Cricket
ಚಹಲ್ 33ನೇ ಹುಟ್ಟುಹಬ್ಬಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿವೆ
23 ಜುಲೈ 2023ರಂದು ಟೀಂ ಇಂಡಿಯಾ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್ 33ನೇ ಜನ್ಮದಿನಕ್ಕೆ ಕಾಲಿರಿಸಿದ್ದಾರೆ.
ಚಹಲ್, 2016ರಲ್ಲಿ ಎಂ ಎಸ್ ಧೋನಿ ನಾಯಕತ್ವದಲ್ಲಿ ಜಿಂಬಾಬ್ವೆ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.
ಟಿ20 ಕ್ರಿಕೆಟ್‌ನಲ್ಲಿ 300 ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನ್ನುವ ದಾಖಲೆ ಚಹಲ್ ಹೆಸರಿನಲ್ಲಿದೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲೂ ಚಹಲ್, ಭಾರತ ಪರ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಂಡಿದ್ದಾರೆ.
ಚಹಲ್ ಇದುವರೆಗೂ ಒಟ್ಟಾರೆ 147 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 121 ಏಕದಿನ ಹಾಗೂ 91 ಟಿ20 ವಿಕೆಟ್ ಕಬಳಿಸಿದ್ದಾರೆ.
2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪರ ಚಹಲ್ 8 ಪಂದ್ಯಗಳನ್ನಾಡಿ 12 ವಿಕೆಟ್ ಕಬಳಿಸಿದ್ದರು.
ಭಾರತದ ಯಶಸ್ವಿ ಟಿ20 ಬೌಲರ್ ಆಗಿದ್ದರೂ ಸಹಾ ಯುಜುವೇಂದ್ರ ಚಹಲ್, ಇದುವರೆಗೂ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿಲ್ಲ.
ಚಹಲ್, ಕೇವಲ ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ಚೆಸ್ ಕ್ರೀಡೆಯಲ್ಲೂ ಭಾರತವನ್ನು ಪ್ರತಿನಿಧಿಸಿದ ಏಕೈಕ ಕ್ರೀಡಾಪಟು ಎನಿಸಿದ್ದಾರೆ.
Ind vs WI: ಸೆಹ್ವಾಗ್, ವೀವ್ ರಿಚರ್ಡ್ಸ್ ದಾಖಲೆ ಸರಿಗಟ್ಟಲು ಸಜ್ಜಾದ ಕೊಹ್ಲಿ
ICC World Cup 2023: ಇಲ್ಲಿದೆ ಟೀಂ ಇಂಡಿಯಾ ಸಂಪೂರ್ಣ ವೇಳಾಪಟ್ಟಿ..!
700+ ಅಂತಾರಾಷ್ಟ್ರೀಯ ವಿಕೆಟ್‌ನೊಂದಿಗೆ ಎಲೈಟ್ ಕ್ಲಬ್ ಸೇರಿದ ಅಶ್ವಿನ್..!
Ind vs WI: ಅಪ್ಪ-ಮಗನ ವಿಕೆಟ್ ಕಬಳಿಸಿ ಅಪರೂಪದ ದಾಖಲೆ ಬರೆದ ಅಶ್ವಿನ್..!