Cricket
ರವಿಚಂದ್ರನ್ ಅಶ್ವಿನ್ ತಾವೇಕೆ ವಿಶ್ವಶ್ರೇಷ್ಠ ಬೌಲರ್ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಡೊಮಿನಿಕಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಅಶ್ವಿನ್ ವೆಸ್ಟ್ ಇಂಡೀಸ್ ಎದುರು 5 ವಿಕೆಟ್ ಕಬಳಿಸಿ ಮಿಂಚಿದರು
ಅಶ್ವಿನ್, ವಿಂಡೀಸ್ ಎಡಗೈ ಆರಂಭಿಕ ಬ್ಯಾಟರ್ ತೇಜ್‌ನಾರಯಣ್ ಚಂದ್ರಪಾಲ್ ವಿಕೆಟ್ ಕಬಳಿಸಿ ಆರಂಭಿಕ ಯಶಸ್ಸು ತಂದುಕೊಟ್ಟರು.
ಅಶ್ವಿನ್ ಅವರ ಮಾಂತ್ರಿಕ ಸ್ಪಿನ್ ದಾಳಿಗೆ ತೇಜ್‌ನಾರಾಯಣ್ ಕ್ಲೀನ್ ಬೌಲ್ಡ್ ಆದರು. ಒಂದು ಕ್ಷಣ ಯುವ ಬ್ಯಾಟರ್‌ಗೆ ಇದು ನಂಬಲೂ ಸಾಧ್ಯವಾಗಲಿಲ್ಲ.
ತೇಜ್‌ನಾರಾಯಣ್ ವಿಕೆಟ್ ಕಬಳಿಸುವ ಮೂಲಕ ಅಶ್ವಿನ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದರು.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಂದೆ ಹಾಗೂ ಮಗನ ವಿಕೆಟ್ ಕಬಳಿಸಿದ ಭಾರತದ ಮೊದಲ ಬೌಲರ್ ಎನ್ನುವ ಹೆಗ್ಗಳಿಕೆ ಅಶ್ವಿನ್ ಪಾಲಾಗಿದೆ.
ಈ ಮೊದಲು ಅಶ್ವಿನ್, ತೇಜ್‌ನಾರಾಯಣ್ ತಂದೆ, ವಿಂಡೀಸ್‌ನ ದಿಗ್ಗಜ ಕ್ರಿಕೆಟಿಗ ಶಿವನಾರಾಯಣ್ ಚಂದ್ರಪಾಲ್ ಅವರನ್ನು 2011ರಲ್ಲಿ ಬಲಿಪಡೆದಿದ್ದರು.
ಇದಾದ ಬಳಿಕ 3ನೇ ವಿಕೆಟ್ ಕಬಳಿಸಿ 700+ ಅಂತಾರಾಷ್ಟ್ರೀಯ ವಿಕೆಟ್ ಕಬಳಿಸಿದ ಭಾರತದ 3ನೇ ಬೌಲರ್ ಎನ್ನುವ ಹಿರಿಮೆಗೆ ಅಶ್ವಿನ್ ಪಾತ್ರರಾದರು.
ಗಿಲ್ ನಂ.3, ಯಶಸ್ವಿ ಓಪನ್ನರ್: ಯಾರು? ಯಾವ ಕ್ರಮಾಂಕ? ರೋಹಿತ್ ಹೇಳಿದ್ದೇನು?
Ind vs WI: ವಿದೇಶದಲ್ಲಿ ಟೆಸ್ಟ್ ಶತಕದ ಬರ ನೀಗಿಸಿಕೊಳ್ತಾರಾ ಕೊಹ್ಲಿ?
ಕೆರಿಬಿಯನ್ ನಾಡಲ್ಲಿ ಕೊಹ್ಲಿ ರೆಕಾರ್ಡ್ ಹೇಗಿದೆ?
ಸೌರವ್ ಗಂಗೂಲಿ 51ನೇ ಹುಟ್ಟುಹಬ್ಬ: ದಾದಾ ಹೆಜ್ಜೆಗುರುತುಗಳಿವು..!