Kannada

ದಿಗ್ಗಜರ ಸಾಲಿಗೆ ಕೊಹ್ಲಿ?

ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ರನ್ ಮಷೀನ್‌ ದಿಗ್ಗಜರ ಸಾಲಿಗೆ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ.

Kannada

21 ರನ್ ಅಗತ್ಯ

ವಿರಾಟ್ ಕೊಹ್ಲಿ ಇನ್ನು ಕೇವಲ 21 ರನ್ ಬಾರಿಸಿದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 8,500 ಪೂರೈಸಲಿದ್ದಾರೆ
 

Image credits: Instagram
Kannada

ಕೊಹ್ಲಿಗೆ ಸುವರ್ಣಾವಕಾಶ

ವಿಂಡೀಸ್ ಎದುರಿನ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲೇ ಈ ದಾಖಲೆ ನಿರ್ಮಿಸಲು ಕೊಹ್ಲಿಗೆ ಸುವರ್ಣಾವಕಾಶವಿದೆ

Image credits: Instagram
Kannada

ಸೆಹ್ವಾಗ್-ರಿಚರ್ಡ್ಸ್‌ ಕ್ಲಬ್

ಕೊಹ್ಲಿ ಇನ್ನು 21 ರನ್ ಬಾರಿಸಿದರೆ, ಸರ್ ವೀವ್ ರಿಚರ್ಡ್ಸ್‌ ಹಾಗೂ ವಿರೇಂದ್ರ ಸೆಹ್ವಾಗ್ ಅವರ ಎಂಟೂವರೆ ಸಾವಿರ ರನ್ ಬಾರಿಸಿದವರ ಎಲೈಟ್ ಕ್ಲಬ್ ಸೇರಲಿದ್ದಾರೆ. 
 

Image credits: Getty
Kannada

27ನೇ ಕ್ರಿಕೆಟಿಗ

ಈ ಮೂಲಕ ವಿರಾಟ್ ಕೊಹ್ಲಿ 8500+ ಟೆಸ್ಟ್ ರನ್ ಬಾರಿಸಿದ ಜಗತ್ತಿನ 27ನೇ ಕ್ರಿಕೆಟಿಗ ಎನ್ನುವ ಹಿರಿಮೆಗೆ ಪಾತ್ರರಾಗಲಿದ್ದಾರೆ
 

Image credits: Getty
Kannada

ನಂ.1 ಸ್ಥಾನದಲ್ಲಿ ಕೊಹ್ಲಿ

ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ದಾಖಲೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್(15,921) ಅವರ ಹೆಸರಿನಲ್ಲಿದೆ.

Image credits: Getty
Kannada

ಟಾಪ್ 5 ಪಟ್ಟಿ

ಇದಾದ ಬಳಿಕ ರಿಕಿ ಪಾಂಟಿಂಗ್(13,378), ಜಾಕ್ ಕಾಲೀಸ್(13,289), ರಾಹುಲ್ ದ್ರಾವಿಡ್(13,288), ಅಲಿಸ್ಟರ್ ಕುಕ್(12,472) ಟಾಪ್‌ 5 ಪಟ್ಟಿಯಲ್ಲಿದ್ದಾರೆ
 

Image credits: Getty
Kannada

ಶತಕ ಬಾರಿಸ್ತಾರಾ ಕೊಹ್ಲಿ?

ಇನ್ನು 2018ರ ಬಳಿಕ ವಿದೇಶಿ ನೆಲದಲ್ಲಿ ಟೆಸ್ಟ್ ಶತಕದ ಬರ ಅನುಭವಿಸುತ್ತಿರುವ ಕೊಹ್ಲಿಗೆ ಇದೀಗ ಮೂರಂಕಿ ಮೊತ್ತ ದಾಖಲಿಸಲು ಸುವರ್ಣಾವಕಾಶವಿದೆ.
 

Image credits: Getty

ICC World Cup 2023: ಇಲ್ಲಿದೆ ಟೀಂ ಇಂಡಿಯಾ ಸಂಪೂರ್ಣ ವೇಳಾಪಟ್ಟಿ..!

700+ ಅಂತಾರಾಷ್ಟ್ರೀಯ ವಿಕೆಟ್‌ನೊಂದಿಗೆ ಎಲೈಟ್‌ ಕ್ಲಬ್‌ ಸೇರಿದ ಅಶ್ವಿನ್‌..!

Ind vs WI: ಅಪ್ಪ-ಮಗನ ವಿಕೆಟ್‌ ಕಬಳಿಸಿ ಅಪರೂಪದ ದಾಖಲೆ ಬರೆದ ಅಶ್ವಿನ್‌..!

ಗಿಲ್ ನಂ.3, ಯಶಸ್ವಿ ಓಪನ್ನರ್: ಯಾರು? ಯಾವ ಕ್ರಮಾಂಕ? ರೋಹಿತ್ ಹೇಳಿದ್ದೇನು?