Kannada

ದೊಡ್ಡಪ್ಪ ಚಿರಂಜೀವಿ ಕನಸು ನನಸು ಮಾಡಿದ ನಿಹಾರಿಕಾ: ಅಷ್ಟಕ್ಕೂ ಆಗಿದ್ದೇನು?

ಮೆಗಾ ಡಾಟರ್ ನಿಹಾರಿಕಾ ಒಂದು ಕಾಲದಲ್ಲಿ ಹೀರೋಯಿನ್ ಆಗಿ ನಟಿಸಿದ್ದರು. ಮೂರ್ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿದರೂ ಒಂದೂ ಯಶಸ್ಸು ಕಾಣಲಿಲ್ಲ.
Kannada

ಎರಡೇ ವರ್ಷಕ್ಕೆ ಮುರಿದ ಮದುವೆ

ನಂತರ ಮದುವೆಯಾಗಿ ಜೀವನದಲ್ಲಿ ಸೆಟಲ್ ಆಗಿದ್ದರು. ಆದರೆ ದಾಂಪತ್ಯ ಜೀವನ ಹೆಚ್ಚು ಕಾಲ ಉಳಿಯಲಿಲ್ಲ. ಮದುವೆಯಾದ ಎರಡೇ ವರ್ಷಕ್ಕೆ ವಿಚ್ಛೇದನ ಪಡೆದರು.
Image credits: instagram/@niharikakonidela
Kannada

ನಿರ್ಮಾಪಕಿಯಾಗಿ ಬ್ಯುಸಿಯಾದ ನಿಹಾರಿಕಾ

ನಿಹಾರಿಕಾ ಈಗ ನಿರ್ಮಾಪಕಿಯಾಗಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ 'ಕಮಿಟಿ ಕುರ್ರೋಳ್ಳು' ಎಂಬ ಚಿತ್ರವನ್ನು ನಿರ್ಮಿಸಿದ್ದು, ಅದು ದೊಡ್ಡ ಯಶಸ್ಸು ಕಂಡಿತ್ತು.
Image credits: instagram/@niharikakonidela
Kannada

ನಿರ್ಮಾಪಕಿಯಾಗಿ ಮತ್ತೊಂದು ಸಿನಿಮಾ

ಈಗ ನಿಹಾರಿಕಾ ಮತ್ತೊಂದು ಸಿನಿಮಾ ನಿರ್ಮಿಸುತ್ತಿದ್ದಾರೆ. ಸಂಗೀತ್ ಶೋಭನ್ ನಾಯಕರಾಗಿ ನಟಿಸುತ್ತಿರುವ ಈ ಸಿನಿಮಾ ಚಿತ್ರೀಕರಣ ಹಂತದಲ್ಲಿದೆ. ಸತತವಾಗಿ ಸಿನಿಮಾ ನಿರ್ಮಿಸಿ ತಮ್ಮ ಅಭಿರುಚಿಯನ್ನು ಸಾಬೀತುಪಡಿಸುತ್ತಿದ್ದಾರೆ.

Image credits: instagram/@niharikakonidela
Kannada

ಚಿರಂಜೀವಿ ಅವರ ಆಸೆ

ಗೋವಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ತೆಲುಗು ಸಿನಿಮಾಗಳು ಪ್ರದರ್ಶನ ಕಾಣುತ್ತಿಲ್ಲ, ನಮ್ಮ ಸಿನಿಮಾಗಳನ್ನು ಅಲ್ಲಿ ನೋಡಬೇಕು ಎಂಬುದು ಚಿರಂಜೀವಿ ಅವರ ಬಹುಕಾಲದ ಆಸೆಯಾಗಿತ್ತಂತೆ. ಅದನ್ನು ನಿಹಾರಿಕಾ ಈಡೇರಿಸಿದ್ದಾರೆ.
Image credits: instagram/@niharikakonidela
Kannada

ದೊಡ್ಡಪ್ಪನ ಆಸೆ ಈಡೇರಿಸಿದ ನಿಹಾರಿಕಾ

ನಿಹಾರಿಕಾ ನಿರ್ಮಿಸಿದ ಕಮಿಟಿ ಕುರ್ರೋಳ್ಳು ಸಿನಿಮಾ ಇತ್ತೀಚೆಗೆ ಗೋವಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡಿದೆ. ಈ ಬಗ್ಗೆ ಸಂತಸ ಹಂಚಿಕೊಂಡ ನಿಹಾರಿಕಾ, ದೊಡ್ಡಪ್ಪನ ಆಸೆ ಈಡೇರಿಸಿದ್ದು ಖುಷಿ ತಂದಿದೆ ಎಂದಿದ್ದಾರೆ.

Image credits: instagram/@niharikakonidela

ಸೈರಾಟ್ ನಟಿ ಲೈಫಲ್ಲಿ ಹೊಸ ರೋಮಿಯೋ ಎಂಟ್ರಿ: ಗುಟ್ಟು ರಟ್ಟು ಮಾಡಿದ ರಿಂಕು!

ಹೀಗೆ ಹೇಳೋರು ಮಾತ್ರ ಸಿಗುತ್ತಿಲ್ಲವಲ್ಲ: ನಟಿ ದಿವಿ ವಾದ್ತ್ಯಾ ಬೇಸರಕ್ಕೆ ಕಾರಣವೇನು?

ಬಾಲಯ್ಯ ಕೊಟ್ಟ ಹಿಟ್ ಬಿಟ್ಟರೆ ನಟಿ ಪ್ರಗ್ಯಾ ನಟಿಸಿದ ಉಳಿದ ಸಿನಿಮಾಗಳೆಲ್ಲಾ ಫ್ಲಾಪ್

ಕನ್ನಡದ ಹುಡುಗಿ ತೆಲುಗಿನಲ್ಲಿ ಸಖತ್ ಫೇಮಸ್, ಯಾರು ಈ ಸುಂದರಿ