ಏಕದಿನ ಆಡಿ ಬಿಸಿಸಿಐನಿಂದ ಕೋಟಿ ಸಂಭಾವನೆ ಪಡೆಯುವ ವಿರಾಟ್ ಕೊಹ್ಲಿ
cricket-sports Nov 05 2025
Author: Naveen Kodase Image Credits:stockPhoto
Kannada
ವಿರಾಟ್ ಕೊಹ್ಲಿ ಹುಟ್ಟುಹಬ್ಬ
ಭಾರತ ಏಕದಿನ ತಂಡದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ 37 ವರ್ಷ. ಸದ್ಯ ಅವರು ಸಾಕಷ್ಟು ಚರ್ಚೆಯಲ್ಲಿದ್ದಾರೆ. ಇದಕ್ಕೆ ಮುಖ್ಯ ಕಾರಣ ಆಸ್ಟ್ರೇಲಿಯಾ ಎದುರಿನ ಕೊನೆಯ ಪಂದ್ಯದಲ್ಲಿನ ಅವರ ಅದ್ಭುತ ಪ್ರದರ್ಶನ.
Image credits: stockPhoto
Kannada
ಆಸ್ಟ್ರೇಲಿಯಾದಲ್ಲಿ ಕೊನೆಯ ಏಕದಿನ ಪಂದ್ಯ
ವಿರಾಟ್ ಕೊಹ್ಲಿ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದರು. ಇದಕ್ಕೂ ಮುನ್ನ ಇದೇ ಮೈದಾನದಲ್ಲಿ ಕೊನೆಯ ಟೆಸ್ಟ್ ಕ್ರಿಕೆಟ್ ಆಡಿದ್ದರು.
Image credits: stockPhoto
Kannada
ಟಿ20 ಮತ್ತು ಟೆಸ್ಟ್‌ನಿಂದ ನಿವೃತ್ತಿ
ವಿರಾಟ್ ಕೊಹ್ಲಿ ಈಗಾಗಲೇ ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಇದೀಗ ಏಕದಿನ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ.
Image credits: stockPhoto
Kannada
ವಿರಾಟ್ ಕೊಹ್ಲಿಯ ಬಿಸಿಸಿಐ ಒಪ್ಪಂದ
ಬಿಸಿಸಿಐನ ಕೇಂದ್ರೀಯ ಒಪ್ಪಂದದಲ್ಲಿ ವಿರಾಟ್ ಕೊಹ್ಲಿ 'ಎ+' ಶ್ರೇಣಿಯಲ್ಲಿದ್ದಾರೆ. ಟೆಸ್ಟ್ ಹಾಗೂ ಟಿ20 ನಿವೃತ್ತಿಯ ಹೊರತಾಗಿಯೂ ಅವರು ಇದೇ ಶ್ರೇಣಿಯಲ್ಲಿ ಮುಂದುವರಿಯಲಿದ್ದಾರೆ ಎಂದು ಹೇಳಿತ್ತು.
Image credits: stockPhoto
Kannada
ಸಂಭಾವನೆ ಎಷ್ಟು ಸಿಗುತ್ತದೆ?
ವಿರಾಟ್ ಕೊಹ್ಲಿ 'ಎ+' ಶ್ರೇಣಿಯಲ್ಲಿದ್ದು, ಬಿಸಿಸಿಐನಿಂದ ವಾರ್ಷಿಕ 7 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ.
Image credits: stockPhoto
Kannada
ಒಂದು ಪಂದ್ಯದ ಶುಲ್ಕ ಎಷ್ಟು?
ಕಿಂಗ್ ವಿರಾಟ್ ಕೊಹ್ಲಿ ವಾರ್ಷಿಕ 7 ಕೋಟಿ ರೂಪಾಯಿ ಸಂಬಳ ಪಡೆಯಲಿದ್ದಾರೆ. ಇದಲ್ಲದೆ, ಅವರು ಈಗ ಏಕದಿನ ಕ್ರಿಕೆಟ್ ಮಾತ್ರ ಆಡಲಿದ್ದು, ಒಂದು ಪಂದ್ಯಕ್ಕೆ 6 ಲಕ್ಷ ರೂಪಾಯಿ ಮ್ಯಾಚ್ ಫೀ ಜೇಬಿಗಿಳಿಸಿಕೊಳ್ಳುತ್ತಾರೆ.
Image credits: stockPhoto
Kannada
ವಿರಾಟ್ ಕೊಹ್ಲಿಯ ಗತ್ತು
ಟೆಸ್ಟ್ ಮತ್ತು ಟಿ20 ಮಾದರಿಗಳನ್ನು ಆಡದಿದ್ದರೂ, ವಿರಾಟ್ ಕೊಹ್ಲಿಗೆ ಬಿಸಿಸಿಐನಿಂದ 7 ಕೋಟಿ ರೂ. ನೀಡಲಾಗುತ್ತದೆ. ಈ ಕಿಂಗ್ ಆಟಗಾರನ ಗತ್ತು ಎಷ್ಟಿದೆ ಎಂಬುದನ್ನು ಇದರಿಂದಲೇ ಊಹಿಸಬಹುದು.