆದರೆ, ಇತ್ತೀಚೆಗೆ ರಶ್ಮಿ ಅವರ ಕ್ರೇಜ್ ಕಡಿಮೆಯಾಗುತ್ತಿದೆ ಎನ್ನಲಾಗುತ್ತಿದೆ. ಒಂದು ಕಡೆ 'ಜಬರ್ದಸ್ತ್' ಶೋನ ಜನಪ್ರಿಯತೆಯೂ ಕುಸಿದಿದೆ. ವೀಕ್ಷಕರ ಸಂಖ್ಯೆ ಕಡಿಮೆಯಾಗಿದ್ದು, ರೇಟಿಂಗ್‌ನಲ್ಲೂ ಶೋ ಹಿಂದೆ ಬಿದ್ದಿದೆ.
Image credits: instagram/@rashmigautam
Kannada
ಜಬರ್ದಸ್ತ್ ಜನಪ್ರಿಯತೆ ಕುಸಿಯಲು ಕಾರಣವೇನು?
ಶೋನ ಪ್ರಮುಖ ಹಾಸ್ಯನಟರು ಕಾರ್ಯಕ್ರಮವನ್ನು ತೊರೆದಿದ್ದು ಇದಕ್ಕೆ ಮುಖ್ಯ ಕಾರಣ ಎನ್ನಬಹುದು. ಅದೇ ಸಮಯದಲ್ಲಿ, 'ಜಬರ್ದಸ್ತ್'ಗಿಂತಲೂ ಹೆಚ್ಚು ಮನರಂಜನೆ ನೀಡುವ ಹೊಸ ಶೋಗಳು ಬಂದಿರುವುದು ಕೂಡ ಜನಪ್ರಿಯತೆ ಕುಸಿಯಲು ಕಾರಣ.
Image credits: instagram/@rashmigautam
Kannada
ಹೊಸ ಫೋಟೋಗಳಿಂದ ಸದ್ದು ಮಾಡಿದ ರಶ್ಮಿ
ಈ ನಡುವೆ, ರಶ್ಮಿ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಆಗಾಗ ತಮ್ಮ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ನೇರಳೆ ಬಣ್ಣದ ಸೀರೆಯಲ್ಲಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.
Image credits: instagram/@rashmigautam
Kannada
ರಶ್ಮಿ ಹಾಕಿದ ಹೊಸ ಕಂಡೀಷನ್ಸ್
ಈ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಆದರೆ ಈ ಫೋಟೋಗಳನ್ನು ಶೇರ್ ಮಾಡುವಾಗ ರಶ್ಮಿ ಒಂದು ಕಂಡೀಷನ್ ಹಾಕಿದ್ದಾರೆ. 'All eyes, no permissions' (ಎಲ್ಲಾ ಕಣ್ಣುಗಳು, ಅನುಮತಿ ಇಲ್ಲ) ಎಂದು ಪೋಸ್ಟ್ ಮಾಡಿದ್ದಾರೆ.
Image credits: instagram/@rashmigautam
Kannada
ರಶ್ಮಿ ಪೋಸ್ಟ್‌ಗೆ ನೆಟ್ಟಿಗರ ಪ್ರತಿಕ್ರಿಯೆ
ತನ್ನ ಸೌಂದರ್ಯವನ್ನು ನೋಡಲು ಎಲ್ಲರಿಗೂ ಅನುಮತಿ ಇಲ್ಲ ಎಂದು ಅವರು ಪರೋಕ್ಷವಾಗಿ ಹೇಳಿದ್ದಾರೆ. ಸದ್ಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ನೆಟ್ಟಿಗರು ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.